ಸಚಿವ ಅಶ್ವಥ್ ನಾರಾಯಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಧರಣಿ!
ರಾಮನಗರ:( ಜ.3)D.K Suresh v/s Ashwath: ಸಿಎಂ ಬಸವರಾಜ್ ಬೊಮ್ಮಾಯಿ ಅವರ ಎದುರಲ್ಲಿ ಡಿ.ಕೆ ಸುರೇಶ್ ಅವರ ಬೆಂಬಲಿಗರು ಡಿಕೆ..ಡಿಕೆ ಎಂದು ಘೋಷಣೆ ಕೂಗಿ ಸಚಿವ ಅಶ್ವತ್ಥನಾರಾಯಣ ಅವರ ಭಾಷಣಕ್ಕೆ ಅಡ್ಡಿ ಪಡಿಸಿದ್ದಾರೆ.
ರಾಮನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅಂಬೇಡ್ಕರ್ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿದ ಬಳಿಕ ವೇದಿಕೆಯಲ್ಲಿ ಸಿಎಂ ಅವರ ಸಮ್ಮುಖದಲ್ಲಿ ಅಶ್ವತ್ಥನಾರಾಯಣ ಹಾಗೂ ಡಿಕೆ ಸುರೇಶ್ ಅವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ರಾಮನಗರದ ಹೆದ್ದಾರಿಯಲ್ಲಿ ಹಾಕಿದ್ದ ಫ್ಲೆಕ್ಸ್ ಹರಿದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರಿಂದ ಧರಣಿ ನಡೆಸಲಾಗಿದೆ.
ಸಚಿವ ಅಶ್ವತ್ ನಾರಾಯಣ್ ಅವರ ಭಾಷಣಕ್ಕೆ ಡಿಕೆ ಸುರೇಶ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ಕಾಲದಲ್ಲೇ ಅಡಿಗಲ್ಲು, ನಮ್ಮ ಕಾಲದಲ್ಲಿಯೇ ಉದ್ಘಾಟನೆ ನಮ್ಮ ಸರ್ಕಾರದಲ್ಲಿ ಬೇರೆ ಸರ್ಕಾರದ ರೀತಿ ಅಲ್ಲ ಎಂದು ಅಶ್ವತ್ಥನಾರಾಯಣ್ ಅವರು ಭಾಷಣ ಮಾಡಿದ್ದಾರೆ.
ನೀರಾವರಿ ಯೋಜನೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ನಮ್ಮ ಅಭಿವೃದ್ಧಿ ಮಾಡಿಕೊಳ್ಳುವುದು ಮಾತ್ರ ಮಾಡಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದ ವೇಳೆ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಸಚಿವ ಅಶ್ವಥ್ ನಾರಾಯಣ ಹಾಗೂ ಡಿಕೆ ಸುರೇಶ್ ಅವರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಸಂದರ್ಭದಲ್ಲಿ ಎಂಎಲ್ಸಿ ರವಿ ಅವರು ಅಶ್ವತ್ಥ ಅವರ ಬಡಿತ ಮೈಕನ್ನು ಹಿಡಿದು ಎಳೆದಾಡಿ ದ್ದು ಏನು ತಪ್ಪಾಗಿದೆ ಎಂದು ಕೂಗುವುದು, ಕೆಲಸದಲ್ಲಿ ತೋರಿಸಿ ಕಾರ್ಯಕ್ರಮದಲ್ಲಿ ಗಲಾಟೆ ಮಾಡುವುದು ಎಂದು ಅಶ್ವಥ್ ನಾರಾಯಣ್ ಅವರು ಪ್ರಶ್ನೆ ಮಾಡಿದ್ದಾರೆ,.
ನಾವು ಜಿಲ್ಲೆಗೆ ಬಂದನೆ ಮಾಡಲು ಬಂದಿಲ್ಲ ಸಿಎಂ ಬಂದಾಗ ಅವರಿಗೆ ಅಗೌರವ ತೋರಿಸುತ್ತೀರಾ ಎಂದು ಅಶ್ವಥನಾರಾಯಣ ಅವರು ಉತ್ತರಿಸಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ನಮ್ಮ ಪ್ರತಿನಿಧಿ ಇಲ್ಲದಿದ್ದರೂ ಕೈಬಿಟ್ಟಿಲ್ಲ ಜಿಲ್ಲೆಯನ್ನು ಅಭಿವೃದ್ಧಿಯಿಂದ ಕೈಬಿಟ್ಟಿಲ್ಲ ಎಂದು ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.
ಘಟನೆ ಬಗ್ಗೆ ಡಿಕೆ ಸುರೇಶ್ ಅವರು ಮಾತನಾಡಿ, ಬಿಜೆಪಿ ಬಂದಮೇಲೆ ರೇಷ್ಮೆಗೆ ಬೆಲೆ ಬರಲಿಲ್ಲ, ಜನಪ್ರತಿನಿಧಿಗಳ ಸಭೆ ಕರೆದಿಲ್ಲ ಯಾವುದು ಸಂಸ್ಕೃತ ಆರೆಸ್ಸೆಸ್ ಅವರು ಹೇಳಿಕೊಟ್ಟರ? ನಮ್ಮ ಸಂಸ್ಕೃತಿಯ ಬಗ್ಗೆ ಮಾತನಾಡುವುದು ಬೇಡ ಆರೋಗ್ಯ ವಿವಿಗೆ ವಿರೋಧ ವ್ಯಕ್ತಪಡಿಸಿದ್ದು ಸಚಿವ ಅಶ್ವಥ್ ನಾರಾಯಣ್ ಅವರು. ಸಿಂಡಿಕೇಟ್ ತನ್ನಲ್ಲಿ ವಿರೋಧ ವ್ಯಕ್ತಪಡಿಸಿದ್ದು ಸಚಿವ ಆಶೀರ್ವಾದ ಎಂದು ಡಿಕೆ ಸುರೇಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ನೀವಾಗಿ ನಡೆದುಕೊಳ್ಳಲಿಲ್ಲ ಸಚಿವರು ಸವಾಲೆಸೆದು ಕರೆದಾಗ ಸುಮ್ಮನೆ ಕೂರಲು ಆಗಲಿಲ್ಲ ಇದು ರಾಜ್ಯ ಸರ್ಕಾರದ ವತಿಯಿಂದ ನಡೆದ ಕಾರ್ಯಕ್ರಮ ಆದರೆ ಇದು ಬಿಜೆಪಿ ಕಾರ್ಯಕ್ರಮದಂತೆ ಕಾಣುತ್ತಿದೆ. ರಾಮನಗರ ಜಿಲ್ಲಾ ಪಂಚಾಯತ್ ವತಿಯಿಂದ ಅನುದಾನ ಪಡೆದಿದ್ದಾರೆ ಇಲ್ಲಿ ಹಾಕಿರುವ ಎಲ್ಲಾ ಕಲ್ಲುಗಳು ನಾವು ತಂದಿದ್ದೆವು ಸಚಿವರು ಎಲ್ಲವನ್ನು ನಾವೇ ಮಾಡಿದ್ದೇವೆಂದು ಪ್ರದರ್ಶಿಸಿದಾಗ ಸುಮ್ಮನಿರುವುದಕ್ಕೆ ಆಗಲಿಲ್ಲ. ಸಿಎಂ ಅವರ ಸಮ್ಮುಖದಲ್ಲಿ ವೇದಿಕೆಯಲ್ಲಿ ಅವರಿಗೆ ಉತ್ತರ ಕೊಟ್ಟಿದ್ದೇವೆ ಎಂದು ಘಟನೆ ನಡೆದ ಬಳಿಕ ಡಿಕೆ ಸುರೇಶ್ ಅವರು ಹೇಳಿಕೆ ನೀಡಿದ್ದಾರೆ.
ಕ್ಷಮೆಯಾಚಿಸಿದ ಡಿಕೆ ಸುರೇಶ್
ವೇದಿಕೆಯಲ್ಲಿ ನಡೆದ ಘಟನೆಗೆ ಸಿಎಂ ಅವರಲ್ಲಿ ಕ್ಷಮೆ ಯಾಚಿಸಬೇಕೆಂದು ರಾಮನಗರದಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ಹೇಳಿದ್ದಾರೆ. ನಾವು ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ರಾಮನಗರ ಜಿಲ್ಲೆಯ ಜನ ಯಾರಿಗೂ ಹೆದರಿಕೊಳ್ಳುವ ಜನರೆಲ್ಲ ಎಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡುತ್ತೇನೆ:
ರಾಮನಗರ ಜಿಲ್ಲೆಯ ಬರುತ್ತಿ ವಿಚಾರದಲ್ಲಿ ಸಹಕಾರ ನೀಡುತ್ತೇನೆ. ರಾಜೀವ್ ಗಾಂಧಿ ಆರೋಗ್ಯ ವಿವಿ ಗೆ ಚಾಲನೆ ಕೊಡಿ ನಮ್ಮ ಜಿಲ್ಲಾಸ್ಪತ್ರೆ ಉದ್ಘಾಟನೆಗೆ ಬರುತ್ತಾರೆ ಎಂದು ಅಂದುಕೊಂಡಿದ್ದೆ ಆದರೆ ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಹಣಕಾಸಿನ ಅವಶ್ಯಕತೆ ಇದೆ. ಇದು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಪ್ರಥಮ ಅನಾವರಣ ಕಾರ್ಯಕ್ರಮ. ರಾಜಕೀಯ ಭಿನ್ನಾಭಿಪ್ರಾಯ ವಿದ್ದರೂ ಒಂದಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇವೆ.ಬಿಜೆಪಿಯವರು ರಾಮನಗರಕ್ಕೆ ಏನು ಕೊಟ್ಟಿದ್ದಾರೆ ಎಂಬ ಪಟ್ಟಿ ಇದೆ ಎಂದು ಡಿಕೆ ಸುರೇಶ್ ಅವರು ತಿಳಿಸಿದ್ದಾರೆ.