Karnataka urban local Body Election Result: (ಡಿ 30) ನಗರಸಭೆ ಪುರಸಭೆ ಪಟ್ಟಣ ಪಂಚಾಯತ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಯಾವ ಪಕ್ಷ ಸ್ಥಾನ ಕಾಯ್ದಿರಿಸಿಕೊಂಡಿದೆ ಎಂಬುದರ ಫುಲ್ ಲಿಸ್ಟ್ ಇಲ್ಲಿದೆ.
ಕಳೆದ ಡಿಸೆಂಬರ್ 27ರಂದು ನಗರಸಭೆಗಳಿಗೆ ಚುನಾವಣೆ ನಡೆದಿತ್ತು. ರಾಜ್ಯದ ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ, ವಿಜಯನಗರ ಜಿಲ್ಲೆಯ ಹೊಸಪೇಟೆ, ಚಿಕ್ಕಮಗಳೂರು, ತುಮಕೂರು ಜಿಲ್ಲೆಯ ಶಿರಾ, ಗದಗ-ಬೆಟಗೇರಿ, ನಗರಸಭೆಯ ಫಲಿತಾಂಶ ಪ್ರಕಟಗೊಂಡಿದೆ.
ಕಾಂಗ್ರೆಸ್ ಜಯಭೇರಿ
34 ಪಟ್ಟಣ ಪಂಚಾಯತ್ ಹಾಗೂ 19 ಪುರಸಭೆ ಚುನಾವಣೆಯ ಫಲಿತಾಂಶವು ಅಭ್ಯರ್ಥಿಗಳ ಭವಿಷ್ಯ ತೀರ್ಮಾನವಾಗಿದೆ.19 ಪುರಸಭೆಗಳ ಫಲಿತಾಂಶದಲ್ಲಿ 8ರಲ್ಲಿ ಕಾಂಗ್ರೆಸ್ ಜಯ ಸಾಧಿಸಿದರೇ, ಬಿಜೆಪಿ 6 ಹಾಗೂ ಜೆಡಿಎಸ್ 1 ಸ್ಥಾನ ಗಳಿಸಿದೆ.
ರಾಜ್ಯದ 34 ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶ ಕೂಡ ಪ್ರಕಟವಾಗಿತ್ತು 34 ರಲ್ಲಿ 16 ಕಾಂಗ್ರೆಸ್ ಪಕ್ಷ ಪಾಲಾಗಿದ್ದು, 6 ಬಿಜೆಪಿ, 16 ಪಕ್ಷೇತರ ಸ್ಥಾನ ಪಡೆದುಕೊಂಡಿದೆ. 194 ವಾರ್ಡ್ಗಳಲ್ಲಿ ಬಿಜೆಪಿ, 135 ವಾರ್ಡ್ಗಳಲ್ಲಿ ಪಕ್ಷೇತರರು ಹಾಗೂ 12 ವಾರ್ಡ್ಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ.
5 ನಗರಸಭೆಗಳ ಪೈಕಿ 3 ಬಿಜೆಪಿ, ಎರಡು ನಗರಸಭೆ ಅತಂತ್ರವಾಗಿದೆ.ಗದಗ-ಬೆಟಗೇರಿ ನಗರಸಭೆ, ಚಿಕ್ಕಮಗಳೂರು ನಗರಸಭೆ ಬೆಂಗಳೂರಿನ ಹೆಬ್ಬಗೋಡಿ ನಗರಸಭೆ ಬಿಜೆಪಿ ಪಾಲಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆ, ತುಮಕೂರು ಜಿಲ್ಲೆಯ ಶಿರಾ ನಗರಸಭೆ ಫಲಿತಾಂಶ ಅತಂತ್ರವಾಗಿದೆ.
166 ವಾರ್ಡ್‌ಗಳ ಪೈಕಿ 67ರಲ್ಲಿ ಬಿಜೆಪಿ ಗೆಲುವು, ಕಾಂಗ್ರೆಸ್ 61, ಜೆಡಿಎಸ್ 12 ವಾರ್ಡ್‌ಗಳಲ್ಲಿ ಗೆದಿದ್ದು 26 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಗೆಲುವು ಸಿಕ್ಕಿದೆ.

3 ವಾರ್ಡ್‌ನಲ್ಲಿ ಅವಿರೋಧ ಆಯ್ಕೆ
ಹುಬ್ಬಳ್ಳಿ ಪಟ್ಟಣ ಪಂಚಾಯಿತಿಯ 3 ವಾರ್ಡ್‌ನಲ್ಲಿ ಅವಿರೋಧವಾಗಿ ಎಲೆಕ್ಟ್ ಆಗಿದ್ದಾರೆ. ಅಲ್ಲದೆ, ಅರಭಾವಿ ಪಟ್ಟಣ ಪಂಚಾಯಿತಿಯ 1 ವಾರ್ಡ್‌ನಲ್ಲಿ ಆಭ್ಯರ್ಥಿಯೊಬ್ಬ ಅವಿರೋಧ ಸೆಲೆಕ್ಟ್ ಆಗಿದ್ದು, ನಲತವಾಡ ಪಟ್ಟಣ ಪಂಚಾಯಿತಿಯ 2 ವಾರ್ಡ್‌ನಲ್ಲಿ ಇಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ. ಅಲ್ಲದೆ, ಕೊಪ್ಪಳದ ಭಾಗ್ಯನಗರ, ತಾವರೆಗೇರಾ 2, ಕಮತಗಿ, ಬೆಳಗಲಿ, ಜಾಲಿ ತಲಾ ಒಬ್ಬೊಬ್ಬ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಸಚಿವ ಶ್ರೀರಾಮುಲುಗೆ ಮುಖಭಂಗ
ಸಾರಿಗೆ ಸಚಿವ ಶ್ರೀರಾಮುಲು ಪ್ರತಿನಿಧಿಸೋ ಮೊಳಕಾಲ್ಮೂರು ಕ್ಷೇತ್ರದ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಪಾಲಾಗಿದೆ. 16ವಾರ್ಡ್ಗಳ ಪೈಕಿ ಕಾಂಗ್ರೆಸ್ 11 ವಾರ್ಡ್ಗಳಲ್ಲಿ ಜಯ ದಾಖಲಿಸಿದ್ರೆ, ಬಿಜೆಪಿ ಕೇವಲ 2 ವಾರ್ಡ್ಗಳಲ್ಲಿ ಮಾತ್ರ ಗೆಲುವು ಕಂಡಿದೆ. ಇನ್ನುಳಿದಂತೆ ಜೆಡಿಎಸ್ ನೆಲ ಕಚ್ಚಿದ್ದು, 3ವಾರ್ಡ್ಗಳು ಪಕ್ಷೇತರರ ಪಾಲಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲಾ ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿ ಜಯ ದಾಖಲಿಸಿದೆ. 18 ವಾರ್ಡ್ಗಳ ಪೈಕಿ 11 ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದು ಮಂದಹಾಸ ಬೀರಿದ್ದಾರೆ. ಕಾಂಗ್ರೆಸ್ ನಾಲ್ಕು ವಾರ್ಡ್ಗಳಲ್ಲಿ ಮಾತ್ರ ಜಯ ದಾಖಲಿಸಿದ್ದಾರೆ. ಇನ್ನುಳಿದಂತೆ ಜೆಡಿಎಸ್ ಅಭ್ಯರ್ಥಿಗಳು ಸೋತಿದ್ದು, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ದಡ ಮುಟ್ಟಿದ್ದಾರೆ.
ವಿಟ್ಲ ಪಟ್ಟಣ ಪಂಚಾಯತ್
ಒಟ್ಟು ವಾರ್ಡ್ – 18
ಬಿಜೆಪಿ – 12
ಕಾಂಗ್ರೆಸ್ – 5
ಎಸ್ ಡಿ ಪಿ ಐ – 1
ಕೋಟೆಕಾರು ಪಟ್ಟಣ ಪಂಚಾಯತ್
ಒಟ್ಟು ವಾರ್ಡ್ – 17
ಬಿಜೆಪಿ – 11
ಕಾಂಗ್ರೆಸ್ – 4
ಎಸ್ ಡಿ ಪಿ ಐ – 1
ಪಕ್ಷೇತರ – 1
ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಹಿರೇಮನಿ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿ ಚಂದ್ರು ಕರಿಸೋಮನಗೌಡರ ವಿರುದ್ಧ ಸೋತಿದ್ದಾರೆ. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಮಂದಾಳಿ ವಿರುದ್ಧ ಬಿಜೆಪಿ ಅಭ್ಯರ್ಥಿ ವಿನಾಯಕ ಮಾನವಿ ಗೆಲುವು ಸಾಧಿಸಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣ ಪಂಚಾಯಿತಿಯ 19 ವಾರ್ಡ್ಗಳ ಪೈಕಿ ಕಾಂಗ್ರೆಸ್ 10 ವಾರ್ಡ್ಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಜೆಪಿ 9 ವಾರ್ಡ್ಗಳಲ್ಲಿ BJP ಅಭ್ಯರ್ಥಿಗಳು ಜಯ ದಾಖಲಿಸಿದ್ದಾರೆ. ಇನ್ನುಳಿದಂತೆ ಮೂವರು ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
ಯಾದಗಿರಿಯಲ್ಲಿ ಕಕ್ಕೇರಾ ಪುರಸಭೆಯ ವಾರ್ಡ್ ನಂಬರ್ 6ರಿಂದ ಕಾಂಗ್ರೆಸ್ ಪಕ್ಷದಿಂದ ಪರಶುರಾಮ ಸ್ಪರ್ಧಿಸಿದ್ದ. ಇದೀಗ ಗೆಲುವು ಸಾಧಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ನಗರಸಭೆಯ 33, 34ನೇ ವಾರ್ಡ್‌ಗಳಲ್ಲಿ ಸಹೋದರಿಯರಿಗೆ ಗೆಲುವು ಸಿಕ್ಕಿದೆ. 33 ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಕ್ಕ ಪರಗಂಟಿ ಲಕ್ಷ್ಮಿ, 34 ನೇ ವಾರ್ಡ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತಂಗಿ ಲತಾ ಸಂತೋಷ್ ಗೆಲುವು ಸಾಧಿಸಿದ್ದಾರೆ.