ಮೈಸೂರು: (ಜ.3) Mekedatu: ಯಾವುದೇ ಶುಭ ಕಾರ್ಯಕ್ರಮ ಮಾಡುವ ಮುನ್ನ ದೇವಿಯ ಪ್ರಾರ್ಥನೆ ಮಾಡುವುದು ಸಂಪ್ರದಾಯ.
ಎಲ್ಲ ಅಡಚಣೆಗಳನ್ನು ಸಂಹಾರ ಮಾಡುವ ಶಕ್ತಿ ಈ ದೇವಿಗೆ ಇದೆ. ತಾಯಿ ಚಾಮುಂಡೇಶ್ವರಿಯನ್ನು ನಂಬಿರುವವರು ನಾವು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಂದು ಹೇಳಿದರು.

ರಾಜ್ಯ ಹಿತ ಕಾಪಾಡಲು ಹೋರಾಟ:
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಡಿ. ಕೆ. ಶಿವಕುಮಾರ್ ಅವರು, ನಾನು ರಾಜ್ಯದ ಹಿತ, ಕುಡಿಯುವ ನೀರು, ಕಾವೇರಿ ಜಲಾನಯನ ಪ್ರದೇಶದ ರೈತರಿಗಾಗಿ ನಾವು ಮೇಕೆದಾಟು ಹೋರಾಟ ಮಾಡುತ್ತಿದ್ದೇವೆ.
ಚಾಮರಾಜನಗರ ನಗರ ಕೂಡ ಮೈಸೂರು ಜಿಲ್ಲೆ ಭಾಗ. ಮತ್ತೊಂದು ರಾಮನಗರ ಬೆಂಗಳೂರಿನ ಒಂದು ಭಾಗ.
ಮೇಕೆದಾಟು ಒಂದು ದಡ ಮೈಸೂರು ಜಿಲ್ಲೆಯಾದರೆ, ಮತ್ತೊಂದು ದಡ ಬೆಂಗಳೂರಿಗೆ ಸೇರಿದೆ. ಅದರ ಮಧ್ಯೆ ಕಾವೇರಿ ತಾಯಿ ಹರಿಯುತ್ತಿದ್ದಾಳೆ.

ಜಿಲ್ಲೆಗಳ ಸಂಗಮ:
ಈ ಯೋಜನೆ ಮೈಸೂರು ಹಾಗೂ ಬೆಂಗಳೂರು ಜನತೆಯ ಹಕ್ಕು. ಮೈಸೂರು ಬೆಂಗಳೂರು ಸೇರಿಸುವ ಸ್ಥಳವೇ ಸಂಗಮ ಹಾಗೂ ಮೇಕೆದಾಟು.
ವಾಜಪೇಯಿ ಅವರ ಕಾಲದಲ್ಲಿ ಆಡ್ವಾಣಿ ಅವರು ರಥಯಾತ್ರೆ ಮಾಡಿದರು. ಈ ಹಿಂದೆ ದೇವೇಗೌಡರು ಅನೇಕ ಯಾತ್ರೆ ಮಾಡಿದ್ದಾರೆ. ಅದನ್ನೆಲ್ಲ ನೀವು ಏನೆಂದು ಕರೆಯುತ್ತೀರಿ.
ಕುಮಾರಣ್ಣನವರು ಹೋರಾಟ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಏನನ್ನುತ್ತೀರಿ? ಯಡಿಯೂರಪ್ಪನವರು ಹೋರಾಟ ಮಾಡಿದ್ದರು, ಮೊನ್ನೆ ನೂತನ ಕೇಂದ್ರ ಸಚಿವರು ಕೋವಿಡ್ ಸಮಯದಲ್ಲೇ ಯಾತ್ರೆ ಮಾಡಿದರು. ಅದಕ್ಕೆ ಅವಕಾಶ ಇತ್ತೇ? ಇದೆಲ್ಲವನ್ನು ನಿಮ್ಮ ವಿವೇಚನೆಗೆ ಬಿಡುತ್ತೇವೆ.