ಚಾಮರಾಜನಗರ: (ಜ.2) Congress Convention:ಪ್ರತಿ ಮನೆ ಮನೆಗೂ ಹೋಗಿ ಕಾಂಗ್ರೆಸ್ ಸದಸ್ಯತ್ವ ಮಾಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷರ ಡಿಕೆ ಶಿವಕುಮಾರ್ ಅವರು ತಿಳಿಸಿದರು. ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭೇಟಿ ನೀಡಿದರು.
ಕಾಂಗ್ರೆಸ್ ಪಕ್ಷದಿಂದ ಜನಜಾಗೃತಿ ಸಮಾವೇಶ ಇಂದು ನಡೆಸಲಾಯಿತು. ಡಿಕೆ ಶಿವಕುಮಾರ್ ಅವರು ಮಾತನಾಡಿ, ಕಾಂಗ್ರೆಸ್ ಸದಸ್ಯತ್ವ ಪಡೆಯುವುದು ಹೆಮ್ಮೆಯ ವಿಚಾರ, ಎಐಸಿಸಿ ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಇದೆ ಹಾಗೂ ಪ್ರತಿ ಒಬ್ಬರು ಮಹಿಳೆ ಹಾಗೂ ಒಬ್ಬರನ್ನು ಕೊಳ್ಳಬೇಕು ಆನ್ಲೈನ್ನಲ್ಲಿ ನೋಂದಾಣಿ ಮಾಡಿಸಿಕೊಳ್ಳುವವರು ವೋಟರ್ ಐಡಿ ನೀಡಿದರೆ ಗುರುತಿನ ಚೀಟಿ ಇರುತ್ತದೆ ಆನ್ಲೈನ್ನಲ್ಲಿ ಸದಸ್ಯತ್ವಕ್ಕೆ ಆದ್ಯತೆ ಕೊಡಬೇಕು ಎಂದು ತಿಳಿಸಿದರು.

ಮೇಕೆದಾಟು ಪಾದಯಾತ್ರೆಗೆ ಆಹ್ವಾನ ನೀಡಿದ ಡಿಕೆಶಿ
ನಮ್ಮ ನೀರು ನಮ್ಮ ಹಕ್ಕು ಹೀಗಾಗಿ ಮೊದಲ ದಿನವೇ ಪಾದಯಾತ್ರೆಗೆ ಪಾಲ್ಗೊಳ್ಳಿ. ಎಷ್ಟು ದಿನ ಬರ್ತೀರಾ ಎಂದು ಮೊದಲೇ ಹೇಳಬೇಕು. ಪಾದಯಾತ್ರೆಯಲ್ಲಿ ಟಿ-ಶರ್ಟ ಟೋಪಿ ಹಾಗೂ ಊಟದ ವ್ಯವಸ್ಥೆ ವಸತಿ ವ್ಯವಸ್ಥೆ ಮಾಡಬೇಕು ನಿಮ್ಮ ಎಲ್ಲರಿಗೂ ರೂಮ್ ಕೊಡಲು ಆಗಲ್ಲ ಹಾಗೆ ನಿಮ್ಮ ಜೊತೆಯಲ್ಲೇ ಚೌಟ್ರಿ ಯಲ್ಲಿ ಮಲಗುತ್ತೇನೆ ಎಂದು ಡಿಕೆ ಶಿವಕುಮಾರ್ ಅವರು ಪಾದಯಾತ್ರೆಗೆ ಜನರನ್ನು ಆಹ್ವಾನಿಸಿದರು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರು ಕೈಯೆತ್ತಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ನಿಮ್ಮ ಎಂಎಲ್ಎ ಯಾರಾಗಬೇಕು?
ಕಾಂಗ್ರೆಸ ಪಕ್ಷಕ್ಕೆ ಒಮ್ಮೆ ಸದಸ್ಯರಾರೇ ನಾಯಕರ ಸಭೆ, ಮತ್ತಿತರ ಬಗ್ಗೆ ಮಾಹಿತಿ ದೊರೆಯಲಿದೆ. ರಾಹುಲ್ ಗಾಂಧಿ ಅವರು ಒಂದು ಮೆಸೇಜ್ ಹಾಕಿ ನಿಮ್ಮ ಎಂಎಲ್ಎ ಯಾರಾಗಬೇಕು ಎಂದು ಕೇಳಿದರೆ ಅದರಲ್ಲಿ ಉತ್ತರ ಕೊಡಬಹುದು. ಮುಂದಿನ ದಿನಗಳಲ್ಲಿ ಪದಾಧಿಕಾರಿಗಳ ಚುನಾವಣೆ ಕೂಡ ನಡೆಯಲಿದೆ ಒಳಗಡೆ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಮುಗಿಯಬೇಕು. ಏನೇ ಅನುಮಾನಗಳಿದ್ದರೂ ಬ್ಲಾಕ್ ಅಧ್ಯಕ್ಷರು ಡಿಸಿಸಿ ಅಧ್ಯಕ್ಷರನ್ನು ಸಂಪರ್ಕ ಮಾಡಿ ಎಂದು ಮನವಿ ಮಾಡಿದ್ದಾರೆ.
ಬಿಜೆಪಿ ಪಕ್ಷ ಕತ್ತರಿಯಂತೆ:
ಚಾಮರಾಜನಗರದಲ್ಲಿ ಮಂಜು ಹಮ್ಮಿಕೊಂಡಿದ್ದ ಜನಜಾಗೃತಿ ಸಮಾವೇಶದಲ್ಲಿ ಡಿಕೆಶಿ ಅವರು ಮಾತನಾಡಿ, ನಮ್ಮ ಸರ್ಕಾರ ಇದ್ದಾಗ ಅಭಿವೃದ್ಧಿಗೆ ಸಾವಿರಾರು ಕೋಟಿ ಮೀಸಲಿಟ್ಟಿದ್ದೇವೆ ನಾವು ಎಷ್ಟು ಹಣ ಕೊಟ್ಟಿದ್ದೇವೆ ಎಂದು ಬಿಜೆಪಿ ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನರ ಪರಿಸ್ಥಿತಿ ಹೇಗಿತ್ತು! ಆದರೆ ಈಗಿನ ಜನರ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಿಕೊಳ್ಳಿ. ಬಿಜೆಪಿಯವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಕಾಂಗ್ರೆಸ ಸೂಜಿಯ ಹಾಗೆ ಇದ್ದರೆ, ಬಿಜೆಪಿ ಕತ್ತರಿ ರೀತಿ ಎಂದು ಡಿಕೆ ಶಿವಕುಮಾರ್ ಅವರು ಟೀಕಿಸಿದರು. ನಾವು ಸಮಾಜ ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.