ನವದೆಹಲಿ: (ಡಿ.29) omicron virus: ದೇಶದಲ್ಲಿ ದಿನೇ ದಿನೇ ಒಮಿಕ್ರೋನ್ ಪ್ರಕರಣಗಳು ಏರಿಕೆಯಾಗುತ್ತಿದ್ದು. ನವದೆಹಲಿಯಲ್ಲಿ 300ರಕ್ಕೂ ಹೆಚ್ಚು ಅಧಿಕ ಒಮಿಕ್ರೋನ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ದೆಹಲಿಯಲ್ಲಿ ಹೆಚ್ಚಾಗುತ್ತಿರುವ ರೂಪಾಂತರಿ ಕೋವಿಡ್ ಒಮಿಕ್ರೋನ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ದೆಹಲಿಯಲ್ಲಿ ಕರ್ನಾಟಕಕ್ಕಿಂತ ಹೆಚ್ಚು ಸೋಂಕಿತರು ಇರುವುದರಿಂದ ದೆಹಲಿಯಲ್ಲಿ ಇನ್ನಷ್ಟು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಶಾಲೆ-ಕಾಲೇಜು ಸಿನಿಮಾ ಮಂದಿರಗಳು ಈಜುಕೊಳ ಮನರಂಜನಾ ಪಾರ್ಕ್ ಹಾಗೂ ಕ್ರೀಡಾಂಗಣಗಳ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

20 ಜನರಿಗೆ ಅವಕಾಶ:
ಮದುವೆ ಹಾಗೂ ಅಂತ್ಯಕ್ರಿಯೆಯಲ್ಲಿ 20 ಜನರಿಗೆ ಮಾತ್ರ ಭಾಗವಹಿಸಲು ಅನುಮತಿ ನೀಡಲಾಗಿದೆ. ಸಾಮಾಜಿಕ ರಾಜಕೀಯ ಧಾರ್ಮಿಕ ಹಬ್ಬ ಸಮಾರಂಭಗಳಿಗೆ ಸಂಪೂರ್ಣ ನಿಷೇಧಿಸಲಾಗಿದೆ. ಬಸ್ಸು ಹಾಗೂ ಡೆಲ್ಲಿ ಮೆಟ್ರೋ ಗೆ ಶೇಕಡ 50ರಷ್ಟು ಪ್ರಯಾಣಿಕರಿಗೆ ಮಿತಿ ಹೇರಲಾಗಿದೆ.
ಇದನ್ನೂ ಓದಿ:Kuvempu Birthday:ಮಾನಸ ಗಂಗೋತ್ರಿಯ ಕೂಸನ್ನು ಕೊಡುಗೆಯಾಗಿ ನೀಡಿದ ವಿಶ್ವಮಾನವ ಕುವೆಂಪು ಅವರ ಜನ್ಮದಿನ
ಆಟೋರಿಕ್ಷಾ ಹಾಗೂ ಕ್ಯಾಂಪ್ಗಳಲ್ಲಿ ಗರಿಷ್ಠ ಇಬ್ಬರೂ ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ರಾಜಧಾನಿಯಲ್ಲಿ ಮಂಗಳವಾರ 469 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ ನಾಲ್ವರು ಸಾವನ್ನಪ್ಪಿದ್ದು ಪಾಸಿಟಿವಿಟಿ ದರ 0.89 ರಷ್ಟು ದಾಖಲಾಗಿರುವ ಕಾರಣ ದೆಹಲಿಯಲ್ಲಿ ಅಧಿಕಾರದ ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಮತ್ತಷ್ಟು ಆರ್ಥಿಕ ಇಕ್ಕಟ್ಟಿನ ಭೀತಿ:
ಕಳೆದ ಎರಡು ವರ್ಷಗಳಿಂದ ಕೋವಿಡ್ ಲಾಕ್ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು ಇದೀಗ ಮತ್ತೆ ಒಮಿಕ್ರೋನ್ ಏರಿಕೆಯಾಗುತ್ತಿರುವ ಹಿನ್ನೆಲೆ ಮತ್ತಷ್ಟು ಆತಂಕ ಎದುರಾಗಿದೆ.
ಸದ್ಯ ಭಾರತದಲ್ಲಿ ಒಮಿಕ್ರೋನ್ ಪ್ರಕರಣಗಳು ಹೆಚ್ಚಾಗುವ ಭೇಟಿಯಲ್ಲಿ ಕರ್ನಾಟಕ ಸೇರಿದಂತೆ 10 ರಾಜ್ಯಗಳಿಗೆ ಈಗಾಗಲೇ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ 9,195 ಹೊಸ ಪ್ರಕರಣಗಳು ದೇಶದಾದ್ಯಂತ ದಾಖಲೆಯಾಗಿದೆ. ಕೇರಳ ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಹಾಗೂ ತಮಿಳುನಾಡು ನಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ.
ಒಮಿಕ್ರೋನ್ ನ ಪ್ರಕರಣದಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ.
ಈ ಮಧ್ಯೆ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಕೋವಿಡ್ ಮೂರನೇ ಅಲ್ಲೇ ಶುರುವಾಗಿದೆ ಎಂದು ಹೇಳಿಕೆ ನೀಡಿದ್ದಾರೆ ಬಿಹಾರದಲ್ಲಿ ಒಂದೇ ದಿನ 47 ಪ್ರಕರಣಗಳು ದಾಖಲಾಗಿದೆ. ಹೊಸ ಮಾರ್ಗದರ್ಶಿ ಸೂತ್ರ ಸದ್ಯಕ್ಕೆ ಜಾರಿ ಇಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.