ರಾಯಚೂರು: (ಜ.1) New Year Party: ಹೊಸವರ್ಷದ ಸಂಭ್ರಮಾಚರಣೆಯನ್ನು ಆಚರಿಸುವ ಹಿನ್ನೆಲೆಯಲ್ಲಿ ಆರೋಪಿಗಳು ಶಾಲೆಯಲ್ಲಿ ಪಾರ್ಟಿ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಬ್ಬಣ್ ಕಲ್ ಕ್ಯಾಂಪ ಸರ್ಕಾರಿ ಶಾಲೆಯ ಬೀಗ ಮುರಿದು ಶಾಲೆಯ ಒಳಗಡೆ ಎಣ್ಣೆ ಪಾರ್ಟಿ ಮಾಡಿದ್ದಾರೆ.
ಬೀಗ ಮುರಿದು, ಮೊಟ್ಟೆ ಮಾಂಸ ಬೇಯಿಸಿ ಪಾರ್ಟಿ:
ಶಾಲೆಯ ಬೀಗ ಮುರಿದು ಹೊಸವರ್ಷದ ಪಾರ್ಟಿ ಮಾಡಲು ಸಲುವಾಗಿ ಆರೋಪಿಗಳು ಶಾಲೆಯ ಬಿಸಿಯೂಟದ ಸಾಮಗ್ರಿಗಳನ್ನು ಬಳಸಿ ಮೊಟ್ಟೆ ಮಾಂಸ ಬೇಯಿಸಿಕೊಂಡು ಅಲ್ಲಿ ಇಲ್ಲಿ ಬೇಕಾಬಿಟ್ಟಿ ಬಿಸಾಕಿದ್ದಾರೆ.
ಶಾಲಾ ದಾಖಲೆಗಳು ನಾಶ:
ಶಾಲೆಯಲ್ಲಿರುವ ದಾಖಲಾತಿಗಳ ಮೇಲೆ ಮಧ್ಯ ಸುರಿದು ಹಾಳು ಮಾಡಿದ್ದಾರೆ.
ಶಾಲಾ ಅಡುಗೆಯಲಿದ್ದ ಮೊಟ್ಟೆ ಹಾಲು ಪುಡಿ ಸಕ್ಕರೆ ಅಡುಗೆಗೆ ಬಳಸುವ ವಸ್ತುಗಳ ಕಳ್ಳತನವಾಗಿದ್ದು ಮಕ್ಕಳಿಗಾಗಿ ನೀಡಲಾಗುತ್ತಿದೆ. ಅಲ್ಲದೆ ಆವರಣದಲ್ಲಿ ಮಧ್ಯದ ಬಾಟಲಿಗಳು ಮಾಂಸದ ತುಂಡುಗಳು ಪತ್ತೆಯಾಗಿದೆ. ಇಂದು ಬೆಳಗ್ಗೆ ಶಾಲೆಗೆ ಬಂದಾಗ ಆರೋಪಿಗಳು ಪಾರ್ಟಿ ಮಾಡಿರುವ ಬಗ್ಗೆ ಬೆಳಕಿಗೆ ಬಂದಿದೆ. ಆರೋಪಿಗಳ ಈ ಕೃತ್ಯಕ್ಕೆ ಮುಖ್ಯೋಪಾಧ್ಯಾಯರು ಮಾನ್ವಿ ಠಾಣೆಗೆ ದೂರು ನೀಡಿದ್ದಾರೆ.ಶಾಲೆಗೆ ಆಗಮಿಸಿದ್ದ ಪೊಲೀಸರು ಪರಿಶೀಲಿಸಿದ್ದಾರೆ.
ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿಯ ರೆಸಾರ್ಟ್ನಲ್ಲಿ ಮಸ್ತ್ ಪಾರ್ಟಿ ಮಾಡಿದ್ದಾರೆ. ಅಲ್ಲದೇ ಪಾರ್ಟಿ ಬಗ್ಗೆ ಪ್ರಶ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಮೇಲೆಯೇ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದಾರೆ.
ಜಡೇ ರೆಸಾರ್ಟ್ ಮಾಲೀಕ ಮತ್ತು ಸಹಚರರು ಚಿಕ್ಕಬಳ್ಳಾಪುರ ಇನ್ಸ್ಪೆಕ್ಟರ್ ಪ್ರಶಾಂತ್ ಎಂಬುವವರನ್ನ ಎಳೆದಾಡಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಅಗಲಗುರ್ಕಿ ಬಳಿಯ ರೆಸಾರ್ಟ್ನಲ್ಲಿ ರಾಜಾರೋಷವಾಗಿ ಡಿಜೆ ಹಾಕಿಕೊಂಡು ಪಾರ್ಟಿ ಮಾಡಿದ್ದಾರೆ. ಜೊತೆಗೆ ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.