ಮಂಗಳೂರು: (ಡಿ.30) Ola Drivers: ಟೆಕ್ನೋಲಜಿ ಮುಂದುವರೆದಂತೆ ಆಟೋ-ಟ್ಯಾಕ್ಸಿ , ಓಲಾ, ಊಬರ್, ಹೀಗೆ ಅನೇಕ ಸಾರಿಗೆ ವ್ಯವಸ್ಥೆಗಳಿದೆ.
ಹಾಗೆಯೇ ಇದು ಒಂದು ಕಥೆ ನಡೆದಿದೆ! ಆದರೆ ಇದು ಹಣ ದೋಚುವ ಜಾಲ ಎಂದೇ ಹೇಳಬಹುದು. ಓಲಾ ಆಪ್ ನಲ್ಲಿ ಕಾರು ಬುಕಿಂಗ್ ಮಾಡಿದಾಗ ಗಾಡಿ ಬರುವುದಿಲ್ಲ, ಓಲಾ ಡ್ರೈವರ್ ಕರೆ ಬರುತ್ತದೆ ಎಲ್ಲಿಗೆ ಡ್ರಾಪ್ ಎಂದು ಕೇಳಿದಾಗ? ದುಡ್ಡು ಹೆಚ್ಚಾಗುತ್ತದೆ ಇಲ್ಲ ಅಂದ್ರೆ ಬರುವುದಿಲ್ಲ ಎಂದು ಉಡಾಫೆಯ ಉತ್ತರ ನೀಡುತ್ತಾರೆ.
ಆಪ್ ನಲ್ಲಿ ಬೆಲೆ ಜಾಸ್ತಿ:
ನೀವು ಗಮನಿಸಿ, ಓಲಾ ಆಪ್ ನಲ್ಲಿ ಬೇರೆ ರೇಟು ಇದ್ದರೆ ಡ್ರೈವರ್ಗಳು ಕೇಳುವ ರೇಟ್ ಬೇರೆ ಇರುತ್ತದೆ. ಆಟೋಗಳು ಮತ್ತಿತರ ಸಾರಿಗೆ ವಾಹನಗಳು ಜಾಸ್ತಿ ತೆಗೆದುಕೊಳ್ಳುತ್ತದೆ ಎಂದು ಓಲಾ ಸಂಸ್ಥೆ ಸಾರ್ವಜನಿಕರಿಗಾಗಿ ಕಡಿಮೆ ದುಡ್ಡಿನಲ್ಲಿ ಪ್ರಯಾಣಮಾಡಲು ಸಹಕಾರಿಯಾಗಬೇಕು ಆದರೆ ಓಲಾ ತುಂಬಾ ಕಾಸ್ಟ್ಲಿ ಆಗಿದೆ.

ಕೆಲವೊಮ್ಮೆ ಓಲಾ ಆಟೋ, ಉಬರ್ ಡ್ರೈವರ್ಗಳು ಡ್ರಾಪ್ ಮಾಡಿ ಅಗತ್ಯಕ್ಕಿಂತ ಹೆಚ್ಚು ಹಣವನ್ನು ವಸೂಲಿ ಮಾಡಲು ಪ್ರಯತ್ನಿಸುತ್ತಾರೆ. ದೂರ ತಿಳಿಸಲು ಸಂಸ್ಥೆಗೆ ಕರೆ ಮಾಡಿದರೆ ಹೆಚ್ಚು ಹಣ ಕೊಡಬೇಡಿ ಎಂದು ಕೂಡ ಹೇಳುತ್ತಾರೆ. ಆದರೆ ಸರಿಯಾಗಿ ಸಮಸ್ಯೆ ಬಗೆಹರಿದಿಲ್ಲ. ಕಡಿಮೆಗೆ ಬರುತ್ತಾರೆ ಎಂದು ಓಲಾ ಹತ್ತಿದರೆ ದರೋಡೆ ಮಾಡೋದಂತೂ ಗ್ಯಾರಂಟೀ.
ಮೈಸೂರು, ಮಂಗಳೂರು, ಬೆಂಗಳೂರು ಸೇರಿದಂತೆ ಹಲವೆಡೆ ಇತರ ಸಮಸ್ಯೆಗಳು ಎದುರಾಗುತ್ತದೆ. ಕಷ್ಟ ಆದರೂ ಸರಿ ಸರ್ಕಾರದ ಸಾರಿಗೆಯಲ್ಲಿ ಹತ್ತಿ ಬಿಡುತ್ತಾರೆ.

ಮಂಗಳೂರಿನಲ್ಲಿ ಇಂತಹದೇ ಒಂದು ಘಟನೆ ನಡೆದಿದೆ. ಓಲಾ ಡ್ರೈವರ್ ಗಳಲ್ಲಿ ಹೆಚ್ಚು ಮಾತನಾಡಿದರೆ ನಮ್ಮಲ್ಲಿ ಯೂನಿಯನ್ ಇದೆ ಎಲ್ಲರನ್ನೂ ಕರೆದುಕೊಂಡು ಬರುತ್ತೇನೆ ಎಂಬ ಅಹಂಕಾರದ ಮಾತನಾಡುತ್ತಾರೆ.
ಎಲ್ಲಾ ಕಡೆಯಲ್ಲಿಯೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ, ನಿಮಗೂ ಇಂತಹದೇ ಅನುಭವವಾಗಿರುತ್ತದೆ. ಸಾರ್ವಜನಿಕರೇ ಗಮನಿಸಿ, ಪ್ರಯಾಣ ಮಾಡುವವರು ಮೊದಲೇ ಯೋಚಿಸಿ ಯಾವುದು ಉತ್ತಮ ಅದರಲ್ಲಿ ಹೊರಡಿ!