2021 Backwards: (ಡಿ.31): ಹೊಸವರ್ಷಕ್ಕೆ ಇನ್ನೂ ಒಂದು ದಿನ ಮಾತ್ರ ಬಾಕಿ ಇದೆ. ವರ್ಷ ಎಷ್ಟೇ ಮುಂದೆಕ್ಕೆ ಹೋದರೂ, ಕೆಲವೊಮ್ಮೆ ಹಿಂದೆ ತಿರುಗಿ ನೋಡಲೇ ಬೇಕಾಗುತ್ತದೆ. ಕೋವಿಡ್ ಜೊತೆ ಮುಂದಿನ ವರ್ಷಕ್ಕೆ ಒಮಿಕ್ರನ್ ವೈರಸ್ ಬರುತ್ತದೆ. ಈ ವರ್ಷ ನಡೆದ ಪ್ರಮುಖ ಘಟನಾವಳಿಗಳನ್ನು ಮೆಲುಕು ಹಾಕೋಣ .

ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ:
ಕೇಂದ್ರ ಸರ್ಕಾರ ರೈತರಿಗೆ ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿ ಭಾಗದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಯಿತು. 2021ರ ಫೆಬ್ರವರಿ 26ರಂದು ಕೆಂಪುಕೋಟೆ ಯಥಾ ಟ್ರ್ಯಾಕ್ಟರ್ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ರೈತರು ಸಂಚಾರ ಮಾರ್ಗವನ್ನು ಬದಲಿಸಿ, ನೂರಾರು ರೈತರು ಕೆಂಪುಕೋಟೆಯ ತಾ ಸುತ್ತಿ ಕೆಂಪುಕೋಟೆಯ ಮೇಲೆ ಬಾವುಟ ಹಾರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಈ ವೇಳೆ ಪೊಲೀಸರು ರೈತರ ಮೇಲೆ ದಾಳಿ ನಡೆಸಿದ್ದರು.

ಛತ್ತೀಸಗಡದಲ್ಲಿ 22 ಯೋಧರು ಹುತಾತ್ಮ:
ಏಪ್ರಿಲ್ 3ರಂದು ನಕ್ಸಲರ ಭೀಕರ ದಾಳಿಯಿಂದ ಛತ್ತೀಸ್ಗಡದ ಗಡಿಗಳಲ್ಲಿ ಸಿಆರ್ಪಿಎಫ್ ಯೋಧರು ಗೋಬಿಂದ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ನಕ್ಸಲರ ದಾಳಿಗೆ 22 ಯೋಧರು ಹುತಾತ್ಮ ರಾಗಿದ್ದರು ಯೋಧರ ಪ್ರತಿದಾಳಿಯಲ್ಲಿ ಐವರು ನಕ್ಸಲರು ಸಾವನ್ನಪ್ಪಿದ್ದರು.

ತೌಕ್ತೆ ಚಂಡಮಾರುತದ ಅಬ್ಬರ:
ಗುಜರಾತ್ ಮತ್ತು ಮಹಾರಾಷ್ಟ್ರ ಕರಾವಳಿ ಪ್ರದೇಶದಲ್ಲಿ ತೌಕ್ತೆ ಚಂಡಮಾರುತ ಅಬ್ಬರ ಹೆಚ್ಚಾಗಿತ್ತು. ಮುಂಬೈ ಸಮೀಪದ ಅರಬ್ಬಿ ಸಮುದ್ರದಲ್ಲಿ ಚಂಡಮಾರುತಕ್ಕೆ ಸಿಲುಕಿ 41 ಮುಳುಗಿಹೋಗಿ 26 ಮಂದಿ ಸಾವನ್ನಪ್ಪಿದ್ದರು. ಚಂಡಮಾರುತದ ಅಬ್ಬರಕ್ಕೆ 56 ಮಂದಿ ಬಲಿಯಾಗಿದ್ದರು ಗುಜರಾತಿನ ಚಂಡಮಾರುತದ ಕರಾವಳಿ ಜಿಲ್ಲೆಗಳಾದ ವೈಮಾನಿಕ ಸಮೀಕ್ಷೆ ನಡೆಸಿ ಪ್ರಧಾನಿ ಸಾವಿರ ಕೋಟಿ ರೂ ನೆರವು ನೀಡಿದರು.

ಅಶ್ಲೀಲ ವೀಡಿಯೋ ಆರೋಪ ಹಿನ್ನೆಲೆ ರಾಜ್ ಕುಂದ್ರಾ ಬಂಧನ:
ಜುಲೈ ತಿಂಗಳಲ್ಲಿ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ನಂದು ಮುಂಬೈ ಪೊಲೀಸರು ಬಂಧಿಸಿದ್ದರು. ಅಶ್ಲೀಲ ವಿಡಿಯೋಗಳನ್ನು ಮಾಡಿ ಮೊಬೈಲ್ ಅಪ್ಲಿಕೇಶನ್ ಮೂಲಕ ಬಿಡುಗಡೆ ಮಾಡಿದ ಆರೋಪದ ಮೇಲೆ ರಾಜ್ ಕುಂದ್ರಾ ಬಂಧನವಾಗಿತ್ತು.

ಪನಾಮ ಪೇಪರ್ ಪ್ರಕರಣ:
ಪನಮ ಪೇಪರ್ಸ್ ಆಫ್ ಪ್ರಕರಣದಲ್ಲಿ, ಪಂಡೋರ ಪೇಪರ್ ಎಂಬ ರಹಸ್ಯ ಹಣಕಾಸು ಮಾಹಿತಿ ಬಿಡುಗಡೆಯಾಗಿದ್ದು ಇದರಲ್ಲಿ ಭಾರತೀಯ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್, ದಿವಾಳಿ ಎಂದು ಘೋಷಿಸಿಕೊಂಡಿದ್ದ ಅನಿಲ್ ಅಂಬಾನಿ,ಬಯೋಕಾನ್ ಸಂಸ್ಥೆಯ ಕಿರಣ್ ಮಂಜುದಾರ್ ಪತಿ ಸೇರಿದಂತೆ 300 ಭಾರತೀಯರ ಹೆಸರು ಬಹಿರಂಗಗೊಂಡಿತ್ತು.

ಕೃಷಿ ಕಾಯ್ದೆ ವಾಪಸ್:
ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆಗಳನ್ನು ಪಡಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದ ರು ನಂತರ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಕೃಷಿ ಕಾಯ್ದೆ ವಾಪಸ್ ಪಡೆಯಲಾಯಿತು.

ಹೆಲಿಕ್ಯಾಪ್ಟರ್ ಪತನದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ದುರ್ಮರಣ:
ತಮಿಳುನಾಡಿನ ಸಮೀಪ ಸೇನಾ ಹೆಲಿಕ್ಯಾಪ್ಟರ್ ಪತನದಲ್ಲಿ ದೇಶದ ಮೂರು ಸೇನೆಗಳ ಜನರಲ್ ಬಿಪಿನ್ ರವತ್ ಹಾಗೂ ಪತ್ನಿ ಸೇರಿದಂತೆ 14 ಮಂದಿ ವಿಧಿವಶರಾದರು.

ಟೋಕಿಯೋ ಒಲಂಪಿಕ್ಸ್ :
ಆಗಸ್ಟ್ ತಿಂಗಳಿನಲ್ಲಿ ನಡೆದ ಟೋಕಿಯೋ ಒಲಿಂಪಿಕ್ ನಲ್ಲಿ ನೀರಜ್ ಚೋಪ್ರಾ ( Jawline Throw), ಮೀರಾಬಾಯಿ ಚಾನು (Weight Lifting), ರವಿಕುಮಾರ್ ದಹಿಯಾ (wrestling), ಪಿವಿ ಸಿಂಧು(Badminton), ಲವ್ಲಿನಾ ಬೋರ್ಗೋಹೈನ್(Boxing) ಭಾರತಕ್ಕೆ ಒಂದು ಚಿನ್ನ ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದರು.

ಪ್ರತಿಭಟನಾ ನಿರತ ರೈತರ ಮೇಲೆ ಹರಿದ ಕಾರು
ಅಕ್ಟೋಬರ್ ತಿಂಗಳಿನಲ್ಲಿ ಉತ್ತರ ಪ್ರದೇಶದ ಲಂಕಿ ಪೂರ್ ಕೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿದ ಆರೋಪದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರ ಪುತ್ರ ಆಶಿಶ್ ಮಿಶ್ರ ನನ್ನು ಮೂರು ದಿನಗಳ ಕಾಲ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿತ್ತು. ನಾನು ರೈತರು ಸೇರಿ 8 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು.

ಪ್ಯಾರಾಲಿಂಪಿಕ್ಸ್ ನಲ್ಲಿ ಇತಿಹಾಸ ಬರೆದ ಭಾರತ:
ಟೋಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಭಾರತ ಅಭೂತಪೂರ್ವ ಸಾಧನೆ ಮಾಡಿದ್ದು. ಭಾರತಕ್ಕೆ 19 ಪದಕಗಳು ತಂದುಕೊಡುವ ಮೂಲಕ ಇತಿಹಾಸ ಬರೆಯಿತು. ಅವನಿ ಲಿಖಾರಾ ( Shooting), ಸುಮಿತ ಅಂತಿಲ್ ( jawline throw), ಮನೀಶ್ ನರ್ವಾಲ್ (shooting), ಪ್ರಮೋದ್ ಭಗತ್ (badminton), ಕೃಷ್ಣನಗರ್ (badminton) 5 ಚಿನ್ನ 8 ಬೆಳ್ಳಿ 6 ಕಂಚಿನ ಪದಕಗಳನ್ನು ಮೂಲಕ ಭಾರತದಲ್ಲಿ 24ನೇ ಸ್ಥಾನ ಪಡೆದುಕೊಂಡಿತು.

ಮಾದಕದ್ರವ್ಯ ಸೇವನೆ ಆರೋಪದಲ್ಲಿ ಆರ್ಯನ್ ಖಾನ್ ಬಂಧನ:
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ ಸೇರಿದಂತೆ ಹಲವರನ್ನು ಮಾದಕ-ದ್ರವ್ಯ ನಿಯಂತ್ರಣ ಸಂಸ್ಥೆ ಬಂಧಿಸಿತ್ತು. ಹಾಗೂ ಐಷಾರಾಮಿ ಕ್ರೂಜ್ ಶಿಪ್ ನಲ್ಲಿ ನಡೆಯುತ್ತಿದ್ದ ರೇವೂ ಪಾರ್ಟಿ ಮೇಲೆ ದಾಳಿ ನಡೆಸಿ ಎಂಟು ಮಂದಿಯನ್ನು ವರ್ಷ ಪಡೆದು ವಿಚಾರಣೆಗೆ ಒಳಪಡಿಸಿದ್ದರು

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನ
ಅಕ್ಟೋಬರ್ ತಿಂಗಳಿನಲ್ಲಿ ಭಾರತೀಯ ಚಿತ್ರನಟ ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಮತ್ತು ಸಿನಿಮಾ ನಿರ್ಮಾಪಕರು ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹಠಾತ್ ಹೃದಯಾಘಾತದಿಂದ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ನಿಧನರಾದರು. ಪುನೀತ್ ರಾಜಕುಮಾರ್ ಅವರ ನಿಧನದ ನಂತರ ನೇತ್ರದಾನ ಮಾಡಿ ಅಂತರ ಬಾಳಿಗೆ ಬೆಳಕಾದರು.

21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಭುವನ ಸುಂದರಿ ಪಟ್ಟ:
ಡಿಸೆಂಬರ್ ನಲ್ಲಿ ನಡೆದ 70ನೇ ಆವೃತ್ತಿಯ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಸಂಧು ಅವರು ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡ ರು.

ಕನ್ನಡದ ಹಿರಿಯ ನಟ ಶಿವರಾಂ ನಿಧನ:
ಡಿಸೆಂಬರ್ ತಿಂಗಳಿನಲ್ಲಿಕನ್ನಡದ ಹಿರಿಯ ನಟ ಶಿವರಾಂ ಅವರಿಗೆ ಕಾರು ಅಪಘಾತವಾಗಿದ್ದು ರಾತ್ರಿ ಮನೆಯಲ್ಲಿ ಅಯ್ಯಪ್ಪ ಪೂಜೆ ಮಾಡಲು ತೆರಳಿದಾಗ ಕುಸಿದು ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶಿವರಾಮ ಅವರು ವಿಧಿವಶರಾದರು.

ಕನ್ನಡ ಧ್ವಜ ಸುಟ್ಟುಹಾಕಿದ ಕಿಡಿಗೇಡಿಗಳು
ಡಿಸೆಂಬರ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ಮೂವರು ಕಿಡಿಗೇಡಿಗಳು ಕನ್ನಡ ಧ್ವಜ ಸುಟ್ಟು, ಬಸವಣ್ಣನವರ ಭಾವಚಿತ್ರ ವಿರೂಪಗೊಳಿಸಿ ವಿಕೃತಿ ಮೆರೆದಿದ್ದರು. ಧ್ವಜವನ್ನು ಸುಟ್ಟಿದ ಮೂವರನ್ನು ಬಂಧಿಸಲಾಯಿತು.