Fish Rain: (ಜ.1): ಆಕಾಶದಿಂದ ಮಳೆ ಬರೋದು ಕೇಳಿದ್ದೀರಾ.. ಆದರೆ ಮಳೆ ಜೊತೆ ಮೀನು ಬಂದ್ರೆ ಹೇಗಿರುತ್ತೆ? ಹೌದು ಇನ್ನೊಂದು ದೇಶದಲ್ಲಿ ಮೀನಿನ ಮಳೆ ಸುರಿದಿದೆ. ಘಟನೆ ನಡೆದಿರುವುದು ಬೇರೆಲ್ಲೂ ಅಲ್ಲ ಅಮೇರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ. ಮೀನಿನ ಮಳೆ ಸುರಿದಿರುವ ಬಗ್ಗೆ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಟೆಕ್ಸಾಸ್ ನಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿದಿತ್ತು. ಈ ವೇಳೆ ಮಳೆಯ ನೀರಿನ ಜೊತೆ ಆಕಾಶದಿಂದ ಮೀನುಗಳು ಬಿದ್ದಿದೆ ಎಂದು ಅಲ್ಲಿರುವ ಸ್ಥಳೀಯರು ಆಶ್ಚರ್ಯಕರ ಹೇಳಿಕೆ ಕೊಟ್ಟಿದ್ದಾರೆ. ನಗರದಲ್ಲಿ ಮೀನಿನ ಮಳೆ ಬಿದ್ದಿರುವ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲ ಸ್ಥಳೀಯರು ಈ ಕುರಿತು ವಿಡಿಯೋ ಕೂಡ ಮಾಡಿದ್ದಾರೆ.
ಮೀನಿನ ಮಳೆ ಬೀಳಲು ಕಾರಣವೇನು ಗೊತ್ತಾ?
ಟೆಕ್ಸಾಸ್ ನಲ್ಲಿ ಮೀನಿನ ಮಳೆ ಬಿದ್ದಿರುವ ಬಗ್ಗೆ ಸಾಕಷ್ಟು ಊಹಾಪೋಹಗಳು ಹೊರಬಿದ್ದಿದೆ ಇದರ ಹಿನ್ನಲ್ಲೆ ನ್ಯಾಷನಲ್ ಜಿಯೋಗ್ರಾಫಿ ಹೇಳಿರುವ ಪ್ರಕಾರ, ಭಾರಿ ಪ್ರವಾಹದ ವೇಳೆ ಪುಟ್ಟ ಜೀವಿಗಳು ಮುಳುಗಿ ಹೋಗುತ್ತವೆ ಅದಾದನಂತರ ಬಲವಾದ ಗಾಳಿ ಬೀಸಿ ಮಳೆ ಬಂದಾಗ ಆಳದಲ್ಲಿರುವ ಜೀವಿಗಳು ಮೇಲೆ ಬಂದು ಮಳೆಯಂತೆ ಬಿಡುತ್ತವೆ ಎಂದು ಹೇಳಲಾಗಿದೆ.
2017ರಲ್ಲಿ ಘಟನೆ ನಡೆದಿತ್ತು:
ಟೆಕ್ಸಾಸ್ ನಲ್ಲಿ ಮೀನಿನ ಮಳೆ ಬಿದ್ದಿರುವ ಹಾಗೆ ಈ ಹಿಂದೆ 2017ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಪ್ರಾಥಮಿಕ ಶಾಲೆಯೊಂದರಲ್ಲಿ ನೂರಾರು ಮೀನುಗಳು ಮಳೆಯಂತೆ ಬಿದ್ದ ಘಟನೆ ವರದಿಯಾಗಿತ್ತು. ಅಲ್ಲದೆ ಕಪ್ಪೆಗಳನ್ನು ಹಳೆ ಬಿದ್ದಿರುವ ಬಗ್ಗೆಯೂ ವರದಿಯಾಗಿದೆ.
ಇದೀಗ ನಗರದ ಟೆಕ್ಸಾಸ್ ಜನತೆಗೆ ಸಾಕಷ್ಟು ಅಚ್ಚರಿ ಮೂಡಿಸಿದೆ ನಾಲ್ಕರಿಂದ ಐದು ಇಂಚಿನ ಬಿಳಿ ಬಣ್ಣದ ಮೀನುಗಳು, ಕೆಂಪು ಬಣ್ಣದ ಮೀನುಗಳು ದಾರಿಯ ಮಧ್ಯದಲ್ಲಿ ಬಿದ್ದಿರುವುದನ್ನು ನೀವು ಕಾಣಬಹುದು.
ಸದ್ಯ ಮೀನಿನ ಮಳೆಯ ವಿಡಿಯೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..
ಇದನ್ನೂ ಓದಿ:New Year Party: ಸರ್ಕಾರಿ ಶಾಲೆಗೆ ಬೀಗ ಮುರಿದು ಎಣ್ಣೆ ಪಾರ್ಟಿ!! ಮೊಟ್ಟೆ, ಬಾಡೂಟ ತಿಂದ ಆರೋಪಿಗಳು
Yep. It rained fish at my house too. pic.twitter.com/NRfT8veXT9
— C’mill™️ (@camillecwarren) December 30, 2021