ಬೆಂಗಳೂರು:. (ಡಿ.31) Puneeth Rajkumar: ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಮುದ್ರಿಸುವ ಮೂಲಕ ಪುನೀತ್ ಅವರಿಗೆ ವಿಶೇಷ ಗೌರವವನ್ನು ಕೆಎಂಎಫ್ ಸಲ್ಲಿಸಿದೆ.
ಪುನೀತ್ ರಾಜಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ಆಗಿ ಅಂಬಾಸಿಡರ್ ಆಗಿದ್ದರು. ಕೆಎಂಎಫ್ ಉತ್ಪನ್ನಗಳಿಗೆ ಪ್ರಚಾರ ನೀಡಿ ಹಾಲು ಒಕ್ಕೂಟದ ರಾಯಭಾರಿಯಾಗಿ ಪುನೀತ್ ರಾಜಕುಮಾರ್ ಅವರು ಸಾಕಷ್ಟು ಮೆಚ್ಚುಗೆ ಗಳಿಸಿದ್ದರು.

ಜಾಹೀರಾತಿಗೆ ಬಿಡಿಗಾಸೂ ತೆಗೆದುಕೊಂಡಿರಲಿಲ್ಲ:
ನಟ ಪುನೀತ್ ರಾಜಕುಮಾರ್ ಅವರು ಕೆಎಂಎಫ್ ಉತ್ಪನ್ನಗಳ ಜಾಹೀರಾತಿಗೆ ಹಣ ಪಡೆಯುತ್ತಿರಲಿಲ್ಲ. ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದಿಂದ ಅಭಿಮಾನಿಗಳು ಕಂಗಾಲಾಗಿದ್ದರು. ಇಂದಿಗೂ ಕೂಡ ಪುನೀತ್ ರಾಜಕುಮಾರ್ ಅವರ ಸ್ಮರಣೀಯವಾಗಿ ನೇತ್ರದಾನ ಮಾಡುವವರು ಜಾಸ್ತಿಯಾಗಿದ್ದಾರೆ ಹಾಗೆಯೇ ಕೆಎಂಎಫ್ ನಟ ಪುನೀತ್ ರಾಜಕುಮಾರ್ ಅವರ ನೆನಪು ಹಾಗೂ ಗೌರವಪೂರ್ವಕವಾಗಿ ಕೆಎಂಎಫ್ ತಮ್ಮ ಹಾಲಿನ ಪ್ಯಾಕೆಟ್ ‘ ನಂದಿನಿ ಶುಭಂ’ಮೇಲೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಮುದ್ರಿಸಿದೆ ಈ ಮೂಲಕ ಅಭಿಮಾನಿಗಳು ಕೆಎಂಎಫ್ ಅವರು ಮಾಡಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Lucky Man: ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್!! ದೇವರ ಪಾತ್ರದಲ್ಲಿ ಅಪ್ಪು