Kajal Agarwal: (ಜ.2) ಮಗಧೀರ ಚಿತ್ರದ ನಟಿಯಾಗಿ ಖ್ಯಾತಿ ಪಡೆದ ಕಾಜಲ್ ಅಗರ್ವಾಲ್ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. ಟಾಲಿವುಡ್ ಸುಂದರಿ ಹೊಸ ವರ್ಷದ ಮೊದಲ ದಿನವೇ ಅಭಿಮಾನಿಗಳಿಗೆ ತಾಯಿ ಆಗುತ್ತಿರುವ ಮೂಲಕ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಈ ವಿಚಾರವನ್ನು ಅವರ ಪತಿ ಗೌತಮ ಕಿಚ್ಲು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು ಕಾಜಲ್ ಅಗರ್ವಾಲ್ ಮತ್ತು ಗೌತಮ್ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಕಾಜಲ್ ಅವರ ಫೋಟೋ ಶೇರ್ ಮಾಡಿ “ನಿಮ್ಮನ್ನು ನೋಡುತ್ತಿದ್ದಾರೆ 2022” Here’s Looking at you 2022 ಎಂಬ ಶೀರ್ಷಿಕೆ ಕೊಟ್ಟು ಗರ್ಭಿಣಿ ಮಹಿಳೆಯ ಎಮೋಜಿ ಶೇರ್ ಮಾಡಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಅಭಿಮಾನಿಗಳು ದಂಪತಿಗಳಿಗೆ ಶುಭಾಶಯ ತಿಳಿಸಿದ್ದಾರೆ ನಿಮ್ಮಿಬ್ಬರ ಜೀವನದ ಅತ್ಯಂತ ಸುಂದರ ಕ್ಷಣ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಜೂನಿಯರ್ ಗೌತಮ್ ಅಥವಾ ಜೂನಿಯರ್ ಕಾಜಲ್ ಬರಲಿ ಎಂದು ಮತ್ತೊಬ್ಬರು ಹಾರೈಸಿದ್ದಾರೆ.
ಗೌತಮ್ ಮತ್ತು ಕಾಜಲ್ ಅವರು ಇತ್ತೀಚೆಗೆ ತಮ್ಮ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು ಹಾಗೂ ಅದರ ಫೋಟೋಗಳನ್ನು ಕೂಡ ಮಾಡಿದ್ದರು.
ತಾಯಿ ಆಗುತ್ತಿರುವ ಬಗ್ಗೆ ಕಾಜಲ್ ಅವರು ಮಾತನಾಡಿ, ಕಾಜಲ್ ತನ್ನ ಸಹೋದರಿ ನಿಶಾ ತಾಯಿ ಆಗುತ್ತಿರುವುದನ್ನು ನೋಡಿ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಇದು ನನಗೆ ಉತ್ಸುಕತೆಯನ್ನು ಉಂಟು ಮಾಡುತ್ತದೆ ಆದರೆ ಇದೇ ಸಮಯದಲ್ಲಿ ಇದು ನನಗೆ ಆತಂಕವಾಗುತ್ತಿದೆ.
ಇದನ್ನೂ ಓದಿ:Gajanana and Gang: ಫೆ.4ರಂದು ಬೆಳ್ಳಿತೆರೆಗೆ ಎಂಟ್ರಿ ಕೊಡ್ತಾರೆ ‘ಗಜಾನನ ಅಂಡ್ ಗ್ಯಾಂಗ್’ ಹುಡ್ಗರು…!
ಅವಳ ಜೀವನವು ಹೇಗೆ ಬದಲಾಗಿದೆ ಮತ್ತು ಅವಳಿಗೆ ಎಷ್ಟು ಪೂರ್ಣವಾಗಿದ್ದರೆ ಎಂದು ನೋಡಿದ್ದೇನೆ ಎಂದು ಹೇಳಿದ್ದಾರೆ. ಮಾತೃತ್ವ ಒಂದು ಅದ್ಭುತವಾದ ಭಾವನೆ ಎಂದು ನಾನು ಭಾವಿಸುತ್ತೇನೆ ಜೀವನದ ಹಂತದಲ್ಲಿ ಒಬ್ಬರು ಸ್ವಯಂ ಸಾಕ್ಷಾತ್ಕಾರದ ಮೂಲಕ ಹೋಗುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.