Toll Collector: (ಜ.4) ಈ ಹಿಂದೆ ಆನೆಯೊಂದು ಮಹಿಳೆಯ ಟೋಪಿಯನ್ನು ತೆಗೆದು ಬಾಯಿಯ ಒಳಗೆ ಹಾಕೊಂಡು ಇರುವಂತೆ ನಟಿಸಿತ್ತು.ಈಗ ಇನ್ನೊಂದು ಘಟನೆ ನಡೆದಿದೆ. ಎಲ್ಲ ಕಡೆ ರಸ್ತೆಯಲ್ಲಿ ಅನೆ ದಾಳಿ ಮಾಡಿದೆ, ದಾರಿಹೋಕರನ್ನು ಅಟ್ಟಾಡಿಸಿಕೊಂಡು ಹೋಗಿದೆ ಎಂಬ ವಿಡಿಯೋಗಳು ವೈರಲ್ ಆಗುತ್ತಿತ್ತು. ಆದ್ರೆ ಇದು ಬೇರೇನೇ ವಿಷಯ
ಸಾಮಾನ್ಯವಾಗಿ ಹೆದ್ದಾರಿಯಲ್ಲಿ ಟೋಲ್ ಕಟ್ಟದೆ ಮುಂದೆ ಹೋಗುವ ಹಾಗಿಲ್ಲ. ನಿಗದಿತ ಕಿಲೋಮೀಟರಿಗೆ ನಿಗದಿತ ಶುಲ್ಕವನ್ನು ಕಟ್ಟಿ ಮುಂದೆ ಸಾಗಬೇಕಾಗುತ್ತದೆ.

ಇದೊಂದು ಡಿಫ್ರೆಂಟ್ ಟೋಲ್ ಇದೆ.ಇಲ್ಲಿ ಶುಲ್ಕವೇನೋ ಸಂಗ್ರಹಿಸುತ್ತಾರೆ ಆದರೆ ಶುಲ್ಕ ಸಂಗ್ರಹಿಸುವವರು ಯಾರು? ಮುಂದೆ ಓದಿ..ಇಲ್ಲಿನ ಟೋಲ್ ನಲ್ಲಿ ಶುಲ್ಕವನ್ನು ಸಂಗ್ರಹಿಸುವುದು ಮನುಷ್ಯರಲ್ಲ ಬದಲಿಗೆ ಆನೆ!!
ಆನೆಗಳು ತಮ್ಮ ಪ್ರತಿಯೊಂದು ಬುದ್ಧಿವಂತ ಕೆಲಸಗಳಿಂದ ಜನರ ಮನವನ್ನು ಗೆಲ್ಲುತ್ತದೆ. ಹಾಗೆಯೇ ಅದರ ತುಂಟಾಟಗಳು ನೋಡಲು ಎರಡು ಕಣ್ಣು ಸಾಲದು..

ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಂದು ದೃಶ್ಯವನ್ನು ಅಪ್ ಲೋಡ್ ಮಾಡಿದ್ದಾರೆ. ಅದರಲ್ಲಿ ವ್ಯಕ್ತಿಯೊಬ್ಬರು ಕಾರಿನಿಂದ ಕೈಹಾಕಿ ಬಾಳೆಹಣ್ಣನ್ನು ಹಿಡಿದಿರುವ ದೃಶ್ಯವನ್ನು ನೀವು ಕಾಣಬಹುದು. ಹೀಗೆ ವಾಹನಗಳು ಮುಂದೆ ಸಾಗುತ್ತಿದ್ದಂತೆ ದಾರಿ ಮಧ್ಯೆ ಆನೆಯೊಂದು ಕಾಣಿಸುತ್ತದೆ. ಅದರಲ್ಲಿ ಚಾಲಕನಿಂದ ಬಾಳೆಹಣ್ಣನ್ನು ಪಡೆದು ವಾಹನವನ್ನು ಮುಂದೆ ಕಳಿಸುತ್ತದೆ.
ದೃಶ್ಯ ನೋಡಿ ಖುಷಿಪಟ್ಟ ಐಎಎಸ್ ಅಧಿಕಾರಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ‘ಸಿಹಿಯಾದ ಟೋಲ್ ಸಂಗ್ರಹ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
Sweetest toll collection 😅 pic.twitter.com/fEMzPUJdge
— Dipanshu Kabra (@ipskabra) January 3, 2022