Senior Actor Avinash: (ಜ.5): ಕನ್ನಡ ಚಿತ್ರರಂಗದ ಹಿರಿಯ ನಟ ಅವಿನಾಶ್ ಅವರು ಇನ್ನಿಲ್ಲ ಎಂಬ ಕನ್ನಡ ವೈರಲ್ ಆಗಿತ್ತು. ಪೋಷಕರ ಪಾತ್ರ ದಿಂದ ಹಿಡಿದು ಖಳನಾಯಕನ ಪಾತ್ರದವರೆಗೆ ಕನ್ನಡ ಚಿತ್ರರಂಗ ಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ. ಆದ್ರೆ ಯಾರೋ ಕಿಡಿಗೇಡಿಗಳು ಒಂದಾನೊಂದು ಇನ್ನಿಲ್ಲ ಎಂಬ ಸುದ್ದಿ ಎಂದು ಹರಸಿದ್ದರು ಅಭಿಮಾನಿಗಳು ಒಳಗಾಗಿದ್ದರು.

ಸ್ಯಾಂಡಲ್ವುಡ್ನ ಹಿರಿಯ ನಟ ಅವಿನಾಶ್ ಅವರು ಸುಳ್ಳು ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ್ದು, ನಾನು ಆರಾಮವಾಗಿದ್ದೇನೆ ಬೆಳಗ್ಗೆ ವರ್ಕೌಟ್ ಕೂಡ ಮಾಡಿದ್ದೇನೆ ಎಂದಿದ್ದಾರೆ ಅಲ್ಲದೆ ಇಂತಹ ಸುಳ್ಳು ಸುದ್ದಿ ಅರಳಿದ ಅವರ ವಿರುದ್ಧ ಸೈಬರ್ ಕ್ರೈಮ್ ಗೆ ದೂರು ನೀಡುವುದಾಗಿಯೂ ತಿಳಿಸಿದ್ದಾರೆ.
ಪ್ರಸ್ತುತ ಜೇಮ್ಸ್ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿರುವುದಾಗಿ ಅವಿನಾಶ್ ಅವರು ಖುದ್ದು ತಿಳಿಸಿದ್ದಾರೆ. ಪುನೀತ ರಾಜಕುಮಾರ ಅವರ ಕೊನೆಯ ಚಿತ್ರವಾಗಿದ್ದ ಜೇಮ್ಸ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಚಿತ್ರದ ಶೂಟಿಂಗ್ ಆ ಕೊನೆ ಹಂತದಲ್ಲಿದೆ. ಪುನೀತ್ ರಾಜಕುಮಾರ್ ಅವರು ಇಲ್ಲದೆ ಶೂಟಿಂಗ್ ಮಾಡುವುದು ತುಂಬಾ ಕಷ್ಟವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಫೇಕ್ ನ್ಯೂಸ್:
ಕನ್ನಡ ಚಿತ್ರರಂಗ ಮಾತ್ರವಲ್ಲದೆ, ಹಲವೆಡೆ ಇಂತಹ ಸುಳ್ಳು ಸುದ್ದಿಗಳು ಹರಿಡುತ್ತಿರುವುದು ಹೆಚ್ಚಾಗಿದೆ, ನಟ ದೊಡ್ಡಣ್ಣ ಸೇರಿದಂತೆ ಹಲವರನ್ನು ಬದುಕಿದ್ದಾಗಲೇ ಇನ್ನಿಲ್ಲ ಎಂಬ ಸುಳ್ಳುಸುದ್ದಿ ಎಂದು ಟಿಆರ್ಪಿ ಗೋಸ್ಕರ ಮಾಡುತ್ತಿದ್ದಾರೆ. ಹೀಗೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದರೆ, ಅವರ ವಿರುದ್ಧ ಸೈಬರ್ ಕ್ರೈಮ್ ಕೇಸ್ ದಾಖಲಾಗುವುದು ಅಂತೂ ಗ್ಯಾರಂಟಿ!!