Vishnodevi Temple: (ಜ.1):ಹೊಸವರ್ಷಕ್ಕೆ ಇನ್ನೂ ಎರಡು ಗಂಟೆಗಳ ಮಾತ್ರ ಬಾಕಿ ಉಳಿದಿದ್ದವು ಆದರೆ ಕಾಶ್ಮೀರದ ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲಿ ಹೊಸವರ್ಷದಂದು ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ.
ರಾತ್ರಿ ಸುಮಾರು 3 ಗಂಟೆಗೆ ಕುಡಿತದಿಂದಾಗಿ 12 ಜನರು ಸಾವನ್ನಪ್ಪಿದ್ದು ಹದಿಮೂರು ಮಂದಿ ಗಾಯಗೊಂಡಿದ್ದಾರೆ ಅಪಘಾತದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮತ್ತು ಸೇನಾ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಕೈಗೊಂಡಿದ್ದಾರೆ.

ಹೆಚ್ಚಿದ ಭಕ್ತರ ಸಂಖ್ಯೆ:
ತ್ರಿಕೂಟ ಪರ್ವತದಲ್ಲಿರುವ ದೇವಾಲಯದ ಗರ್ಭಗುಡಿಯ ಹೊರಗೆ ಘಟನೆ ಸಂಭವಿಸಿದ್ದು ದೇವಸ್ಥಾನದ ಮೂರನೇ ದ್ವಾರದ ಬಳಿ ಹೊಸವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರು. ಈ ನಡುವೆ ಭಕ್ತರ ನಡುವೆ ವಾಗ್ವಾದ ನಡೆದು ಮಾತಿನ ಚಕಮಕಿ ನಡೆದಿದೆ ಇದರಿಂದ ಕಾಲ್ತುಳಿತ ಉಂಟಾಗಿದೆ.
ಇದನ್ನೂ ಓದಿ:Happy New Year 2022:’ಹೊಸ ಗುರಿ,ಕನಸುಗಳತ್ತ ಹೆಜ್ಜೆ ಹಾಕೋಣ’ ಹೊಸ ವರ್ಷದ ಶುಭಾಶಯಗಳು
ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ಮಾಡಿದ ಭಕ್ತರೊಬ್ಬರು ಹೇಳಿಕೆ ನೀಡಿದ್ದು, ಹೊಸ ವರ್ಷದ ಸಂದರ್ಭದಲ್ಲಿ ಸಂಜೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಸೇರಲು ಆರಂಭಿಸಿದರು. ಇದೇ ವೇಳೆ ದರ್ಶನಕ್ಕೆಂದು ತಡರಾತ್ರಿ ಕಟ್ಟಡಕ್ಕೆ ಬಂದಿದ್ದ ಕೆಲವರ ನಡುವೆ ಮಾತಿನ ಚಕಮಕಿ ನಡೆದು ಜಗಳಕ್ಕೆ ತಿರುಗಿತು.
ಅಪಘಾತದಲ್ಲಿ ಗಾಯಗೊಂಡ ಅವರನ್ನು ಕಟ್ರಾದ ನರಯನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಅಪಘಾತದಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಎಂದು ಕಟ್ರಾದ ಸಮುದಾಯ ಆರೋಗ್ಯ ಕೇಂದ್ರದ ಬ್ಲಾಕ ವೈದ್ಯಾಧಿಕಾರಿ ಡಾ ಗೋಪಾಲ್ ದತ್ ಅವರು ತಿಳಿಸಿದ್ದಾರೆ.