ಬಿಹಾರ: (ಜ.2): Properties : ದೇಶದಲ್ಲಿ ರಾಜಕಾರಣಿಗಳೇ ಶ್ರೀಮಂತರು ಎಂದು ಕರೆಯುವುದಾದರೆ ಅವರ ಮಕ್ಕಳು ಅವರಿಗಿಂತ ಒಂದು ಪಟ್ಟು ಸಿರಿವಂತರಾಗಿರುತ್ತಾರೆ. ಇದು ಸತ್ಯ ಕೂಡ ಹೌದು!
ಪ್ರತಿವರ್ಷ ಕೊನೆದಿನ ಸರ್ಕಾರದ ಸಂಪುಟದ ಎಲ್ಲಾ ಸಚಿವರ ತಮ್ಮ ಆಸ್ತಿಯನ್ನು ಘೋಷಣೆ ಮಾಡಬೇಕು. ಅವರ ಆಸ್ತಿ ಸರ್ಕಾರಿ ವೆಬ್ಸೈಟಿನಲ್ಲಿ ಉಲ್ಲೇಖ ವಾಗಬೇಕು ಎಂದು ನಿತೀಶ್ ಕುಮಾರ್ ಅವರು ಆದೇಶ ಹೊರಡಿಸಿದ್ದರು. ಹೀಗಾಗಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳು ಸೇರಿ ಎಲ್ಲರೂ ಕಡ್ಡಾಯವಾಗಿ ತಮ್ಮ ಆಸ್ತಿ ವಿವರವನ್ನು ನಮೂದಿಸಬೇಕಾಗುತ್ತದೆ.

ಬಿಹಾರದ ಸಿಎಂ ನಿತೀಶ್ ಕುಮಾರ್ ಗಡ್ಕರಿ ಅವರ ಮಗ ಕೂಡ ಸಿರಿವಂತರ ಲಿಸ್ಟಿನಲ್ಲಿ ಸೇರಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ಅಪ್ಪನಿಗಿಂತ ಐದು ಪಟ್ಟು ಹೆಚ್ಚು ಶ್ರೀಮಂತರು ಎಂದು ಹೇಳಲಾಗುತ್ತಿದೆ.
ಪುತ್ರನ ಬಳಿಯಿರುವ ಆಸ್ತಿ ಎಷ್ಟು?
ನಿತೀಶ್ ಕುಮಾರ್ ಗಡ್ಕರಿ ಅವರ ಚಿರಾಸ್ತಿ, ಸ್ಥಿರಾಸ್ತಿ ಎಲ್ಲವೂ ಸೇರಿದರೆ 75.36 ಲಕ್ಷ ರೂಪಾಯಿ ಮೌಲ್ಯ ಆಸ್ತಿ ಇದ್ದರೆ ಇನ್ನು ಅವರ ಪುತ್ರ ನಿಶಾಂತ್ ಬಳಿ ಐದು ಪಟ್ಟು ಜಾಸ್ತಿ ಇದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಬಿಹಾರ ಸರ್ಕಾರಿ ವೆಬ್ಸೈಟ್ನಲ್ಲಿ ಡಿಸೆಂಬರ್ 31ರಂದು ಉಲ್ಲೇಖವಾಗಿರುವ ಪ್ರಕಾರ ನಿತೀಶ್ ಕುಮಾರ್ ಬಳಿ 29,385 ರೂಪಾಯಿ ನಗದು ಇದೆ ಹಾಗೆ ಬ್ಯಾಂಕ್ ಅಕೌಂಟ್ ನಲ್ಲಿ 42,763 ರೂಪಾಯಿ ಇದೆ ಇನ್ನೂ ಅವರ ಪುತ್ರನ ಬಳಿ 16,549 ರೂಪಾಯಿ ಕೈಯಲ್ಲಿದ್ದರೆ, ಬ್ಯಾಂಕ್ ಖಾತೆಯ FD ನಲ್ಲಿ 1.28 ಕೋಟಿ ರೂಪಾಯಿ ಇದೆ.
ನಿತೀಶ್ ಕುಮಾರ್ ಬಳಿ 16.51 ಲಕ್ಷ ರೂಪಾಯಿ ಚರಾಸ್ತಿ, 58.85 ಲಕ್ಷ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪುತ್ರ ಕೋಟಿ ರೂಪಾಯಿಯಲ್ಲಿ ಸಂಪಾದಿಸಿದರೆ ಪುತ್ರ ನಿಶಾಂತ ಚರಾಸ್ತಿ ಮೌಲ್ಯ 1.63 ಕೋಟಿ ರೂಪಾಯಿ ಹಾಗೂ ಸ್ಥಿರಾಸ್ತಿ ಮೌಲ್ಯ 1.98 ಕೋಟಿ ರೂಪಾಯಿ ಹೊಂದಿದ್ದಾರೆ.
ಇನ್ನೂ ಸಿಎಂ ಅವರ ಬಳಿ, ದೆಹಲಿಯ ದ್ವಾರಕ ಸಹಕಾರಿ ಹೌಸಿಂಗ್ ಸೊಸೈಟಿಯಲ್ಲಿ ಒಂದು ವಸತಿ ಫ್ಲಾಟ್ ಹೊಂದಿದ್ದಾರೆ. ಹಾಗೆ ಇವರ ಪುತ್ರ ನಿಶಾಂತ ಕಲ್ಯಾಣ ಬಿಹಾ ಮತ್ತು ಹಕಿಕತ್ ಪುರದಲ್ಲಿ ಕೃಷಿ ಮತ್ತು ವಸತಿ ಗೃಹಗಳನ್ನು ಹೊಂದಿದ್ದಾರೆ. ಇನ್ನು ನಿಶಾಂತ ಅವರ ಬಳಿ ಕೃಷಿ ಭೂಮಿ ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಹೊಂದಿದ್ದು ,ನಿತೀಶ್ ಕುಮಾರ್ ಅವರು 1.45 ಲಕ್ಷ ರೂ ಮೌಲ್ಯದ 13 ಹಸುಗಳು ಹಾಗೂ 9 ಕರುಗಳನ್ನು ಹೊಂದಿದ್ದಾಗಿ ವೆಬ್ ಸೈಟ್ ನಲ್ಲಿ ದಾಖಲಾಗಿದೆ.
ಇದನ್ನೂ ಓದಿ: FCRA License: ವಿದೇಶಿ ಫಂಡಿಂಗ್ ಲೈಸೆನ್ಸ್ ಕಳೆದುಕೊಂಡ 12 ಸಾವಿರ ಎನ್‌ಜಿಒಗಳು