ದೆಹಲಿ:(ಜ.6) Bharath Biotech: ದೇಶದಲ್ಲಿ 15ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ಹಾಕಲು ಅಭಿಯಾನ ನಡೆಸಲಾಗುತ್ತಿದೆ. ಈ ಬಗ್ಗೆ ಭಾರತ ಬಯೋಟಿಕ್ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಂಡವರು ಅಥವಾ ಮಕ್ಕಳು ಯಾವುದೇ ಪ್ಯಾರಾಸಿಟಮಲ್ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ಯಾರಾಸಿಟಮಲ್ ಅಗತ್ಯವಿಲ್ಲ:
ಭಾರತ್ ಬಯೋಟೆಕ್ ಸಂಸ್ಥೆಯು ನಡೆಸಿದ್ದ ಕ್ಲಿನಿಕಲ್ ಪ್ರಯೋಗದಲ್ಲಿ ಪಾಲ್ಗೊಂಡಿದ್ದ 30,000 ಮಕ್ಕಳ ಪೈಕಿ ಶೇ 10 ರಿಂದ 20ರಷ್ಟು ಮಕ್ಕಳಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಂಡಿದ್ದವು ಮಕ್ಕಳಲ್ಲಿ ಒಂದೆರಡು ದಿನಗಳಲ್ಲಿ ಅಡ್ಡ ಪರಿಣಾಮದ ತೀವ್ರತೆ ಕಡಿಮೆಯಾಗಿತ್ತು ಯಾವುದೇ ಮಕ್ಕಳಿಗೆ ಔಷಧಗಳನ್ನು ನೀಡಬೇಕಾದ ಪರಿಸ್ಥಿತಿ ಬರಲಿಲ್ಲ ಎಂದು ತಿಳಿಸಿದೆ. ಕೋರೋನಾ
ಲಸಿಕೆ ತೆಗೆದುಕೊಂಡಮೇಲೆ ಪ್ಯಾರಾಸಿಟಮಲ್ ಮಾತ್ರೆಗಳನ್ನು ಶಿಫಾರಸು ಮಾಡಲಾಗುತ್ತದೆ ಆದರೆ ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಯಾವುದೇ ಔಷಧಿಗಳನ್ನು ನೀಡಬೇಕಾದ ಪರಿಸ್ಥಿತಿ ಬರುವುದಿಲ್ಲ ಎಂದು ತಿಳಿಸಿದೆ.

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (Drug Controller General of India) ಇತ್ತೀಚಿಗೆ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ ನೀಡಿದ್ದಾರೆ ಅನುಮತಿ ದೊರೆತ ನಂತರ ಭಾರತದಲ್ಲಿ ಮತ್ತೊಂದು ಲಸಿಕಾಕರಣ ಆಂದೋಲನವನ್ನು ಹಲವು ರಾಜ್ಯಗಳು ಆರಂಭಿಸಿದೆ.
ಇದನ್ನೂ ಓದಿ:Corona positive: ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಗೆ ಕೊರೊನಾ ಸೋಂಕು!
15 ವರ್ಷದಿಂದ 18 ವರ್ಷದ ವಯೋಮಿತಿ ಮಕ್ಕಳಿಗೆ ಲಸಿಕೆ ನೀಡಲು ಅನುಮೋದನೆ ಪಡೆದುಕೊಂಡ ಏಕೈಕ ಲಸಿಕೆ ಕೋವ್ಯಾಕ್ಸಿನ್ ಆಗಿದೆ. ಭಾರತವು 15ರಿಂದ 18 ವರ್ಷದ ವಯೋಮಿತಿಯ ಒಂದು ಕೋಟಿ ಮಕ್ಕಳಿಗೆ ಕೋರೋನಾ ಲಸಿಕೆ ನೀಡಿದೆ ಇಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಕಳೆದ ಜನವರಿ ಮೂರರಿಂದ ಭಾರತದಲ್ಲಿ ಆರಂಭವಾಗಿರುವ ಲಸಿಕೆ ಅಭಿಯಾನದಲ್ಲಿ ಯುವಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಹೇಳಲಾಗುತ್ತಿದೆ.