ಕಣ್ಣೂರು: (ಜ.1) : Morel Marriage: ಮದುವೆ ಅಂತ ಬಂದರೆ ಸಾಕು.. ಸಡಗರದಿಂದ ಗ್ರಾಂಡ್ ಅಗಿ ಮದುವೆಯಾಗುತ್ತಾರೆ. ತಮ್ಮ ಘನತೆ ಹಾಗೂ ಪ್ರತಿಭೆಯನ್ನು ತೋರಿಸಲು ಮದುವೆ ಮಾಡಿಕೊಳ್ಳುವುದು ಈಗಿನ ಟ್ರೆಂಡ್ ಆಗಿದೆ.
ಆದರೆ ಇಲ್ಲೊಂದು ಮದುವೆ ಸಮಾಜಕ್ಕೆ ಮಾದರಿಯಾಗಿದೆ. ಹೌದು ಇಲ್ಲಿ ನಡೆದಿರುವ ಮದುವೆಯಲ್ಲಿ ಅಂತದೇನು ವಿಶೇಷತೆಗೆ ನೋಡುವುದಾದರೆ, ಒಬ್ಬ ವ್ಯಕ್ತಿ ತನ್ನ ಮಗಳ ಜೊತೆ ಇತರ ಐವರು ಹೆಣ್ಣು ಮಕ್ಕಳ ಮದುವೆ ಮಾಡುವ ಮೂಲಕ ಸಾಮಾಜಿಕ ಕಾಳಜಿಯನ್ನು ಮೆರೆದಿದ್ದಾರೆ.
ಇದೊಂದು ಅಪರೂಪದ ಮದುವೆ ನಡೆದಿರುವುದು ಕೇರಳದ ಕಣ್ಣೂರಿನಲ್ಲಿ. ಇಲ್ಲಿನ ಮುಸ್ಲಿಂ ಸಲೀಂ ಎಂಬುವವರ ಮಗಳು ರಮೀಸಾ ಅವರ ಮದುವೆ ಜೊತೆ ವಯನಾಡು, ಎಡಚೆರಿ, ಗುಡಲೋರ್, ಮಲ್ಲಪುರಂ, ಹಾಗೂ ಮೆಪ್ಪಾಯಾರ್ ಮೂಲದ ಬಡಕುಟುಂಬದ ಯುವತಿಯರಿಗೆ ಅವರ ಧರ್ಮಕ್ಕೆ ಅನುಸಾರವಾಗಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಟ್ಟಿದ್ದಾರೆ.
ಮದುವೆಗೆ ಅವರಿವರ ಹತ್ತಿರ ದುಡ್ಡು ಕೇಳಿದರೂ ಕೊಡದ ಕಾಲದಲ್ಲಿ, ತಾವೇ ಮುಂದೆ ನಿಂತು ಅವರು ಹೆಣ್ಣುಮಕ್ಕಳ ಮದುವೆ ಮಾಡಿಸಿ ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂದು ತೋರಿಸಿದ್ದಾರೆ. ಸಾಮೂಹಿಕ ಮದುವೆಯಲ್ಲಿ ಎರಡು ಮದುವೆಗಳು ಹಿಂದೂ ಸಂಪ್ರದಾಯದಂತೆ ಇನ್ನು ಉಳಿದ ಮೂವರು ಇಸ್ಲಾಮಿಕ್ ಸಂಪ್ರದಾಯದಂತೆ ಮದುವೆಯಾಯಿತು.
ಮುನವ್ವರ ಅಲಿ ಶಿಹಾಬ್ ತಂಗಳ, ಎಂಬುವವರು ವಿವಾಹವನ್ನು ನೆರವೇರಿಸಿದವರು. ಸಲಿಮ ಮಗಳು ಧರಿಸಿದ್ದ ಸೀರಿಯಲ್ ಹೇಗೆಲ್ಲಾ ಹೆಣ್ಣುಮಕ್ಕಳು ಬಂದೇ ರೀತಿಯ ಸಿರಿಯನ್ನು ಧರಿಸಿದ್ದರು ಮೂಲಕ ನಾವೆಲ್ಲರೂ ಭಾರತೀಯರು ಎಂಬ ಸಂದೇಶದ ಜತೆಗೆ ನಾವೆಲ್ಲರೂ ಸಮಾನರು ಎಂದು ಸಾರಿದರು.

ಹೆಣ್ಣುಮಕ್ಕಳಿಗೆ ಉಡುಗೊರೆ:
ಹೆಣ್ಣುಮಕ್ಕಳಿಗೆ ಸಲೀಮ್ ಅವರು ಮದುವೆ ಮಾಡಿಕೊಳ್ಳುವುದಲ್ಲದೆ, ಎಲ್ಲ ಹೆಣ್ಣುಮಕ್ಕಳಿಗೂ ತಲಾ 10 ಪವನ್ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಸಲೀಮ್ ಅವರು ತಮ್ಮ ಮಗಳನ್ನು ವರದಕ್ಷಣೆ ಕೇಳದ ವ್ಯಕ್ತಿಯೊಂದಿಗೆ ಮದುವೆ ಮಾಡಲು ಇಚ್ಛಿಸಿದ್ದರು ಅದರಂತೆ ವರದಕ್ಷಣೆ ಪಡೆದವರನ್ನು ಕೂಡ ಹಾಗೂ ಮಗಳಿಗಾಗಿ ಎತ್ತುತ್ತಿದ್ದ ಹಣದಲ್ಲಿ ವೆಚ್ಚ ಮಾಡದೆ ಸಾಮಾಜಿಕ ಕಾರ್ಯಕ್ಕೆ ಬಳಸುವಂತಹ ಯೋಜನೆ ಮೊದಲೇ ಹಾಕಿಕೊಂಡಿದ್ದರು. ಇದಕ್ಕಾಗಿ ಅರ್ಹ ಕುಟುಂಬಗಳನ್ನು ಹುಡುಕುತ್ತಿದ್ದರು.
ಸಲೀಂ ಅವರ ಮಾನವೀಯತೆಗೆ ಇಡೀ ಕೇರಳ ಜಿಲ್ಲೆಯ ತಲೆಬಾಗಿದ್ದು ಅದ್ದೂರಿ ಹಾಗು ಆಡಂಬರದ ಮದುವೆ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಕೆಲ ಜನರಿಗೆ ಉದಾಹರಣೆಯಾಗಿದ್ದಾರೆ.
ಇದನ್ನೂ ಓದಿ: Fish Rain:ಟೆಕ್ಸಾಸ್ ನಗರದಲ್ಲಿ ಮೀನಿನ ಮಳೆ !! ಮಳೆಯ ಜೊತೆ ಮೀನುಗಳು ಬಿದ್ದಿರುವ ವಿಡಿಯೋ ವೈರಲ್!