ಬೆಂಗಳೂರು: (ಡಿ.31) New Year Guidelines: ಹೊಸ ವರ್ಷ ಸ್ವಾಗತಿಸಲು ಕಾತರದಿಂದ ಕಾಯುತ್ತಿರುವ ಜನರಿಗೆ ನಿರಾಸೆಯಾಗಬಹುದು. ರಾತ್ರಿಯೆಲ್ಲ ಡೇ ಪಾರ್ಟಿ ಮಾಡಿ ಎಂಜಾಯ್ ಮಾಡಬೇಕು ಎನ್ನುವವರಿಗೆ ಜಾರಿಗೊಳಿಸಿರುವ ಗೈಡ್ ಲೈನ್ಸ್ ಫಾಲೋ ಮಾಡಲೇಬೇಕು.
ಕರ್ನಾಟಕದಲ್ಲಿ ಒಮಿಕ್ರೋನ್ ವೈರಸ್ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ರಾಜ್ಯದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ..

ಯಾವ ಯಾವ ರಸ್ತೆಗಳು ಬಂದ್:
ಹೊಸವರ್ಷದ ಮುಂದಿನ ದಿನವಾದ ಇಂದು ಸಂಜೆ 6 ಗಂಟೆಯಿಂದ ನಗರದ ಪ್ರಮುಖ ರಸ್ತೆಗಳು ಬಂದ್ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಎಂ ಜಿ ರಸ್ತೆ , ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ , ಇಂದಿರಾನಗರ , ಕೋರಮಂಗಲದಲ್ಲಿ ಸಂಖ್ಯೆ 6 ಗಂಟೆಯಿಂದ ರಸ್ತೆಗಳನ್ನು ಮುಚ್ಚಲಾಗುತ್ತದೆ. ಸಂಜೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೊಸ ಆದೇಶವನ್ನು ಹೊರಡಿಸಿದ್ದಾರೆ.
ಪಾರ್ಟಿಗಳು ಕ್ಯಾನ್ಸಲ್:
ಈಗಾಗಲೇ ಹೊಸ ವರ್ಷವನ್ನು ಆಚರಿಸಲು ಸಾರ್ವಜನಿಕ ಸ್ಥಳಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಜನರು ತಮ್ಮ ಮನೆಯೊಳಗೆ ಅಥವಾ ಕ್ಲಬ್ಬುಗಳಲ್ಲಿ ಪಾರ್ಟಿ ನಡೆಸಬಹುದು ಆದರೆ ಬೆಂಗಳೂರಿನ ಯಾವುದೇ ಹೋಟೆಲ್ ಗಳು, ಮಾಲ್, ರೆಸ್ಟೋರೆಂಟ್, ಕ್ಲಬ್ ಅಥವಾ ಯಾವುದೇ ರೀತಿಯ ಸಂಸ್ಥೆಗಳು ಅಥವಾ ಡಿಜೆ, ಈವೆಂಟ್, ಪಾರ್ಟಿ ಮಾಡಬಾರದು.
ರಿಸರ್ವೇಶನ್ ಗೆ ಅವಕಾಶ:
ಇಂದು ಸಂಜೆ ಪಾಪ ರೆಸ್ಟೋರೆಂಟ್ ಗಳಲ್ಲಿ ಮುಂಗಡವಾಗಿ ಕಾಯ್ದಿರಿಸಿ ಕೊಂಡವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಟಿಕೆಟ್ ಬುಕಿಂಗ್ ಮೆಸೇಜ್ ಪರಿಶೀಲಿಸಿದ ನಂತರವೇ ಜನರನ್ನು ಒಳಗೆ ಬಿಡಬೇಕು. ಟಿಕೆಟ್ ಬುಕ್ ಮಾಡಿರುವವರು ಕಡ್ಡಾಯವಾಗಿ 2 ಡೋಸ್ ಲಸಿಕೆ ತೆಗೆದುಕೊಂಡಿರಬೇಕು. ಎಲ್ಲ ಅಂಗಡಿಗಳು ,ಪಬ್, ಬಾರ್, ರೆಸ್ಟೋರೆಂಟ್ ಗಳನ್ನು ರಾತ್ರಿ 10 ಗಂಟೆಗೆ ಬಂದ್ ಮಾಡಲಾಗುತ್ತದೆ.