ದೆಹಲಿ: (ಜ.4): Corona Positive :ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಕೊರೊನಾ ಸೋಂಕು ತಗಲಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ನನಗೆ ಕೊರೋನಾದ ಸೌಮ್ಯ ಲಕ್ಷಣಗಳು ಕಾಣುತ್ತಿದೆ. ಕಳೆದ ಕೆಲವು ದಿನಗಳಿಂದ ನನಗೆ ಸಂಪರ್ಕಕ್ಕೆ ಬಂದ ಎಲ್ಲರೂ ತಪಾಸಣೆ ಮಾಡಿಸಿಕೊಳ್ಳಿ ಹಾಗೂ ಮನೆಯಲ್ಲಿ ಐಸೋಲೆಟ್ ಅಗಿ ಎಂದು ಮನವಿ ಮಾಡಿದ್ದಾರೆ. ಆದರೆ ನಾನು ಕೊರೋನಾ ಅಥವಾ ಒಮಿಕ್ರೋನ್ ಸೋಂಕಿಗೆ ಒಳಗಾಗಿದ್ದೇನೋ ಎಂಬುದು ಇನ್ನೂ ಧೃಡ ಪಟ್ಟಿಲ್ಲ ಎಂದು ತಿಳಿಸಿದ್ದಾರೆ.

ಅರವಿಂದ್ ಕ್ರೇಜಿವಾಲ್ ಅವರು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಸಿಯಾಗಿದ್ದು ಕಳೆದ ನವೆಂಬರ್ ನಿಂದಲೂ ಪಂಜಾಬ್, ಉತ್ತರಕಾಂಡ್ ಗೋವಾ ಚುನಾವಣಾ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು ಹಾಗೂ ಜನ ಸಂಪರ್ಕಕ್ಕೆ ಹೋಗುತ್ತಿದ್ದರು.
ದೆಹಲಿಯಲ್ಲಿ ಹಳದಿ ಅಲರ್ಟ್
ಇನ್ನು ನೆನ್ನೆ ದೆಹಲಿಯಲ್ಲಿ ಕಳೆದ ವಾರದಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ನೆನ್ನೆ ಬಂದೆ ದಿನದೆಹಲಿಯಲ್ಲಿ 4099 ಕೊರೋನಾ ಕೇಸು ದಾಖಲಾಗಿದೆ ಹಾಗೂ ಪಾಸಿಟಿವಿಟಿ ರೇಟ್ ಶೇ.6.46 ರಷ್ಟು ಇದೆ. ಇನ್ನು ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕೂಡ ಕಡಿಮೆಯಾಗಿಲ್ಲ. ಈಗಾಗಲೇ ದೆಹಲಿಯಲ್ಲಿ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ ಸದ್ಯ ಹಳದಿ ಅಲರ್ಟ್ ಪರಿಸ್ಥಿತಿ ಸಂಪೂರ್ಣ ಆಗಬಹುದಾದ ಸಾಧ್ಯತೆಗಳು ಕಾಣುತ್ತಿದೆ.

ಕಳೆದ 2020 ರಲ್ಲಿ ಅರವಿಂದ ಕ್ರೇಜಿವಾಲ್ ಅವರಿಗೆ ತೀವ್ರವಾದ ಜ್ವರ ಗಂಟಲು ನೋವು ಕಾಣಿಸಿಕೊಂಡಿತ್ತು ಆಗ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ವರದಿ ಬಂದಿತ್ತು. ಶೀತ ಜ್ವರ ಬಂದಾಗಿನಿಂದಲೂ ಎಲ್ಲಾ ಸಭೆಗಳನ್ನು ರದ್ದುಮಾಡಿ ಮನೆಯಲ್ಲಿ ಇದ್ದರು ಹಾಗೂ ಅವರ ಪತ್ನಿ ಕೂಡ ಸೋಂಕು ತಗುಲಿತ್ತು ಎನ್ನಲಾಗಿದೆ.