Sushant Singh Rajput:( ಜ.2): ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ (Sushant Singh Rajput)ಅವರು 36 ವಯಸ್ಸಿಗೆ ತಮ್ಮ ಜೀವನ ಅಂತ್ಯ ಕೊಂಡರು. ಅವರದ್ದು ಆತ್ಮಹತ್ಯೆ ಅಥವಾ ಕೊಲೆಯೆಂಬ ಸಂಗತಿಗೆ ಉತ್ತರ ಸಿಕ್ಕಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ನಟ ಸುಶಾಂತ್ ಸಿಂಗ್ ಅವರ ಫೇಸ್ ಬುಕ್ ಖಾತೆ ಆಕ್ಟಿವ್ (Facebook Active) ಆಗಿದೆ.
ಹೊಸ ವರ್ಷದ ಪ್ರಯುಕ್ತ ಸುಶಾಂತ್ ಸಿಂಗ್ ಅವರ ಅಧಿಕೃತ ಫೇಸ್ಬುಕ ಖಾತೆಯಿಂದ(New Year Wish) ಹೊಸ ವರ್ಷದ ಶುಭಾಶಯ ಕೋರಲಾಗಿದೆ. ನಿಧನರಾಗಿರುವ ಶುಶಾಂತ ಸಿಂಗ ಪೋಸ್ಟ್ ನೋಡಿ ಅಭಿಮಾನಿಗಳು ಗಾಬರಿಯಾಗಿದ್ದಾರೆ ಕೆಲವರು ಖುಷಿಪಟ್ಟಿದ್ದಾರೆ. ಅವರ ಖಾತೆ ಇದ್ದಕ್ಕಿದ್ದಂತೆ ಆಕ್ಟಿವ್ ಆಗಲು ಕಾರಣವೇನು? ಈ ಅಸಲಿ ಕಥೆ ಮುಂದೆ ನೋಡಿ.
2022ರ ಹೊಸ ವರ್ಷದ ಪ್ರಯುಕ್ತ ಸುಶಾಂತ್ ಸಿಂಗ್ ಅವರ(Official Facebook Account) ಅಧಿಕೃತ ಫೇಸ್ಬುಕ್ ಖಾತೆಯಿಂದ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ (Shwetha Singh Keerthi) ಅವರು ಪೋಸ್ಟ್ ಮಾಡಿದ್ದಾರೆ. ಸುಶಾಂತ್ ಸಿಂಗ್ ಅವರ ಅಭಿಮಾನಿಗಳು ಹಲವು ರೀತಿಯ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ.
ಕೆಲವರು ‘ಪೋಸ್ಟ್ ನೋಡಿ ಗಾಬರಿಯಾಯಿತು’ ಎಂದು ಹೇಳಿದರೇ ಕೆಲವರು, ಖುಷಿಯಿಂದ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ಸುಶಾಂತ್ ಅವರು ಬದುಕಿದ್ದರೆ ಚೆನ್ನಾಗಿರುತ್ತಿತ್ತು. ಒಟ್ಟಾರೆ ಅವರ ಅಭಿಮಾನಿಗಳು ಹೊಸ ವರ್ಷದಲ್ಲಿ ಫೇಸ್ಬುಕ್ ನಲ್ಲಿ ಪೋಸ್ಟ್ ಆಗಿರುವುದನ್ನು ನೋಡಿ ಸಖತ್ ಮಿಸ್ ಮಾಡಿಕೊಂಡಿದ್ದಾರೆ.