SSLC Exam Provisional Time table: (ಜ.6) ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು (Temporary Timetable)ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಪರೀಕ್ಷೆ ನಡೆಯಲಿದೆ. ಜನವರಿ 14ರೊಳಗೆ ಪೋಷಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.
ಪೋಷಕರು, ಅಭ್ಯರ್ಥಿಗಳು ಸಲ್ಲಿಸಬೇಕಾದಲ್ಲಿ, ನಿರ್ದೇಶಕರು (ಪರೀಕ್ಷೆಗಳು) ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು 560003 ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸಬಹುದು ಅಥವಾ ಮಂಡಳಿಯ ವೆಬ್ ಸೈಟ್ www.sslc.Karnataka.gov.in ಅಥವಾ [email protected] ವಿಳಾಸಕ್ಕೆ ಈ-ಮೈಲ್ ಮುಖಾಂತರ ಸಲ್ಲಿಸಬಹುದು.
ತಾತ್ಕಾಲಿಕ ವೇಳಾಪಟ್ಟಿ:
ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳ ಪರೀಕ್ಷೆಗೆ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಅಂದರೆ ಒಟ್ಟು 3 ಗಂಟೆ ಸಮಯ ನಿಗದಿಪಡಿಸಲಾಗಿದೆ. ದ್ವಿತೀಯ ಹಾಗೂ ತೃತೀಯ ಭಾಷಾ ಪರೀಕ್ಷೆಗಳಿಗೆ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಅವಕಾಶವಿರುತ್ತದೆ. ಇದರ ಜತೆಗೆ ಪ್ರಶ್ನೆ ಪತ್ರಿಕೆ ಓದಲು ಆರಂಭದಲ್ಲಿ 15 ನಿಮಿಷ ಕಾಲಾವಕಾಶವಿರುತ್ತದೆ.
ಉಳಿದಂತೆ ಸಂಗೀತ ಹಾಗೂ ಇತರೆ ಕೆಲ ವಿಷಯಗಳ ಪರೀಕ್ಷೆಗಳಿಗೆ ಮಧ್ಯಾಹ್ನ 2ರಿಂದ ಸಂಜೆ 5.15ರವರೆಗೆ ಮಂಡಳಿ ಸಮಯ ನಿಗದಿಪಡಿಸಿದೆ.ಇನ್ನೂ, ಈ ವೇಳಾಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಜ.14ರವರೆಗೆ ಅವಕಾಶ ನೀಡಿದೆ.
ಮಾ. 28 – ಪ್ರಥಮ ಭಾಷೆ,ಮಾ. 30 – ದ್ವಿತೀಯ ಭಾಷೆ, ಮಾ.31 ರಜೆ, ಏ.1 ಕೋರ್ ಸಬ್ಜೆಕ್ಟ್, ಏ.2-3 ರಜೆ,
ಏ. 4- ಗಣಿತ, ಏ.5 ರಜೆ, ಏ. 6 – ಸಮಾಜ ವಿಜ್ಞಾನ, ಏ. 7-ರಜೆ, ಏ. 8- ತೃತೀಯ ಭಾಷೆ
ಏ.11- ವಿಜ್ಞಾನ (ಬೆಳಗ್ಗೆ) ಮಧ್ಯಾಹ್ನ ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ.

