ಪಂಜಾಬ್: ಜ.5; Modi Rally : ಭದ್ರತಾ ಲೋಪದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಮಾವೇಶಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದು ಕೇಂದ್ರ ಸಚಿವಾಲಯ ವರದಿಮಾಡಿದೆ ಆದರೆ ಅಲ್ ಆಗಿದ್ದೇನು ಗೊತ್ತಾ?
ಪ್ರಧಾನಿ ನರೇಂದ್ರ ಮೋದಿಯವರು ದೊಡ್ಡಮಟ್ಟದಲ್ಲಿ ಭದ್ರತಾ ಲೋಪ ಕಾರಣ ನೀಡಿ, ವಿಮಾನ ನಿಲ್ದಾಣಕ್ಕೆ ವಾಪಸಾಗಿದ್ದಾರೆ. ಹಾಗಾದ್ರೆ ಅಲ್ಲಿ ಆಗಿದ್ದಾದರೂ ಏನು? ಮುಂದೆ ಓದಿ.
ಭದ್ರತಾ ಲೋಪವಾಗಿದೆ:
ಹುಸೇನಿವಾಲಯದಲ್ಲಿರುವ ಅಮರವೀರರ ಸ್ಮಾರಕಕ್ಕೆ 30 ಕಿಲೋಮೀಟರ್ ದೂರದ ಸೇತುವೆಯನ್ನು ಪ್ರಧಾನಿ ಮೋದಿ ಅವರು ಕನ್ವಾಯ್ ತಲುಪಿದಾಗ. ಪ್ರತಿಭಟನಾಕಾರರು ಮಾರ್ಗವನ್ನ ಜಾಮ್ ಮಾಡಿದ್ದರು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ಲೈಓವರ್ ಮೇಲೆ 15 ರಿಂದ 20 ನಿಮಿಷ ಸಿಲುಕಿದ್ದರೂ ಅಷ್ಟೇ, ಇದಕ್ಕೆ ಪ್ರಧಾನಿ ಮೋದಿ ಅವರಿಗಾಗಿ ಮಾಡಿದ್ದ ಭದ್ರತೆಯಲ್ಲಿ ಬಹುದೊಡ್ಡ ಲೋಪವಾಗಿದೆ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಲಾಗಿದೆ.

ನಾನು ಪ್ರಾಣಗಳೊಂದಿಗೆ ಭಟಿಂಡ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿದ್ದಕ್ಕೆ ನಿಮ್ಮ ಮುಖ್ಯಮಂತ್ರಿಗೆ ಥ್ಯಾಂಕ್ಸ್ ಹೇಳಿ ಎಂದು ನರೇಂದ್ರ ಮೋದಿ ಅವರು ಏರ್ಪೋರ್ಟ್ ಬಂದಿದ್ದ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.
ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು, ಚುನಾವಣೆಯಲ್ಲಿ ಸೋಲುತ್ತದೆ ಎಂಬ ಭಯದಿಂದಲೇ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಪಂಜಾಬ ಕಾಂಗ್ರೆಸ್ ಸರ್ಕಾರ ಅಡ್ಡಿ ಮಾಡಿದೆ ಎಂದು ಆರೋಪಿಸಿದ್ದಾರೆ.
ಆದರೆ ಕಾಂಗ್ರೆಸ್, ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದು ಮೋದಿ ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ ಗಾಲಿ ಕುರ್ಚಿಗಳನ್ನು ನೋಡಿ ಮೋದಿ ರ್ಯಾಲಿಗೆ ಹೋಗಿಲ್ಲ ಎಂದು ಹೇಳಿದೆ.

ಮೂಲಗಳ ಪ್ರಕಾರ ಮೋದಿ ರ್ಯಾಲಿಗೆ ಭದ್ರತೆ ಕಲ್ಪಿಸಲು 10 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು, ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರ ಬಸ್ ಬೇರೆ ಮಾರ್ಗದಲ್ಲಿ ಕಳಿಸಲಾಗಿತ್ತು.
ರಸ್ತೆ ಮಾರ್ಗದಲ್ಲಿ ತೆರಳಲು ಮೋದಿ ಅವರು ನಿರ್ಧರಿಸಿದ್ದರು. ಪ್ರಧಾನಿ ಮಂತ್ರಿ ಕೇಂದ್ರ ಮಂತ್ರಿಗಳ ಪ್ರವಾಸವನ್ನು ಕಿಸಾನ ಮದ್ದೂರು ಸಂಘರ್ಷ ಸಮಿತಿ ನಿರಂತರವಾಗಿ ವಿರೋಧಿಸುತ್ತದೆ. ಕೇಂದ್ರಮಂತ್ರಿ ಗಜೇಂದ್ರ ಶೇಖಾವತ್ ಎರಡು ಬಾರಿ ಕೂಡ ಸಭೆ ನಡೆಸಿದ್ದರು ಎಂದು ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ.
ಇದನ್ನೂ ಓದಿ: Modi Rally: ಚುನಾವಣಾ ಪ್ರಚಾರಕ್ಕೆ ನಾಳೆ ಪಂಜಾಬ್ ಗೆ ಮೋದಿ: ರೈತ ಸಂಘಟನೆಗಳಿಂದ ಪ್ರತಿಭಟನೆ!
ಪ್ರೀತಿಯ ನಡ್ಡಾಜಿ, ರಾಲಿ ರದ್ದಾಗಲು ಖಾಲಿ ಕುರ್ಚಿ ಕಾರಣ ಎಂದು ಟ್ವೀಟ್ ಮಾಡಿದ್ದಾರೆ
प्रिय नड्डा जी,
— Randeep Singh Surjewala (@rssurjewala) January 5, 2022
रैली रद्द होने का कारण ख़ाली कुर्सियाँ रहीं।
यक़ीन न हो तो, देख लीजिए 👇
और हाँ, बेतुकी बयानबाज़ी नहीं,
किसान विरोधी मानसिकता का सच स्वीकार कीजिए और आत्म मंथन कीजिए ।
पंजाब के लोगों ने रैली से दूरी बनाकर अहंकारी सत्ता को आईना दिखा दिया है। pic.twitter.com/jhgrsqOv1t