ಮದ್ರಾಸ್: (ಜ.6) Right to Relax: ಸ್ಪಾ ಒಳಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಿರುವುದು ಆರ್ಟಿಕಲ್ 21ರ ಪ್ರಕಾರ ವ್ಯಕ್ತಿಗೆ ಇರುವ ಖಾಸಗಿತನದ (ಪ್ರೈವೆಸಿ)ಹಕ್ಕನ್ನು ಉಲ್ಲಂಘನೆ ಮಾಡಿದೆ ಎಂದು ಮದರಾಸ್ ಹೈಕೋರ್ಟ್ ನ ಮದುರೈ ಪೀಠ ಹೇಳಿದೆ.
ಆರ್ಟಿಕಲ್ 21ರಲ್ಲಿ ರಿಲ್ಯಾಕ್ಸ್ ಮಾಡುವ ಹಕ್ಕು ಇದೆ. ಇದರ ಉಲ್ಲಂಘನೆ ಸರಿಯಲ್ಲ ಎಂದು ಮಂಗಳವಾರ ನ್ಯಾಯಾಧೀಶ ಜಿ ಆರ್ ಸ್ವಾಮಿನಾಥನ್ ಅವರು ತೀರ್ಪಿನಲ್ಲಿ ತಿಳಿಸಿದ್ದಾರೆ.
“ಸ್ಪಾ ದ ಒಳ ಆವರಣದಲ್ಲಿ ಸಿಸಿಟಿವಿ ಅಳವಡಿಕೆ ವ್ಯಕ್ತಿಯ ಖಾಸಗಿತನದ ಹಕ್ಕನ್ನು ಉಲ್ಲಂಘನೆ ಮಾಡುತ್ತದೆ” ಎಂದು ಕೋರ್ಟ್ ಆದೇಶ ಹೊರಡಿಸಿದೆ. ಸ್ಪಾ ಆಪರೇಟ್ ಮಾಡುವ ಸಂಬಂಧ ಪೊಲೀಸರು ನಿರಪೇಕ್ಷಣಾ ಪತ್ರ ನೀಡುವ ಬಗ್ಗೆ ಅರ್ಜಿದಾರರು ಸಲ್ಲಿಸಿದ ದೂರನ್ನು ವಿಚಾರಣೆ ಮಾಡಿ ಕೋರ್ಟ್ ಈ ತೀರ್ಪು ನೀಡಿತು.

ಈ ವಿಚಾರಣೆ ವೇಳೆ ಸರ್ಕಾರಿ ಸಮಾಲೋಚಕರು, ಇದೇ ರೀತಿಯ ಸಂದರ್ಭದಲ್ಲಿ ನ್ಯಾಯಾಧೀಶರಾದ ಎಸ್ ಎಂ ಸುಬ್ರಮಣ್ಯಮ್ ಅವರು ಅಕ್ರಮ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಸ್ಪಾಗಳಲ್ಲಿ ಸಿಸಿಟಿವಿ ಮಡಿಕೆ ಮಾಡುವ ಬಗ್ಗೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದ ಆದೇಶವನ್ನು ಗಮನಕ್ಕೆ ತಂದರು.
ಈ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ವಾಮಿನಾಥನ್ ಅವರು, ವಿಭಾಗೀಯ ಪೀಠ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ವಿರುದ್ಧವಾಗಿ ಯಾವುದೇ ತೀರ್ಪು ನೀಡುವಂತಿಲ್ಲ. ಇದನ್ನು ಮೇಲಿನ ಪೀಠಕ್ಕೆ ವರ್ಗಾವಣೆ ಮಾಡಬಹುದು ಎಂದರು.
ಇದೇ ವೇಳೆ ಅವರು, ಸುಪ್ರೀಂಕೋರ್ಟ್ ಜಾರಿ ಮಾಡಿದ ಕಾನೂನನ್ನು ಗೌರವಿಸುವುದು ಅಧೀನ ನ್ಯಾಯಾಲಯಗಳ ಕರ್ತವ್ಯವಾಗಿದೆ ಎಂದು ಹೇಳಿದರು.
ಒಂದು ವೇಳೆ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಲು ಅನುಮತಿ ಸಿಕ್ಕರೆ ಅವು ಶಾಸಕಾಂಗ ಅಥವಾ ಕಾರ್ಯಾಂಗದ ಪರಿಶೀಲನೆಗೆ ಬರುತ್ತವೆ. ಇದನ್ನು ಸುಪ್ರೀಂಕೋರ್ಟ್ ಒಪ್ಪಿಗೆ ನೀಡದೇ ನ್ಯಾಯಾಲಯದ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.