ಚಾಮರಾಜನಗರ :(ಜ.2) Mekedatu Project: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ,ನಿಮಗೆ ನೀರು ಬೇಕು ಎಂದರೆ ಮನೆಗೊಬ್ಬರಂತೆ ಬರಬೇಕು ಮೇಕೆದಾಟು ಯೋಜನೆಯಿಂದ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಿದೆ ಎಂದು ಹೇಳಿದರು.

ಚಾಮರಾಜನಗರಕ್ಕೆ ಬಂದಮೇಲೆ ನನ್ನ ಮುಖ್ಯಮಂತ್ರಿ ಸ್ಥಾನ ಗಟ್ಟಿಯಾಯಿತು ಈ ಮೊದಲು ಚಾಮರಾಜನಗರಕ್ಕೆ ಶಾಪಗ್ರಸ್ತ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿದ್ದರು ಆದರೆ ನಾನು ಯಾವುದನ್ನೂ ಲೆಕ್ಕಿಸದೆ ಜಿಲ್ಲೆಗೆ ಭೇಟಿ ನೀಡಿದ್ದೆ. ಅಧಿಕಾರ ಹೋಗುವ ಭೀತಿಯಿಂದ ಅಂದಿನ ಶಾಸಕ ವಾಟಾಳ್ ಪಟೇಲರನ್ನು ಮಹದೇಶ್ವರ ಬೆಟ್ಟಕ್ಕೆ ಕರೆದೊಯ್ದರು. ಚಾಮರಾಜನಗರ ನೂತನ ಜಿಲ್ಲೆಯಾಗಿ ಘೋಷಣೆ ಮಾಡಿದ್ದರು ನಾನು ಮತ್ತು ಬಿ ರಾಜಯ್ಯ ಚಾಮರಾಜನಗರಕ್ಕೆ ಬಂದು ಘೋಷಣೆ ಮಾಡಿದ್ದರು ಕೂಡ ಅವರು ಹೇಳಿದರು.
ಡಬಲ್ ಇಂಜಿನ್ ಸರ್ಕಾರ
ಮೇಕೆದಾಟು ಯೋಜನೆಗೆ ನಮ್ಮ ಸರ್ಕಾರ ಈಗಾಗಲೇ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಮೂರು ವರ್ಷ ಕಳೆದರೂ ಯೋಜನೆಗೆ ಯಾವುದೇ ಪ್ರಗತಿ ಕಂಡಿಲ್ಲ ಯೋಜನೆಗೆ ಅರಣ್ಯ ಇಲಾಖೆಯಿಂದ ಅನುಮತಿ ಸಿಗಬೇಕು ಮಾತಿಗೆ ಮುನ್ನ ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ಇಂದು ಡಬಲ್ ಇಂಜಿನ್ ಸರ್ಕಾರ ಇದ್ದರು ಯಾಕೆ ಯೋಜನೆಯನ್ನು ಜಾರಿ ಮಾಡುತ್ತಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: Congress Convention: ನಾವು ಸಮಾಜ ಒಗ್ಗೂಡಿಸಿದರೆ,ಬಿಜೆಪಿ ಕತ್ತರಿಸುತ್ತಾರೆ: ಡಿಕೆ ಶಿವಕುಮಾರ್
ಆಮ್ಲಜನಕ ದುರಂತದ ಬಗ್ಗೆ ಮಾತನಾಡಿದ ಅವರು, ಆಧುನಿಕ ದುರಂತದ ವೇಳೆ ಸರ್ಕಾರದ ಸುಳ್ಳನ್ನು ನಾವೇ ಬಯಲು ಮಾಡಿದ್ದು ಇಲ್ಲದೆ ಕೇವಲ ಮಾಡಿದ್ದಾರೆ ಎಂದು ವರದಿ ನೀಡಲಾಗಿತ್ತು. ಆದರೆ ಅಧಿಕಾರಿಗಳ ಜೊತೆ ಸಭೆ ನಡೆಸಿದಾಗ 36 ಜನ ಎಂದು ಗೊತ್ತಾಯಿತು. ಇದಕ್ಕೆ ಬಿಜೆಪಿ ಸರ್ಕಾರವೇ ಕಾರಣ ಇನ್ನೂ ಜಿಲ್ಲಾಧಿಕಾರಿ ಅವರು ಕೂಡ ಆದರೆ ಆರೋಗ್ಯ ಸಚಿವ ಮಾತ್ರ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.