ಸಾಧನೆ ಮಾಡಲು ಹಲವು ದಾರಿ.. ಕೆಲಸಕ್ಕಾಗಿ ಮೋನಿಷಾ ಹರಸಾಹಸದ ಕಥೆ ಕೇಳಿ!!
ಬೆಂಗಳೂರು: (ಜ.6) Monisha :ತೃತೀಯಲಿಂಗಿ ಎಂದರೆ ದೂರ ವಿಡುವ ಕಾಲದಲ್ಲಿ ಮೋನಿಷಾ ಎಂಬವರು ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಅದು ಅಂತಿಂಥ ಕೆಲಸ ಅಲ್ಲ ಸರ್ಕಾರಿ ನೌಕರಿ..ಕರ್ನಾಟಕದಲ್ಲಿ ಮೊದಲ ಬಾರಿಗೆ ಸರ್ಕಾರಿ ನೌಕರಿ ಪಡೆದ ಮೊದಲ ಲೈಂಗಿಕ ಅಲ್ಪಸಂಖ್ಯಾತೆ ಮೋನಿಷಾ ಆಗಿದ್ದಾರೆ.
ಹುಟ್ಟಿದ್ದು ಗಂಡಾಗಿ, ಬೆಳದದ್ದು ಹೆಣ್ಣಾಗಿ, ಅಂದು ಮನೆಯವರಿಗೆ ಬೇಡವಾಗಿದ್ದ ಮೋನಿಷಾ ಅವರು ಇಂದು ಕರ್ನಾಟಕವೇ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಮೋನಿಷಾ ಮೂಲ ಹೆಸರು ರಾಮು.. ಎಸೆಸೆಲ್ಸಿ ಎಲ್ಲಿ ಫೇಲಾಗಿ ಅಪ್ಪನಿಂದ ಹೊಡೆತವನ್ನು ತಿಳಿದಿದ್ದ ಅವರು ಮನೆ ಬಿಟ್ಟು ಹೊರಟು ಆಗಿ ತಮ್ಮದೇ ಆದ ಬಳಗವನ್ನ ಸೇರಿದರು.
ಬಟ್ಟೆ ವ್ಯಾಪಾರ ಮಾಡಿದ್ದ ಮೋನಿಷಾ
ಅಲ್ಲಿ ದುಡಿದು ಲಂಗ ಪರಿವರ್ತನೆಯಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕ ಬೆಂಗಳೂರಿಗೆ ಹಿಂತಿರುಗಿದರು ಆದರೂ ಕುಟುಂಬದವರಿಂದ ತಿರಸ್ಕಾರಕ್ಕೆ ಒಳಗಾಗಿದ್ದರು. ಮಗನಾಗಿ ಕುಟುಂಬದ ಬರವಸೆಯನ್ನು ಬೆಳಗುತ್ತಾನೆ ಎಂದು ಕನಸು ಕಂಡಿದ್ದ ಅಪ್ಪನಿಗೆ ಮೋನಿಷಾ ಆಗಿದ್ದು ಸಿಡಿಲು ಬಡಿದಂತಯಿತು.
ಮಗನ ಕೊರಗಿನಲ್ಲೇ ಅಪ್ಪ ಕೂಡ ಕಣ್ಣು ಮುಚ್ಚಿದರು ಬಳಿಕ ಕುಟುಂಬಕ್ಕೆ ಹಿಂತಿರುಗಿದಾಗ ವ್ಯಕ್ತಿಯೊಬ್ಬರನ್ನು ಅವರು ಪ್ರೀತಿಸಿದಾಗ. ಸಂಗಾತಿ ಮತ್ತು ಅವರ ಕುಟುಂಬದವರು ಮರ್ಯಾದೆಗೆ ಅಂಜಿದ ಪ್ರೀತಿಯನ್ನು ಉಳಿಸಿಕೊಳ್ಳಲು ಮೋನಿಷಾ ದುಡುಮೆ ಅತ್ತ ಮನಸ್ಸು ಮಾಡಿದ್ದರು.

ಮೋನಿಷಾ ಅವರು ಉದ್ಯೋಗ ಗಿಟ್ಟಿಸಿಕೊಳ್ಳಲು ಅಲೆದಾಡಿದ ಜಾಗವಿಲ್ಲ, ಅಂದಿನ ಜಿಲ್ಲಾಧಿಕಾರಿಯಾಗಿದ್ದ ಶಂಕರ್ ಅವರ ಸಹಾಯದಿಂದ ಬ್ಯಾಂಕಿನಲ್ಲಿ ಸಾಲ ಪಡೆದು ಇಂದಿರಾ ನಗರದ ಸಮೀಪದಲ್ಲಿರುವ ಕೊಳಗೇರಿಯಲ್ಲಿ ಬಟ್ಟೆ ವ್ಯಾಪಾರ ಮಾಡಲು ಶುರುಮಾಡಿದರು. ಬಟ್ಟೆ ವ್ಯಾಪಾರದೊಂದಿಗೆ ಚೀಟಿ ವ್ಯವಹಾರ ನಡೆಸುತ್ತದೆ ಕೊಳಗೇರಿಯ ಜನರ ನಾಯಕಿಯಾಗಿ ಮಿಂಚಿದರು.
ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕ
ಜನರ ಅಭಿವೃದ್ಧಿಗಾಗಿ ಮೋನಿಷಾ ಅವರು ಹೋರಾಡುತ್ತಿರುವುದನ್ನು ಕಂಡ ಕಾಂಗ್ರೆಸ್ಸ ಮುಖಂಡ ರಮೇಶ್ ಅವರು ಇಂದಿರಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಿದರು. ರಾಜಕೀಯದ ನಂಟಿನ ಜೊತೆಗೆ ಮತ್ತೆ ಉದ್ಯೋಗಕ್ಕಾಗಿ ಅರ್ಜಿ ಹಾಕಿದರು ಆದರೆ ಮೂಲ ಹೆಸರಿನಿಂದ ಕೆಲಸ ಸಿಗಲು ಸ್ವಲ್ಪ ಗೊಂದಲವಾಗಿತ್ತು.
ದಾಖಲೆಗಳ ನಲ್ಲಿದ್ದ ಮೂಲ ಹೆಸರುಗಳನ್ನು ಬದಲಾಯಿಸಲು ಮೋನಿಷಾ ತುಂಬಾ ಕಷ್ಟ ಪಟ್ಟಿದ್ದರು. ದಾಖಲಾತಿಗಳನ್ನು ಸರಿಪಡಿಸಿಕೊಳ್ಳಲು ವಿಧಾನ ಪರಿಷತ್ತ ಸಚಿವಾಲಯದಲ್ಲಿ ಡಿ ಗ್ರೂಪ್ ಹುದ್ದೆಗೆ ಅರ್ಜಿ ಹಾಕಿದ್ದರೂ ಹುದ್ದೆ ಸಿಕ್ಕಲಿಲ್ಲ. ಅರ್ಹತೆ ಇದ್ದರೂ ಸಂದರ್ಶನಕ್ಕೆ ಕರೆ ಬಾರದಿದ್ದಾಗ ಹೈಕೋರ್ಟ್ ಮುಂದೆ ಕಣ್ಣೀರು ಹಾಕುತ್ತಾ ನಿಂತಿದ್ದವರಿಗೆ ಡಿ ಗ್ರೂಪ್ ನೌಕರರ ಸಹಾಯ ಮಾಡಿದರು.
ಮೋನಿಷಾ ನೆರವಿಗೆ ಬಂತು ಕಾನೂನು
ಮೋನಿಷಾರಿಗೆ ವಕೀಲರೊಬ್ಬರನ್ನು ಪರಿಚಯ ಮಾಡಿಸಿ ಕಾನೂನಾತ್ಮಕವಾಗಿ ತಮ್ಮ ಹಕ್ಕನ್ನು ಚಲಾಯಿಸುವ ಅವನ ಮೂಡಿಸಿದರು. ಲೈಂಗಿಕ ಅಲ್ಪಸಂಖ್ಯಾತರಿಗೂ ಸರ್ಕಾರಿ ಕಚೇರಿಯಲ್ಲಿ ಮೀಸಲು ನೀಡಿ ಪರಿಗಣಿಸಬೇಕು ಎಂದು 2014ರಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಕೋರ್ಟ್ ನೀಡಿದ ಆದೇಶದ ರವಿಗೆ ಬಂದು ಅದೇ ಸಮಯದಲ್ಲಿ ವಿಧಾನಸಭೆಯಲ್ಲಿದ್ದ ನಟಿ ತಾರಾ ಅವರು ಕೂಡ ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡಬೇಕೆಂಬ ವಾದ ಅವರಿಗೆ ಬೆಂಬಲ ದೊರಕಿತು.
ವಕೀಲರ ನೆರವಿನಿಂದ ಕಾನೂನಿನಲ್ಲಿ ಜಯ ಪಡೆದವರಿಗೆ ಸರ್ಕಾರಿ ನೌಕರಿ ಸಿಕ್ಕುವ ಕನಸು ನನಸಾಯಿತು. ಕೆಎಟಿ ನೀಡಿದ್ದ ಆದೇಶವನ್ನು ಹೈಕೋರ್ಟ್ ಅಲ್ಲಲ್ಲಿ ಪ್ರಶ್ನಿಸಿದಾಗ ಅಂದಿನ ನ್ಯಾಯಮೂರ್ತಿ ಎಲ್ಲ ನಾರಾಯಣಸ್ವಾಮಿಯವರ ಆದೇಶವು ಮೋನಿಷಾ ಅವರಿಗೆ ಸರ್ಕಾರಿ ನೌಕರಿ ದೊರೆಯುವಲ್ಲಿ ಮಹತ್ವದ ಪಾತ್ರ ವಹಿಸಿತ್ತು.
ಜನರ ಕಣ್ಣಿಗೆ ಲೈಂಗಿಕ ಅಲ್ಪಸಂಖ್ಯಾತರೆಂದರೆ ಭಿಕ್ಷಾಟನೆಯ ಸೆಕ್ಸ್ ವರ್ಕರ್ ಎಂದೇ ತಲೆಗೆ ಹೋಗುತ್ತದೆ. ಬದುಕು ರೂಪಿಸಿಕೊಳ್ಳಲು ಉತ್ತಮ ಅವಕಾಶ ಹುಡುಕಿಕೊಂಡ ಮೋನಿಷಾ ಅವರು ಮಾದರಿಯಾಗಿದ್ದಾರೆ. ಪ್ರೀತಿ ಕೈಹಿಡಿಯಲಿಲ್ಲ ವಾದರೂ ವಿದ್ಯೆ ಕಾಯಿ ಹಿಡಿದು ಎಂಬುದು ಅವರ ನಂಬಿಕೆಯಾಗಿದೆ. ಮನುಷ್ಯ ಅವರು ಪದವಿ ಕೋರ್ಸ್ಗಳು ಸೇರಿ ಉನ್ನತ ಪದವಿ ಕಡಿಸಿ ವೃತ್ತಿಯಲ್ಲಿ ಪ್ರತಿ ಪಡೆಯುವ ಹುಮ್ಮಸ್ಸಿನಲ್ಲಿ ಇದ್ದರೆ.