‘ಲಸಿಕೆ ಅಭಿಯಾನದಲ್ಲಿ ಒಂದೇ ದಿನ 3.8ಲಕ್ಷ ಲಸಿಕೆ‘
ಬೆಂಗಳೂರು: (ಜ.3)Coronavirus ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಒಟ್ಟು ಇಂದು ರಾಜ್ಯದಲ್ಲಿ 1290 ಪ್ರಕರಣಗಳು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈಗಾಗಲೇ ಸಾವಿರ ಗಡಿ ದಾಟಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿದೆ ಇದೇ ವೇಳೆ ರಾಜ್ಯದ ಬೆಂಗಳೂರಿನಲ್ಲಿ ರೆಡ್ ಝೋನ್ ಘೋಷಣೆ ಮಾಡಲಾಗಿದೆ.
3.8 ಲಕ್ಷ ಲಸಿಕೆ
ಇಂದು ದೇಶಾದ್ಯಂತ ಆರಂಭವಾಗಿರುವ 15 ರಿಂದ 18 ವರ್ಷದ ವಿದ್ಯಾರ್ಥಿಗಳಿಗೆ ಲಸಿಕೆ ಅಭಿಯಾನದಲ್ಲಿ ಒಂದೇ ದಿನ 3.8ಲಕ್ಷ ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
ರಾಜ್ಯದಲ್ಲಿ ಕೊರೋನಾ ವೈರಸ್ ಜೊತೆ ಒಮಿಕ್ರೋನ್ ಪ್ರಕರಣಗಳು ಕೂಡ ಏರಿಕೆಯಾಗಿದ್ದು ಡಬ್ಬಲ್ ಹೊಡೆತ ಬಿದ್ದಿದೆ. ಕರ್ನಾಟಕದಲ್ಲಿ ಪಾಸಿಟಿವಿಟಿ ರೇಟ್ 1.60% ರಷ್ಟು ದಾಖಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಇಂದು ಯಾವುದೇ ಹೊಸ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿಲ್ಲ ಅದರೆ ಇಲ್ಲಿಯವರೆಗೂ 77 ಒಮಿಕ್ರೊನ್ ಪ್ರಕರಣಗಳು ದಾಖಲಾಗಿದೆ.

ನಾಳೆ ತಜ್ಞರ ಜೊತೆ ಸಭೆ:
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಾಳೆ ಸಂಜೆ ತಜ್ಞರ ಜೊತೆ ಚರ್ಚೆ ನಡೆಸಿ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಸ್ಥಿತಿಗತಿಗಳ ಕುರಿತು ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಮಾಲೋಚನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ನೆರೆ ರಾಜ್ಯಗಳಲ್ಲಿ ಸೋಂಕು ಹರಡುತ್ತದೆ ಹೀಗಾಗಿ ಜೊತೆಗೆ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ಕೊರೋನಾ ನಿಯಂತ್ರಣ ಕುರಿತು ತೆಗೆದುಕೊಳ್ಳಬೇಕಾದ ನಿರ್ಧಾರಗಳು ಹಾಗೂ ಕ್ರಮಗಳ ಬಗ್ಗೆ ತಜ್ಞರ ಸಮಿತಿಗೆ ಸಲಹೆಯನ್ನು ಕೇಳಲಾಗಿದೆ ಎಂದು ಹೇಳಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು?
ಬಾಗಲಕೋಟೆ 0
ಬಳ್ಳಾರಿ 11
ಬೆಳಗಾವಿ 14
ಬೆಂಗಳೂರು ಗ್ರಾಮಾಂತರ 8
ಬೆಂಗಳೂರು ನಗರ 1041
ಬೀದರ್ 1
ಚಾಮರಾಜನಗರ 0
ಚಿಕ್ಕಬಳ್ಳಾಪುರ 2
ಚಿಕ್ಕಮಗಳೂರು 2
ಚಿತ್ರದುರ್ಗ 1
ದಕ್ಷಿಣಕನ್ನಡ 52
ದಾವಣಗೆರೆ 2
ಧಾರವಾಡ 19
ಗದಗ 1
ಹಾಸನ 11
ಹಾವೇರಿ 0
ಕಲಬುರ್ಗಿ 9
ಕೊಡಗು 10
ಕೋಲಾರ 6
ಕೊಪ್ಪಳ 1
ಮಂಡ್ಯ 13
ಮೈಸೂರು 14
ರಾಯಚೂರು 2
ರಾಮನಗರ 0
ಶಿವಮೊಗ್ಗ 13
ತುಮಕೂರು 6
ಉಡುಪಿ 43
ಉತ್ತರ ಕನ್ನಡ 2
ವಿಜಯಪುರ 5
ಯಾದಗಿರಿ 1
ಇತರೆ 0
ಇದನ್ನೂ ಓದಿ:Coronavirus: ರಾಜ್ಯದಲ್ಲಿ ಕೋವಿಡ್ ಸ್ಫೋಟ: ರಾಜಧಾನಿ ರೆಡ್ ಝೋನ್ ಘೋಷಣೆ