Lucky Man: (ಡಿ:31) ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಸಿನಿಮಾ. ಜೇಮ್ಸ್ ಜೊತೆಗೆ ಪುನೀತ್ ರಾಜಕುಮಾರ್ ಅವರು ಡಾರ್ಲಿಂಗ್ ಕೃಷ್ಣ ಅವರ ಜೊತೆ ನಟಿಸಿರುವ ಲಕ್ಕಿ ಮ್ಯಾನ್ ಚಿತ್ರದ ಪೋಸ್ಟರ್ ಬಿಡುಗಡೆ ಯಾಗಿದೆ.
ಚಿತ್ರದಲ್ಲಿ ನಟ ಪುನೀತ್ ರಾಜಕುಮಾರ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಕ್ಕಿ ಮ್ಯಾನ್ ಚಿತ್ರದ ತಂಡ ಪೋಸ್ಟರ್ ಹಂಚಿಕೊಂಡಿದ್ದು ಹೊಸವರ್ಷದ ಶುಭಾಶಯಗಳು ತಿಳಿಸಿದ್ದಾರೆ ಇನ್ನು ಚಿತ್ರದಲ್ಲಿ ನಾಯಕ ಕೃಷ್ಣ ಅವರು ಮದುಮಗನ ವೇಷದಲ್ಲಿ ಕಂಗೊಳಿಸಿದ್ದಾರೆ.

ನಟ ಡಾರ್ಲಿಂಗ್ ಕೃಷ್ಣ ಅವರು ಲಕ್ಕಿ ಮನ್ ಚಿತ್ರದ ಪೋಸ್ಟರನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು ಕಮಿಂಗ್ ಸೂನ್ ಎಂದು ಬರೆದುಕೊಂಡಿದ್ದಾರೆ.
ನಟ ಪ್ರಭುದೇವ್ ಅವರ ಸಹೋದರ ನಾಗೇಂದ್ರ ಪ್ರಸಾದ್ ಅವರು ನಿರ್ದೇಶನ ಮಾಡಿದ್ದು, ತಮಿಳಿನ ಚಿತ್ರವಾದ ‘ಓ ಮೈ ಕಡವಳೆ’ ಚಿತ್ರದ ರಿಮೇಕ್ ಆಗಿದೆ. ತಮಿಳು ಚಿತ್ರದಲ್ಲಿ ವಿಜಯ್ ಸೇತುಪತಿ ಅಭಿನಯಿಸಿದ್ದು ಅವರ ಪಾತ್ರವನ್ನು ಕನ್ನಡದಲ್ಲಿ ನಟ ಪುನೀತ್ ರಾಜಕುಮಾರ್ ಅವರು ಮಾಡಿದ್ದಾರೆ.
ಲಕ್ಕಿ ಮಾನ್ಯ ಚಿತ್ರದಲ್ಲಿ ಅಪ್ಪು ನಾಯಕನಟನಿಗೆ ಸರಿಯಾದ ದಾರಿ ತೋರಿಸುವ ದೇವರ ಪಾತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಹಾಗೂ ಇದರ ಜೊತೆಯಲ್ಲಿ ಪ್ರಭುದೇವ ಅವರ ಜೊತೆ ಪುನೀತ್ ರಾಜಕುಮಾರ್ ಅವರು ಸಕ್ಕತ್ತಾಗಿ ಹೆಜ್ಜೆ ಹಾಕಿದ್ದಾರೆ.
#Luckyman coming soon pic.twitter.com/xjAhVZNJB8
— darling krishna (@darlingkrishnaa) December 31, 2021
ಪರ್ಸ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಲಕ್ಕಿ ಮಾನ ಚಿತ್ರದ ಡಬ್ಬಿಂಗ್ ಕೆಲಸಗಳು ಮುಗಿದಿದೆ ಇನ್ನೇನು ಚಿತ್ರ ತೆರೆಗೆ ಬರಲು ಕಾತರದಿಂದ ಕಾಯುತ್ತಿದೆ. ಪುನೀತ್ ರಾಜಕುಮಾರ್ ಹಾಗೂ ಪ್ರಭುದೇವ್ ಅವರು ಡಾ ರಾಜಕುಮಾರ್ ಅವರ ಕುರಿತಾಗಿ ರಚಿಸಲಾಗಿರುವ ಹಾಡಿನಲ್ಲಿ ಡಾನ್ಸ್ ಮಾಡಿದ್ದಾರೆ.

ಡಾರ್ಲಿಂಗ್ ಕೃಷ್ಣ ಅವರು ನಾಯಕರಾಗಿದ್ದರು ನಟ ಪುನೀತ್ ರಾಜಕುಮಾರ್ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಡಾರ್ಲಿಂಗ್ ಕೃಷ್ಣ, ಸಂಗೀತ ಶೃಂಗೇರಿ, ರೋಹಿನಿ ಪ್ರಕಾಶ್, ಆರ್ಯ, ರಂಗಾಯಣ ರಘು ಸಾಧುಕೋಕಿಲ, ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ, ಮಾಳವಿಕಾ ಅವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಅಂತೂ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ, ಲಕ್ಕಿ ಮ್ಯಾನ್ ಚಿತ್ರದಿಂದ ಮತ್ತೊಮ್ಮೆ ಪುನೀತ್ ರಾಜಕುಮಾರ್ ಅವರನ್ನು ತೆರೆಯ ಮೇಲೆ ಕಾಣುವ ಕುತೂಹಲ ಹೆಚ್ಚಾಗಿದೆ.