ಬೆಂಗಳೂರು: (ಜ.3) Coronavirus:ಕರ್ನಾಟಕ ಸೇರಿದಂತೆ ದೇಶಾದ್ಯಂತ (Covid 3rd Wave) ಕೋವಿಡ್ ಮೂರನೇ ಅಲೆಯು ಅತಿವೇಗದಲ್ಲಿ ಹೆಚ್ಚಾಗುತ್ತಿದ್ದು, ಜನವರಿ 2ರಂದು ದೇಶಾದ್ಯಂತ 27,553 ಜನರಿಗೆ (Corona Positive) ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,22,801ಕ್ಕೆ ಏರಿಕೆಯಾಗಿದೆ.
ಭಾನುವಾರದಂದು ಕರ್ನಾಟಕದಲ್ಲಿ 1,187 ಪಾಸಿಟಿವ್ ಪ್ರಕರಣಗಳು (covid) ಹೊಸದಾಗಿ ದಾಖಲಾಗಿವೆ. ಇದರಲ್ಲಿ 923 ಪ್ರಕರಣಗಳು ರಾಜಧಾನಿ (Bangalore)ಬೆಂಗಳೂರಿನಲ್ಲಿ ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಎರಡನೇ ಅಲೆಯಂತೆ ಮೂರನೇ ಅಲೆಯಲ್ಲೂ ಕೂಡ ನೆರೆ ರಾಜ್ಯ (Maharashtra)ಮಹಾರಾಷ್ಟ್ರ ಮುಂಚೂಣಿಯಲ್ಲಿದ್ದು, ಅಲ್ಲಿ ಬರೋಬ್ಬರಿ 11,877 ಕೊವಿಡ್ ಪ್ರಕರಣಗಳು ಒಂದೇ ದಿನ ದೃಢಪಟ್ಟಿದೆ.
ತಮಿಳುನಾಡಿನಲ್ಲಿ 1,594 ಹಾಗೂ(Kerala) ಕೇರಳದಲ್ಲಿ 2,802 ಮಂದಿಗೆ ಭಾನುವಾರ ಪಾಸಿಟಿವ್ ಬಂದಿದೆ. ಗೋವಾದಲ್ಲಿ (Goa) 388 ಜನರಿಗೆ ಹೊಸದಾಗಿ ಪಾಸಿಟಿವ್ ಬಂದಿದೆ.
ಕೋವಿಡ್ ನಿಯಂತ್ರಣಕ್ಕೆ ಈಗಾಗಲೇ ನೈಟ್ ಕರ್ಫ್ಯೂ (Night Curfew) ಜಾರಿಗೆ ತಂದಿರುವ ಕರ್ನಾಟಕ ಸರ್ಕಾರವು ಸದ್ಯದಲ್ಲೇ ಕಠಿಣ ನಿಯಮಗಳನ್ನು ಘೋಷಿಸುವ ಸಾಧ್ಯತೆಯಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಕಂದಾಯ ಸಚಿವ ಆರ್.ಅಶೋಕ್, “ಶೀಘ್ರದಲ್ಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ.
ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸುತ್ತೇವೆ. ಕಠಿಣ ನಿಯಮಗಳನ್ನು ಜಾರಿಗೆ ತರಬೇಕೆಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ” ಎಂದು ತಿಳಿಸಿದ್ದಾರೆ.
ನಾಲ್ಕು ತಿಂಗಳ ಬಳಿಕ ಸಾವಿರ ಕೇಸ್
ಸೆಪ್ಟೆಂಬರ್ 9, 2021ರ ನಂತರ ರಾಜ್ಯದ ಕೋವಿಡ್ ಪ್ರಕರಣಗಳು ಸಾವಿರದ ಗಡಿ ದಾಟಿರಲಿಲ್ಲ. ಹಂತಹಂತವಾಗಿ ಕಡಿಮೆಯಾಗಿ 200ರ ಆಸುಪಾಸಿಗೆ ಬಂದಿತ್ತು. ಈಗ ಮತ್ತೆ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪ್ರತಿದಿನ ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ.
ರಾಜ್ಯದಲ್ಲಿ ಈವರೆಗಿನ ಓಮಿಕ್ರಾನ್(Omicron) ಪ್ರಕರಣಗಳ ಸಂಖ್ಯೆ 66 ತಲುಪಿದೆ. ಕೋವಿಡ್ ಹಾಗೂ ಓಮಿಕ್ರಾನ್ ಪ್ರಕರಣಗಳು ಒಂದು ವಾರದಲ್ಲಿ ಎರಡು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂಬ ಮಾಹಿತಿಯನ್ನು ತಜ್ಞರು ಹೊರಹಾಕಿದ್ದಾರೆ.
ಕೆಂಪು ವಲಯ ಬೆಂಗಳೂರು

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣಕ್ಕೆ ಕೇಂದ್ರ ಸರ್ಕಾರವು ಬೆಂಗಳೂರನ್ನು “ಕೆಂಪು ವಲಯ” (Red Zone) ಎಂದು ಗುರುತಿಸಿದೆ. ಒಂದು ಹಾಗೂ ಎರಡನೇ ಅಲೆಯಲ್ಲಿ ಕೂಡ ಹಲವು ತಿಂಗಳುಗಳ ಕಾಲ ಬೇರೆ ಜಿಲ್ಲೆಗಳಿಗಿಂತ ಅತ್ಯಧಿಕ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿದ್ದವು. ರಾಜ್ಯದ ಒಟ್ಟು ಕೋವಿಡ್ ಪ್ರಕರಣಗಳ ಪೈಕಿ ಶೇ. 75ಕ್ಕೂ ಅಧಿಕ ಪ್ರಕರಣಗಳು ಪ್ರಸ್ತುತ ರಾಜಧಾನಿಯಲ್ಲಿ ಕಾಣಿಸಿಕೊಳ್ಳುತ್ತಿವೆ.
ಮತ್ತೆ ಲಾಕ್‌ಡೌನ್?
ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್‌ಗೆ(Delta and Delta Plus) ಹೋಲಿಸಿದರೆ ಈಗ ಪತ್ತೆಯಾಗುತ್ತಿರುವ ಓಮಿಕ್ರಾನ್ ಹೆಚ್ಚು ಅಪಾಯಕಾರಿಯಲ್ಲ ಎಂದು ಹೇಳಲಾಗುತ್ತಿದೆ. ಆದರೆ ಸಮುದಾಯಕ್ಕೆ (Community)ವ್ಯಾಪಕವಾಗಿ ಹರಡಿದ ನಂತರ ಓಮಿಕ್ರಾನ್ ವೇರಿಯಂಟ್ ಕೂಡ ಅಪಾಯಕಾರಿಯಾಗಿ ಬದಲಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಆದ್ದರಿಂದ, (3rd Wave)ಮೂರನೇ ಅಲೆಯು ತೀವ್ರವಾಗಿ ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶೀಘ್ರವೇ ಲಾಕ್‌ಡೌನ್ (Lock Down) ಘೋಷಿಸುವುದು ಒಳ್ಳೆಯದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಓಮಿಕ್ರಾನ್‌ಗೆ ಮೊದಲ ಬಲಿ
ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ (South Africa) ಮೊದಲ ಬಾರಿ ಕಾಣಿಸಿಕೊಂಡ ಓಮಿಕ್ರಾನ್ ವೇರಿಯಂಟ್ ಪ್ರಸ್ತುತ 106 ದೇಶಗಳಲ್ಲಿ ವ್ಯಾಪಿಸಿದೆ. ಓಮಿಕ್ರಾನ್‌ಗೆ ಭಾರತದ ಮೊದಲ ಬಲಿಯು (Death) ಮಹಾರಾಷ್ಟ್ರದಲ್ಲಿ ಸಂಭವಿಸಿದ್ದು, 52 ವರ್ಷದ ಓಮಿಕ್ರಾನ್ ಪಾಸಿಟಿವ್ (Omicron Positive) ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಓಮಿಕ್ರಾನ್ ದೃಢಪಟ್ಟಿತ್ತಾದರೂ(Heart Attack) ಹೃದಯಾಘಾತಕ್ಕೆ ಬೇರೆ ಕಾರಣ ಕೂಡ ಇರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಮೂರನೇ ಅಲೆಗೆ ವರವಾಗುತ್ತಾ ಚುನಾವಣೆ?
ಕೋವಿಡ್ ಹೆಚ್ಚುತ್ತಿದ್ದರೂ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಮುಂದೂಡುವ ಪ್ರಸ್ತಾವನೆಯಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಚುನಾವಣೆ(Election) ಪ್ರಚಾರಕ್ಕೆಂದು ನಡೆಯುವ ಬೃಹತ್ ಸಮಾವೇಶಗಳು, ಮೆರವಣಿಗೆಗಳು ಮೂರನೇ ಅಲೆಯು ವ್ಯಾಪಕವಾಗಿ ಹರಡುವಂತೆ ಮಾಡುವ ಆತಂಕ ಎದುರಾಗಿದೆ. ಚುನಾವಣಾ ಪ್ರಚಾರದ ವೇಳೆ ಜನಸಂದಣಿ ನಿಯಂತ್ರಣಕ್ಕೆ ಸರ್ಕಾರ ಕ್ರಮಕೈಗೊಳ್ಳಲಿದೆಯೇ ಎಂದು ಕಾದುನೋಡಬೇಕಿದೆ.