ಪಶ್ಚಿಮ ಬಂಗಾಳ:( ಡಿ.31) Facebook Love: ಸಾಮಾಜಿಕ ಜಾಲತಾಣದಿಂದ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹದಿಂದ ಪ್ರೀತಿಯಾಗಿ ಎಷ್ಟೋ ಮದುವೆಗಳು ಇಂದಿಗೂ ನಡೆಯುತ್ತಿದೆ.
ಆದರೆ ಇನ್ನೊಂದು ವಿಶೇಷ ಪ್ರಕರಣ ದಾಖಲಾಗಿದೆ. ಫೇಸ್ಬುಕ ಮೂಲಕ ಪರಿಚಯವಾಗಿ ಬಾಲಕ ಹಾಗೂ ಯುವತಿ ಇಬ್ಬರು ಓಡಿಹೋಗಿ ಮದುವೆ ಮಾಡಿಕೊಂಡಿದ್ದಾರೆ. 22 ವರ್ಷದ ಯುವತಿ 15ವರ್ಷದ ಬಾಲಕನೊಂದಿಗೆ ಪ್ರೀತಿಗೆ ಬಿದ್ದು ಮದುವೆಯಾಗಿ ಪೊಲೀಸರ ಅತಿಥಿಯಾಗಿದ್ದಾರೆ.
ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ ಕೃಷ್ಣನಗರದ, ಕೊಟ್ವಾಲಿಯಲ್ಲಿ, ಇವರಿಬ್ಬರೂ ಫೇಸ್ಬುಕ ಮೂಲಕ ಪರಿಚಯವಾಗಿ ನಂತರ ಮಾತುಕತೆ ನಡೆದು ಪರಸ್ಪರ ಪ್ರೀತಿಯಾಗಿದೆ ಆನಂತರ ಮನೆಯವರಿಗೆ ತಿಳಿಸಿದರೇ, ಒಪ್ಪುವುದಿಲ್ಲ ಎಂದು ಮನೆಯವರಿಗೆ ತಿಳಿಸದೆ ಇಬ್ಬರು ಮನೆಯಿಂದ ಓಡಿಹೋಗಿ ಮದುವೆ ಮಾಡಿಕೊಂಡಿದ್ದಾರೆ. ನಿಮ್ಮದು ಇಬ್ಬರೂ ಕೂಡ ಉತ್ತರಪ್ರದೇಶಕ್ಕೆ ಹಾರಿಹೋಗುವ ಯೋಜನೆ ಹಾಕಿದರು.

ಸಿಕ್ಕಿ ಬೀಳೋಕೆ ಇವರ ಚರ್ಚೆ ಕಾರಣವಾಯಿತು:
ಇವರಿಬ್ಬರೂ ಮದುವೆಯಾಗಿ ವಾಪಸಾಗುತ್ತಿದ್ದ ವೇಳೆ, ರೈಲಿನಲ್ಲಿ ಇಬ್ಬರೂ ಮದುವೆ ಹಾಗೂ ಓಡಿಹೋಗಿದ್ದ ಬಗ್ಗೆ ಚರ್ಚೆ ಮಾಡಿಕೊಳ್ಳುತ್ತಿರುವಾಗ ಕೇಳಿಸಿಕೊಂಡ ಅಕ್ಕಪಕ್ಕದವರು ಸಂದೇಹ ಪಟ್ಟಿದ್ದಾರೆ.
ಇದನ್ನೂ ಓದಿ: Ola Drivers:ಓಲಾ ತುಂಬಾ ಕಾಸ್ಟ್ಲಿ!! ಹೀಗೂ ನಡೆಯುತ್ತೆ ದರೋಡೆ
ಅಕ್ಕಪಕ್ಕದವರು ಅನುಮಾನದಿಂದ ಜೋಡಿಯನ್ನು ನೋಡಿ ಚೈಲ್ಡ್ ಲೈನ್ ಗೆ ಮಾಹಿತಿ ನೀಡಿದ್ದಾರೆ. ಅದಾಗಲೇ ಇಬ್ಬರು ಕಾಣೆಯಾಗಿರುವ ಬಗ್ಗೆ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಇದರ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ವಶಪಡಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕ 10ನೇ ತರಗತಿ ಓದುತ್ತಿದ್ದರೇ,ಯುವತಿ ಉತ್ತರಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಳೆ ಎನ್ನಲಾಗಿದೆ.