ಬೆಂಗಳೂರು: (ಜ.7) Weekend Curfew: ಕೂರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಧಿಸಿರುವ ವೀಕೆಂಡ ಕರ್ಫ್ಯೂ ಹಿಂದಿನಿಂದ ಜಾರಿಯಾಗಲಿದೆ.
ರಾಜ್ಯದಲ್ಲಿ ಮತ್ತೆ ಲಾಕ್ ಡೌನ್, ಕರ್ಫ್ಯೂ ನಿಯಮಗಳನ್ನು ಜಾರಿಗೆ ತರುವುದಿಲ್ಲ ಎಂದು ಜನರ ನಂಬಿಕೆಗಳು ಸುಳ್ಳಾಗುತ್ತಿದೆ. ಮತ್ತೆ ರಾಜ್ಯದಲ್ಲಿ ವೀಕೆಂಡ ಕರ್ಫ್ಯೂ ಜಾರಿಯಾಗಿರುವುದು ಜನರಿಗೆ ಆತಂಕ ಕೂಡ ಹೆಚ್ಚಾಗಿದೆ. ಇಂದು ರಾತ್ರಿಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗುತ್ತಿದೆ. ಇಂದು ರಾತ್ರಿ 8:00 ಸೋಮವಾರ ಬೆಳಗ್ಗೆ 5 ಗಂಟೆಯ ವರೆಗೂ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ.

ರಾಜ್ಯ ಸರ್ಕಾರ ಮುಂಜಾಗೃತ ಕ್ರಮವಾಗಿ ತೆಗೆದುಕೊಂಡಿರುವ ನಿರ್ಧಾರವನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಹಾಗಾದ್ರೆ ವೀಕೆಂಡ್ ಕರ್ಫ್ಯೂ ವೇಳೆ ಯಾವುದಕ್ಕೆಲ್ಲ ಅವಕಾಶ ಹಾಗೂ ಯಾವುದಕ್ಕೆಲ್ಲ ಎಂಬುದರ ಕುರಿತು ಮುಂದೆ ಓದಿ.
ಯಾವುದಕ್ಕೆಲ್ಲ ವಿನಾಯಿತಿ? ✅
ಮೆಡಿಕಲ್ ಶಾಪ್
ಹಣ್ಣು-ತರಕಾರಿ
ದಿನಸಿ
ಆಸ್ಪತ್ರೆ
ಮೆಟ್ರೋ (50%)
ಕೆಎಸ್ಆರ್ಟಿಸಿ (50%)
ಹೋಂ ಡೆಲಿವರಿ
ಐಟಿ ಕಂಪನಿ
ಕೈಗಾರಿಕೆ
ಬೀದಿ ಬದಿ ವ್ಯಾಪಾರ
ರೈಲು, ವಿಮಾನ, ಟ್ಯಾಕ್ಸಿ
ಆಟೋ
ಹೋಟಲ್ ಪಾರ್ಸೆಲ್ ಗೆ ಅವಕಾಶ
ಸರ್ಕಾರಿ ಕಚೇರಿ
ಬ್ಯಾಂಕ್
ಯಾವುದಕ್ಕೆ ಇಲ್ಲ ವಿನಾಯಿತಿ?❌
ಮಧ್ಯದ ಅಂಗಡಿ
ಬಿಎಂಟಿಸಿ
ಥಿಯೇಟರ್
ಮಾಲ್
ಜಿಮ್
ಶಾಲಾ ಕಾಲೇಜು
ಪಾರ್ಕ್
ತರಬೇತಿ ಕೇಂದ್ರ
ಅನಗತ್ಯ ಸಂಚಾರಕ್ಕೆ ಅವಕಾಶವಿಲ್ಲ.