ಬೆಂಗಳೂರು: (ಡಿ.31) Cm Bommai:ಜಿಲ್ಲಾಧಿಕಾರಿಗಳೇ ಬಾಸಿಸಂ ಬಿಡಿ, ಮ್ಯಾಜಿಸ್ಟ್ರೇಟ್ ತರಹ ಕೆಲಸ ಮಾಡಬೇಡಿ. ಕೆಲಸದಲ್ಲಿ ವಿನಯತೆ ತುಂಬಾ ಮುಖ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳಿಗೆ ಕ್ಲಾಸ್ ತಗೆದುಕೊಂಡಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಇಂದು ನಡೆದ ಡಿಸಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ, ನಿಮ್ಮ ಜವಾಬ್ದಾರಿ ಅಧಿಕಾರವನ್ನು ಚಲಾಯಿಸುವುದಿಲ್ಲ ನಿಮ್ಮನ್ನು ನೀವು ಬಾಸ್ ಎಂದುಕೊಂಡು ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ.

ಜನಸಾಮಾನ್ಯರ ಸಮಸ್ಯೆ ಬಗೆಹರಿಸಿ:
ನಿಮ್ಮ ಕೆಳ ಹಂತದ ಅಧಿಕಾರಿಗಳನ್ನು ನಿಮ್ಮ ಹಿಡಿತದಲ್ಲಿಟ್ಟುಕೊಂಡು ಇರಬೇಕು ಎಂಬುವ ಯೋಚನೆ ಯನ್ನು ಬಿಡಿ. ಸ್ವಲ್ಪ ವಿವೇಚನೆ ಬಳಸಿ ಕೆಲಸ ಮಾಡಿ ಎಂದು ಹೇಳಿದ್ದಾರೆ. ಜನಸಾಮಾನ್ಯರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿ ಎಂದು ಡಿಸಿಗಳಿಗೆ ಸಿಎಂ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಮಟ್ಟದ ಆಡಳಿತಾತ್ಮಕ ವಿಚಾರಗಳು, ಯೋಜನೆಗಳ ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದರು. ಮುಂಬರುವ ದಿನಗಳಲ್ಲಿ ಮಹತ್ವ ತೀರ್ಮಾನ ಕೈಗೊಳ್ಳಲಾಗುವುದು ಜನರಿಗೆ ಹತ್ತಿರವಾಗುವಂತೆ ಕೆಲಸ ಮಾಡಬೇಕು ಪ್ರತಿ ಕೆಲಸದಲ್ಲೂ ಹೊಸ ಪ್ರಯತ್ನ ಇರಬೇಕು ಎಂದು ಹೇಳಿದರು.
ಪರಿಹಾರದ ಆಪ್ ನಲ್ಲಿ ಅಪ್ಲೋಡ್ ಮಾಡಿದ 48 ಗಂಟೆಗಳವರೆಗೆ ಪರಿಹಾರ ನೀಡಬೇಕು. ಸಭೆಯಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ಮುಂಬರುವ ಸಮಸ್ಯೆಗಳನ್ನು ವಿತರಿಸಲು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಮೂರನೇ ಅಡಿಯಲ್ಲಿ ಹೆಚ್ಚು ಅನಾಹುತಗಳಿಗೆ ಅವಕಾಶ ನೀಡಬಾರದು ಪರಿಸ್ಥಿತಿಗೆ ಅನುಗುಣವಾಗಿ ಒಳ್ಳೆ ನಿರ್ಧಾರ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ : 2021 Backwards: 2021ರಲ್ಲಿ ನೆಡೆದ ಪ್ರಮುಖ ಘಟನೆಗಳ ನೆನೆಪು