ದಾವಣಗೆರೆ: (ಡಿ.30): Election Results:ನಗರಸಭೆ, ಪುರಸಭೆ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದ್ದು ಅಭ್ಯರ್ಥಿಗಳು ರೋಚಕ ಗೆಲವು ಸಾಧಿಸಿದ್ದಾರೆ. ಇನ್ನು ದಾವಣಗೆರೆಯ ಚೆನ್ನಾಗಿರಿ ತಾಲೂಕಿನಲ್ಲಿ ಪಲಿತಾಂಶ ವಿಶೇಷವಾಗಿದೆ.
ಸೊಸೆ ವಿರುದ್ಧ ಗೆದ್ದ ಅತ್ತೆ:
ಗ್ರಾಮ ಪಂಚಾಯತ್ 2ನೇ ವಾರ್ಡ್ನ ಉಪಚುನಾವಣೆಯಲ್ಲಿ ಎರಡನೇ ವಾರ್ಡ್ ಸದಸ್ಯರು ಮೃತಪಟ್ಟ ನಂತರ ಸ್ಥಾನಕ್ಕೆ ಅದೇ ವಾರ್ಡಿನ ಸೊಸೆ ಲಕ್ಷ್ಮಮ್ಮ ಹಾಗೂ ಅತ್ತೆ ಪಾರ್ವತಮ್ಮ ಚುನಾವಣಾ ಕಣದಲ್ಲಿದ್ದರು. ಅತ್ತೆ ಪಾರ್ವತಮ್ಮ ಅವರು ಸೊಸೆಯ ವಿರುದ್ಧ 90 ಮತಗಳನ್ನು ಪಡೆದಿದ್ದಾರೆ.
ಇನ್ನು ಅತ್ತೆಯ ವಿರುದ್ಧವೇ ನಿಂತಿದ್ದ ಸೊಸೆ ಲಕ್ಷ್ಮಮ್ಮ ಅವರು 412 ಮತಗಳನ್ನು ಪಡೆದು ಸೋಲನ್ನು ಕಂಡಿದ್ದಾರೆ. ಇನ್ನೊಂದೆಡೆ ಅತ್ತೆ ಪಾರ್ವತಮ್ಮ 502 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕೊಟ್ಟರೆ ಅತ್ತೆ ಗೆದ್ದ ಖುಷಿಗೆ ಸೊಸೆಯು ಸಂಭ್ರಮಪಟ್ಟು ಊರಿಡೀ ಸಿಹಿ ಹಾಗೂ ಪಟಾಕಿ ಹಂಚಿ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ ಇದಲ್ಲದೆ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಲಕ್ಷ್ಮಮ್ಮ ಅವರು ತಿಳಿಸಿದ್ದಾರೆ.