ಬೆಂಗಳೂರು:( ಜ.7) VTU Collage: ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಕಾಲೇಜುಗಳಿಗೆ ಕೋವಿಡ್ 19ರ ಶಿಷ್ಟಾಚಾರಗಳ ಮತ್ತು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ರಾಜ್ಯದಲ್ಲಿ ವಿಧಿಸಿರುವ ವೀಕೆಂಡ್ ಕರ್ಫ್ಯೂ ನಲ್ಲಿ ಶಾಲಾ-ಕಾಲೇಜುಗಳಿಗೆ ಅವಕಾಶ ಇರಲಿಲ್ಲ ಆದರೆ ಕೆಲವು ವೃತ್ತಿಪರ ಕಾಲೇಜುಗಳ ಕಾರ್ಯನಿರ್ವಹಣೆಗೆ ಸರ್ಕಾರ ಅನುಮತಿ ನೀಡಿದೆ. ಈ ಪೈಕಿ ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಕಾಲೇಜುಗಳು ಸೇರಿದೆ.
ಉನ್ನತ ಶಿಕ್ಷಣ ಇಲಾಖೆಯ ಆದೇಶದ ಮೇರೆಗೆ ಕಾಲೇಜು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಇಂದು ವೀಕೆಂಡ್ ಕರ್ಫ್ಯೂ ಆರಂಭಗೊಳ್ಳುತ್ತಿದೆ. ಈ ಮಧ್ಯೆ ಸರ್ಕಾರ ಎರಡು ವಾರಗಳ ಕಾಲ ರಾಜ್ಯದಲ್ಲಿ ಕೋವಿಡ್ ನಿರ್ಬಂಧ ಹೇರಿದೆ. ಬೆಂಗಳೂರು ನಗರದಲ್ಲಿ ಒಂದರಿಂದ 9ನೇ ತರಗತಿಯ ಶಾಲೆಗಳು ಮತ್ತು ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳು ಮುಚ್ಚಲಾಗಿದೆ.

ವಕೀಲರಿಗೆ ಐಡಿ ಕಾರ್ಡ್ ಕಡ್ಡಾಯ
ಅಡ್ವೊಕೇಟ್, ವಕೀಲರು ಕಾನೂನಿಗೆ ಸಂಬಂಧಪಟ್ಟ ಸಂಸ್ಥೆಗಳು ಶೇಕಡ 50ರಷ್ಟು ಸಿಬ್ಬಂದಿಗಳ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ ಐಡಿ ಕಾರ್ಡ್ ಕಡ್ಡಾಯವಾಗಿದ್ದು ಲಾಯರ್ ಗಳು ಹಾಗೂ ಅವರ ಸಿಬ್ಬಂದಿಗಳು ಐಡಿ ಕಾರ್ಡ್ ಹೊಂದಿರಬೇಕು.
ಈಗಾಗಲೇ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿರುವ ಬೆಂಗಳೂರಿನಲ್ಲಿ ವಾರಂತ್ಯ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜ.8ರಿಂದ ಶನಿವಾರ ರಾಜ್ಯದ್ಯಂತ ಶಾಲಾ-ಕಾಲೇಜು ಗಳು ತೆರೆಯುತ್ತಿಲ್ಲ ಹಾಗೂ 10 11 12 ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ನಡೆಯುವುದಿಲ್ಲ ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ರಾಜ್ಯದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಹಾಗೂ ಪೂರ್ವನಿಗದಿ ಕಾರ್ಯಕ್ರಮಗಳಿಗೆ ಅವಕಾಶವಿದ್ದು ಬೇರೆ ಇತರ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ. ಈ ಬಾರಿ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ನೀಡಿರುವುದು ವಿಶೇಷವಾಗಿದೆ.
ಇದನ್ನೂ ಓದಿ: Weekend Curfew:ರಾಜ್ಯದಲ್ಲಿ ಇಂದಿನಿಂದ ವೀಕೆಂಡ್ ಕರ್ಫ್ಯೂ! ಏನಿರುತ್ತೆ? ಏನಿರಲ್ಲ?