Breast Cancer: (ಜ.7) ಸ್ತನ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಒಂದು ಸಮಸ್ಯೆಯಾಗಿದೆ. ಸ್ತನ ಕ್ಯಾನ್ಸರ್ ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ತನಕ್ಯಾನ್ಸರ್ ಆರಂಭಿಕ ಹಂತದಲ್ಲಿ ಗುರುತಿಸುವುದು ತುಂಬಾ ಮುಖ್ಯವಾಗಿರುತ್ತದೆ.
ಸ್ತನ ಕ್ಯಾನ್ಸರ್ ಬರಲು ಕಾರಣ:
ಅನುವಂಶಿಯತೆ, ಸ್ಥೂಲಕಾಯತೆ, ವಯಸ್ಸು ಲಿಂಗ ಗರ್ಭಾವಸ್ಥೆ ಮತ್ತು ಮದ್ಯಪಾನ ಮಾಡುವುದರಿಂದ ಸ್ತನ ಕ್ಯಾನ್ಸರ್ ಬರುತ್ತದೆ.
ಸ್ಥಲವು ಅಂದವಾಗಿ ಕಾಣಲು ಬಳಸುವ ಕೆಮಿಕಲ್ ಮಿಶ್ರಿತ ಔಷಧ ತೆಗೆದುಕೊಳ್ಳುವುದರಿಂದ ಲೂ ಬರುವ ಸಾಧ್ಯತೆಗಳು ಇರುತ್ತದೆ. ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಮಹಿಳೆಯರು ತಮ್ಮ ದೇಹದಲ್ಲಿ ಆಗುವ ಬದಲಾವಣೆಗಳ ಕುರಿತು ಗಮನ ಹರಿಸಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ಮೊದಲು ವೈದ್ಯರನ್ನು ಕಾಣುವ ಅಭ್ಯಾಸ ಮಾಡಿಕೊಳ್ಳಿ. ನಿಮಗೇನಾದರೂ ಈ ಕೆಳಗಿನ ಸೂಚನೆಗಳು ಕಾಣಿಸಿಕೊಳ್ಳುತ್ತಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

ಸ್ಥನದಲ್ಲಿನ ನೋವನ್ನು ಸಾಮಾನ್ಯವಾಗಿ ಸ್ತನಕ್ಯಾನ್ಸರ್ ಆರಂಭಿಕ ಚಿನ್ಹೆಗಳ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ನೋವುರಹಿತವಾಗಿದ್ದರು, ಗಮನಿಸಬೇಕಾದ ಅಂಶವಾಗಿರುತ್ತದೆ.
ಸ್ತನದ ತೊಟ್ಟಿನಲ್ಲಿ ಸ್ರಾವ:
ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಅಥವಾ ಸ್ತನಪಾನ ಮಾಡುವ ಸಮಯದಲ್ಲಿ ತೊಟ್ಟುಗಳಿಂದ ಸಾಯಿಸುವುದು ಉಂಟಾಗುತ್ತದೆ. ಹಾಲುಣಿಸುವ ಸಮಯದಲ್ಲಿ ಹೊರತುಪಡಿಸಿ ಬೇರೆ ಸಮಯದಲ್ಲಿ ಉಂಟಾದರೆ ಅಥವಾ ರಕ್ತಸಿಕ್ತವಾಗಿದ್ದ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
ಬಣ್ಣಗಳ ಬದಲಾವಣೆ:
ಸ್ತನ ಕ್ಯಾನ್ಸರ್ ಕೋಶಗಳ ಉಪಸ್ಥಿತಿಯು ಸ್ಥಾನದಲ್ಲಿ ದಪ್ಪ ಅಥವಾ ಕೆಂಪು ಗುಳ್ಳೆ ಇರಬಹುದು. ಇದು ಸಾಮಾನ್ಯವಾಗಿ ಮಹಿಳೆಯರ ಗಮನಕ್ಕೆ ಬರುವುದಿಲ್ಲ, ಬಣ್ಣಗಳು ಗಾಢವಾಗಿರುತ್ತದೆ.

ಆಕಾರ ಬದಲಾವಣೆ:
ಸ್ತನಗಳ ಆಕಾರ ಅಸಮರ್ಪಕವಾಗಿ ಇರುವುದು ಸಹಜ ಆದರೆ ಕೆಲವೊಮ್ಮೆ ಆಕಾರದಲ್ಲಿ ಬದಲಾವಣೆಗಳು ಕಂಡು ಬರುತ್ತದೆ. ಹಾಗಾಗಿ ಇದನ್ನು ಎಂದಿಗೂ ಮರೆಯಬಾರದು.
ಚಪ್ಪಟ್ಟೆಯಾಗುವ ತೊಟ್ಟು:
ಸ್ತನದ ತೊಟ್ಟುಗಳು ಜೋತುಬಿದ್ದಿದ್ದಾರೆ ಅಥವಾ ಚಪ್ಪಟೆಯಾಗಿ ಒಳಮುಖವಾಗಿ ಬಾಗಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.
ಉಂಡೆಗಳು:
ಹೆಚ್ಚುವರಿ ಸ್ಕನ ಅಂಗಾಂಶಗಳು ಅಥವಾ ಕಾಡಿನಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಉಂಡೆಗಳು, ಊತ ಅಥವಾ ನೋವು ಸಂಭವಿಸಿರಬಹುದು. ಇಂತಹ ಬದಲಾವಣೆಗಳನ್ನು ಮಹಿಳೆಯರು ಸಾಮಾನ್ಯವಾಗಿ ಗಮನಿಸುತ್ತಿರಬೇಕು.