“ಹಿಂದೂ ಯುವಕರನ್ನು ಇಸ್ಲಾಂ ಧರ್ಮಕ್ಕೆ ಹಾಗೂ ಮುಸ್ಲಿಂ ಯುವಕರನ್ನು ಐಸಿಸಿ ಗೆ ಸೇರಲು ಪ್ರಚೋದನೆ”
ಬೆಂಗಳೂರು: (ಜ.5) Honey Trap: ಹನಿಟ್ರಾಪ್ ಮೂಲಕ ಹಿಂದೂ ಯುವಕರನ್ನು ಇಸ್ಲಾಂ ಧರ್ಮಕ್ಕೆ ಹಾಗೂ ಮುಸ್ಲಿಂ ಯುವಕರನ್ನು ಐಸಿಸಿ ಗೆ ಸೇರಲು ಪ್ರಚೋದನೆ ಮಾಡುತ್ತಿದ್ದ ವೈದ್ಯೆಯನ್ನು ರಾಷ್ಟ್ರೀಯ ತನಿಖಾದಳದ ವಿಚಾರಣೆಗೆ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
ಐಸಿಸಿ ಸಂಘಟನೆಯ ಸಂಪರ್ಕದ ಆರೋಪದಲ್ಲಿ ಸೋಮವಾರ ಮಂಗಳೂರಿನ ಉಳ್ಳಾಲದಲ್ಲಿ ಬಂಧನಕ್ಕೆ ಒಳಗಾದ ದಂತವೈದ್ಯೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಹನಿಟ್ರಾಪ್ ಮೂಲಕ ಮತಾಂತರ ಮಾಡುತ್ತಿದ್ದರು ಎನ್ನಲಾಗಿದೆ.
ಯಾರೂ ಈ ಮರಿಯಂ?
ಮಡಿಕೇರಿ ಮೂಲದ ದೀಪ್ತಿ ಮೂಲತಹ ಹಿಂದೂ ಆಗಿದ್ದು, ಮಂಗಳೂರಿನ ದೇರಳಕಟ್ಟೆಯಲ್ಲಿ ಬಿಡಿಎಸ್ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಮಾಜಿ ಶಾಸಕ ಇದ್ದಿನಬ್ಬ ಅವರ ಮೊಮ್ಮಗ ಅನಾಸ ಅಬ್ದುಲ್ ರೆಹಮಾನ್ ಅವರನ್ನು ಪ್ರೀತಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾಗಿದ್ದಳು. ಕ್ರೋನಿಕಲ್ ಫೌಂಡೇಶನ್ ಎಂಬ ಇನ್ಸ್ಟಾಗ್ರಾಮ್ ಪೇಜಿನಲ್ಲಿ ಐಸಿಸ್ ಪರ ಕೆಲಸಮಾಡುತ್ತಿದ್ದಳು ಈ ವೇಳೆ ಸಂಬಂಧಿ ಅಮರ ಅಬ್ದುಲ್ ರೆಹಮಾನ್ ಸೂಚನೆ ಮೇರೆಗೆ ರಾಜ್ಯದಲ್ಲಿ ಹಿಂದೂ ಯುವಕರನ್ನು ಹನಿಟ್ರಾಪ್ ಆ ಮೂಲಕ ಮತಾಂತರಗೊಳಿಸಿ ಐಸಿಸಿ ಸಂಘಟನೆಗೆ ಸೇರುವಂತೆ ಪ್ರಚೋದಿಸುತ್ತಿದ್ದರು ಎನ್ನಲಾಗಿದೆ.
ಹನಿಟ್ರಾಪ್ ಜಾಲ:
ಕಳೆದ ಐದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾದೇಶ ಪೆರುಮಾಳ್ ಅಲಿಯಾಸ್ ಅಬ್ದುಲ್ ಎಂಬಾತ ದೀಪ್ತಿಯ ಹನಿಟ್ರಾಪ್ ಗೆ ಒಳಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ತನಿಖೆಯಲ್ಲಿ ತಿಳಿದುಬಂದಿದೆ.
15ಕ್ಕೂ ಹೆಚ್ಚು ಖಾತೆಗಳನ್ನು ತೆರೆದಿರುವ ದೀಪ್ತಿ:
ಯುವಕರನ್ನು ಮತಾಂತರ ಮಾಡಲು ದೀಪ್ತಿ ಬರೋಬ್ಬರಿ 15 ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಖಾತೆಗಳನ್ನು ಹೊಂದಿದ್ದಾಳೆ. ಪತಿ ಅನಾಸ ಅಬ್ದುಲ್ ರಹಮಾನ್ ಹಾಗೂ ಸಂಬಂಧಿ ಅಮರ ಅಬ್ದುಲ್ ರೆಹಮಾನ್ ಅವರ ಪ್ರಚೋದನೆಯಿಂದ ಇಸ್ಲಾಂ ಧರ್ಮದ ಬಗ್ಗೆ ಒಲವು ಬೆಳೆಸಿಕೊಂಡಿದ್ದರು ಆನಂತರ. ಸಂಬಂಧಿ ರೆಹಮಾನ ಸೂಚನೆ ಮೇರೆಗೆ ಯುವಕರನ್ನು ಸೆಳೆಯಲು ಆರಂಭಿಸಿದಳು.
ಸಾಮಾಜಿಕ ಜಾಲತಾಣಗಳ ಆದ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್, ಹಾಗೂ ಟೆಲಿಗ್ರಾಮ್ ಗಳಲ್ಲಿ ಹಿಂದೂ ಹಾಗೂ ಮುಸ್ಲಿಂ ಹೆಸರಿನಲ್ಲಿ 15ಕ್ಕೂ ಹೆಚ್ಚು ಕಥೆಗಳನ್ನು ಹೊಂದಿದ್ದಾಳೆ ಹಿಂದೂ ಯುವಕರಿಗೆ ಹಿಂದು ಎಂದು ಮುಸ್ಲಿಂ ಯುವಕರಿಗೆ ಮುಸ್ಲಿಮ್ ಎಂದು ಪರಿಚಯಿಸಿಕೊಳ್ಳುತ್ತಿದ್ದಳು. ಈಕೆಯ ಲೈಂಗಿಕ ಪ್ರಚೋದನೆಯ ಮೆಸೇಜ್ ಗಳಿಂದ ಯುವಕರನ್ನು ಸಣ್ಣ ಆಕರ್ಷಿತರಾಗಿ ಮಾಡಿಸಿಕೊಳ್ಳುತ್ತಿದ್ದಳು.
ಮದುವೆಯಾಗಿ ನಂಬಿಸಿ ಮತಾಂತರ:
ಹಿಂದೂ ಯುವಕರೊಂದಿಗೆ ಆತ್ಮೀಯತೆ ಬಳಸಿಕೊಂಡು ವಿಡಿಯೋ ಕಾಲ್ ಮಾಡಿ, ಮದುವೆಯಾಗುವುದಾಗಿ ನಂಬಿಸಿ ಇಸ್ಲಾಂಗೆ ಮತಾಂತರಗೊಳ್ಳುವುದು ಪ್ರಚೋದನೆ ನೀಡುತ್ತಿದ್ದಾರೆ ಹಾಗೆ ಕೆಲವೊಂದು ಆಮಿಷಗಳನ್ನು ಹೋಗುತ್ತಿದ್ದಳು ಎನ್ನಲಾಗಿದೆ.
ಹಿಂದೂ ಯುವಕರಲ್ಲದೆ ಮುಸ್ಲಿಂ ಯುವಕರಿಗೂ ಮದುವೆ ಹಾಗೂ ಪ್ರೀತಿಯ ನೆಪವೊಡ್ಡಿ, ಜಿಹಾದಿ ಬಗ್ಗೆ ಪ್ರಚೋದಿಸಿ ಐಸಿಸ್ ಅಸಂಘಟನೆ ಸೇರುವಂತೆ ಪ್ರೇರಣೆ ನೀಡುತ್ತಿದ್ದರು ಇದರಿಂದ 2020 21 ರಲ್ಲಿ ನಾಲ್ಕೈದು ಯುವಕರು ಕೇರಳದಿಂದ ಸಿರಿಯಾಗಿ ಭೇಟಿ ನೀಡಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
5 ತಿಂಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದ ಮಾದೇಶ ಕೂಡ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ, ಈ ವೇಳೆ ಇನ್ಸ್ಟಾಗ್ರಾಂ ನಲ್ಲಿ ಪರಿಚಯಿಸಿಕೊಂಡಿದ್ದ ದೀಪ್ತಿ ಆತನಿಗೆ ಬದಲಾವಣೆಗೆ ಪ್ರಚೋದಿಸಿದ್ದಳು. ದೀಪ್ತಿ”ನಿನ್ನ ಸಮಸ್ಯೆಗೆ ನನ್ನ ಬಳಿ ಪರಿಹಾರವಿದೆ ಆಫ್ಘಾನಿಸ್ತಾನದಲ್ಲಿ ಮತ್ತು ಸಿರಿಯಾದಲ್ಲಿ ನಮ್ಮ ಸಮುದಾಯದವರು ದೊಡ್ಡಮಟ್ಟದಲ್ಲಿ ಬದಲಾವಣೆಗೆ ನಡೆಸುತ್ತಿದ್ದಾರೆ. ಅವರೊಂದಿಗೆ ನೀನು ಸೇರಿದರೆ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ ಜೊತೆಗೆ ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಪ್ರೇರೇಪಿಸಿದ್ದಳು.
ಆತ ಅವಳ ಮಾತು ನಂಬಿ ಅಬ್ದುಲ್ ಆಗಿ ಮತಾಂತರ ಗೊಂಡು ದೇಶದ ವಿಧ್ವಂಸಕ ಕೃತ್ಯಕ್ಕೆ ಎಸಗುವ ಸಂಘಟನೆ ಸದಸ್ಯರಿಗೆ ಆನ್ ಲೈನ್ ಮೂಲಕವೇ ಭರವಸೆ ನೀಡಿದ್ದ ಈ ಕೃತ್ಯಕ್ಕೆ ಮರೆಯ ಅವರು ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿದ್ದಳು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಕಾಶ್ಮೀರದಲ್ಲೂ ಲಿಂಕ್ ಇತ್ತು:
ಮರಿಯಂ ಹಾಗೂ ಪತಿ ರೆಹಮಾನ್ ಹಾಗೂ ಮಹಮ್ಮದ್ ಅಮೀನ್ ಎಂಬುವವರು 2020ರಲ್ಲಿ ಕಾಶ್ಮೀರದಲ್ಲಿ ನಡೆದ ಹಿಜ್ರ ಅಥವಾ ವಲಸಿಗರ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅಲ್ಲಿಯೂ ನಕಲಿ ಹೆಸರು ಬಳಸಿ ಸ್ಥಳೀಯರನ್ನು ಪರಿಚಯ ಮಾಡಿಕೊಂಡು ಸಾಮಾಜಿಕ ಜಾಲತಾಣದ ಮೂಲಕ ಬೇರೆ ಬೇರೆ ಹೆಸರಿನಲ್ಲಿ ಸಂದೇಶ ಕಳುಹಿಸಿ, ಇಸ್ಲಾಮಿಕ ಸ್ಟೇಟ್ ಆಫ್ ಅಂಡ್ ಸಿರಿಯಾ ಐಸಿಸ್ ಅಥವಾ ಆಫ್ಘಾನಿಸ್ಥಾನದ ಉಗ್ರ ಸಂಘಟನೆಯಾದ ಇಸ್ಲಾಮಿಕ ಸ್ಟೇಟ್ ಕರೋಸನ್ ಪ್ರೈವೇಟ್ (ಐಎಸ್- ಕೆಪಿ) ಸಂಘಟನೆಗೆ ಸೆಳೆಯುತ್ತಿದ್ದಳು.