Happy New Year 2022: (ಜ.1): ಎಲ್ಲಾ ಓದುಗರಿಗೂ ಹೊಸ ವರ್ಷದ ಶುಭಾಶಯಗಳು!! ಹೊಸವರ್ಷ ಬಂದರೆ ಪಟಾಕಿ ಸಿಡಿಸುವುದಿಲ್ಲ, ಕ್ಯಾಲೆಂಡರ್ ಬದಲಾಯಿಸುವುದಿಲ್ಲ ಅಥವಾ ಕೇಕು ಕಟ್ ಮಾಡಿ ಸಂಭ್ರಮಿಸುವುದಿಲ್ಲ..
ಹೊಸವರ್ಷ ಎಂದರೆ ಕಳೆದ ವರ್ಷ ಮಾಡಿದ ತಪ್ಪುಗಳು, ಇಟ್ಟ ತಪ್ಪು ಹೆಜ್ಜೆಗಳನ್ನು ಅರಿತುಕೊಂಡು ಭವಿಷ್ಯದಲ್ಲಿ ಸರಿಯಾದ ಹೆಜ್ಜೆಯನ್ನು, ಸರಿಯಾದ ಆಯ್ಕೆಯನ್ನು ಮಾಡುವುದು.
ಕಳೆದ ವರ್ಷ ಕಳೆದು ಹೋದ ಕಹಿ ನೆನಪುಗಳನ್ನು ಮರೆತು, ಬದುಕಿನ ಹೊಸ ಭರವಸೆಯತ್ತ ಹೆಜ್ಜೆ ಹಾಕೋಣ. ಜೀವನದಲ್ಲಿ ಕಷ್ಟ-ಸುಖಗಳನ್ನು ಸಮನಾಗಿ ಹಂಚಿಕೊಂಡು ಬದುಕಬೇಕು. ಹಿಂದಿನ ವರ್ಷ ಮಾಡಿದ ತಪ್ಪುಗಳನ್ನು ಸ್ಮರಿಸಿಕೊಂಡು, ಮತ್ತೆ ಅದೇ ದಾರಿಯನ್ನು ಹಿಡಿಯದೇ ಈ ಹೊಸ ವರ್ಷದಲ್ಲಿ ಹೊಸತನ್ನು ಕಂಡುಕೊಂಡು ಸಂಭ್ರಮದಿಂದ ಹೊಸವರ್ಷವನ್ನ ಬರಮಾಡಿಕೊಳ್ಳೋಣ.

ಹೊಸವರ್ಷ ನಿಮ್ಮ ಜೀವನದಲ್ಲಿ ನವ ಉಲ್ಲಾಸ, ಖುಷಿ ಹೊಸ ಕ್ಷಣಗಳನ್ನು ತರಲಿ, ನಿಮ್ಮ ಬಂಧು -ಬಾಂಧವರೊಟ್ಟಿಗೆ, ಸ್ನೇಹಿತರೊಂದಿಗೆ, ಪ್ರೀತಿಪಾತ್ರರೊಂದಿಗೆ ಹೊಸ ಕ್ಷಣಗಳನ್ನು ಸಿಹಿ ಹಂಚುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿ.
ಪುಸ್ತಕದ ಪುಟ ತೆರೆದಂತೆ ಹೊಸವರ್ಷದ 365 ದಿನಗಳ ಬದುಕಿನ ಪುಟ ತೆರೆದುಕೊಳ್ಳಲಿದೆ. ಪ್ರತಿಕ್ಷಣವನ್ನೂ ಅಮೂಲ್ಯವೆಂದು ಭಾವಿಸಿ, ಸಿಗುವ ಸಮಯದಲ್ಲಿ ಎಲ್ಲರಿಗೂ ಒಳ್ಳೆತು ಮಾಡಿ.
ಹೊಸವರ್ಷದ ಕೆಲವು ಸಂದೇಶಗಳು:
‘ಹೊಸ ಬದುಕಿನಲ್ಲಿ, ಹೊಸ ದೀಪಗಳನ್ನು ಹಚ್ಚಿ ಸಂಭ್ರಮಿಸೋಣ’
‘ಹೊಸ ವರ್ಷವು ನಿಮ್ಮ ಬದುಕಲ್ಲಿ ಆರೋಗ್ಯ, ನೆಮ್ಮದಿ, ಸಂತೋಷ ಪ್ರತಿಕ್ಷಣಗಳು ತುಂಬಿರಲಿ’
‘ಹೊಸ ವರ್ಷವು ನಿಮ್ಮ ಜೀವನಕ್ಕೆ ಹೊಸ ಗುರಿಗಳನ್ನು, ಹೊಸ ಸಾಧನೆಗಳನ್ನು ಸಾಧಿಸಲು ಸ್ಪೂರ್ತಿ ತುಂಬಲಿ’
‘365 ದಿನಗಳ ಬಾಳಿನ ಪುಟದಲ್ಲಿ ಯಾವಾಗಲೂ ಸಂತೋಷ, ಶಾಂತಿ ನೆಮ್ಮದಿ ಹಚ್ಚ ಹಸಿರಾಗಿರಲಿ’
‘ಹೊಸವರ್ಷದ ಪ್ರತಿಕ್ಷಣವೂ ಅಮೂಲ್ಯವಾಗಿರಲಿ, ಪ್ರತಿದಿನವನ್ನು ಹೊಸ ದಿನವೆಂದು ಭಾವಿಸಿ ಹೊಸವರ್ಷವನ್ನು ಆಚರಿಸೋಣ’

ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
Secular tv Team Wishing Happy New YEar
– ಸೆಕ್ಯೂಲರ್ ಟಿವಿ –