ಬೆಂಗಳೂರು:( ಜ.5) Coronavirus: ರಾಜ್ಯದಲ್ಲಿ ಇಂದು ಕೊರೋನಾ ಸ್ಪೋಟವಾಗಿದೆ. ಹೌದು, ನಿನ್ನೆಯಷ್ಟೇ ರಾಜ್ಯದಲ್ಲಿ ಕೋರೋನಾ ಹಾಗೂ ಒಮಿಕ್ರಾನ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಾರಾಂತ್ಯಯ ಕರ್ಫ್ಯೂ ವಿಧಿಸಲಾಗಿದೆ.
ಆದರೆ ಇಂದು ಕಳೆದ 24 ಗಂಟೆಗಳಲ್ಲಿ ಹೊಸದಾಗಿ 4,246 ಜನರಿಗೆ ಕೊರೋನಾ ಪಾಸಿಟಿವ್ ದೃಡಪಟ್ಟಿದೆ. ಈ ಬಗ್ಗೆ ಖುದ್ದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕೇಸುಗಳು ಡಬಲ್ ಆಗಿದೆ.1, 27,328 ಜನರಿಗೆ ಕೂರೋನಾ ಪರೀಕ್ಷೆ ಮಾಡಿಸಲಾಗಿದೆ.

ಬೆಂಗಳೂರಿನಲ್ಲಿ 3,605 ಸೇರಿದಂತೆ ರಾಜ್ಯಾದ್ಯಂತ ಇಂದು 4,246 ಜನರಿಗೆ ಕೊರೋನಾ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ 4,246 ಜನರಿಗೆ ಪಾಸಿಟಿವ್ ದೃಢಪಟ್ಟಿದ್ದು, ಪಾಸಿಟಿವಿಟಿ 3.33ರಷ್ಟು ಏರಿಕೆಯಾಗಿದೆ ಹಾಗೂ ಬೆಂಗಳೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದು, 299 ಜನರು ಒಮಿಕ್ರಾನ್ ವೈರಸ್ ತಗುಲಿದೆ.
ಭಾರತದಲ್ಲಿ ಒಮಿಕ್ರಾನ್ ನಿಂದ ಮೊದಲ ಸಾವು:
ಲಕ್ಷ್ಮೀನಾರಾಯಣ ನಗರದ 73 ವರ್ಷದ ವ್ಯಕ್ತಿ ಒಮಿಕ್ರಾನ್ ನಿಂದ ಪಟ್ಟಿದ್ದಾರೆ. ಕಳೆದ ಡಿಸೆಂಬರ್ 15ರಂದು ಕೋವಿಡ್ ಟೆಸ್ಟ್ ಮಾಡಿಸಿದ್ದರು ಅಂದಿನಿಂದ ಆಸ್ಪತ್ರೆಯಲ್ಲಿ ಇದ್ದಾರೆ ಮಧುಮೇಹ ಅಧಿಕ ರಕ್ತದೊತ್ತಡ ಮುಂತಾದ ಕಾಯಿಲೆಗಳು ಅವರಿಗಿತ್ತು ಎಂದು ವರದಿಯಾಗಿದೆ.
ಆದರೆ ಡಿಸೆಂಬರ್ 21ರಂದು ಅವರಿಗೆ ನೆಗೆಟಿವ್ ಅವರದೇ ಕಂಡುಬಂದಿದೆ. ಇದಾದನಂತರ ಜಿನೋಮ್ ಸಿಕ್ವೆನ್ಸಿಂಗ್ ಪಲಿತಾಂಶಗಳು ಡಿಸೆಂಬರ್ 25ರಂದು ಬಂದಿದ್ದು ಅವರು ಮತ್ತೆ ಒಮಿಕ್ರೋನ್ ಗೆ ರೂಪಾಂತರ ಹೊಂದಿದ್ದಾರೆ ಎಂದು ಕಂಡುಬಂದಿದೆ.
Covid cases nearly double in 24 hours to 4,246. TPR of 3.33%:
— Dr Sudhakar K (@mla_sudhakar) January 5, 2022
◾New cases in State: 4,246
◾New cases in B'lore: 3,605
◾Positivity rate: 3.33%
◾New Omicron cases: NA
◾Total Omicron cases: 226
◾Deaths:02 (B'lore- 02)
◾Tests: 1,27,328#COVID19 #Karnataka @BSBommai