ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಬಡ ವ್ಯಾಪಾರಸ್ತರಿಗೆ ಅನ್ಯಾಯ
ಮಂಗಳೂರು: (ಡಿ.29) BJP Govt: ಬಿಜೆಪಿ ಸರ್ಕಾರ ಬಂದಾಗ ನಮ್ಮ ಹೊಟ್ಟೆಪಾಡಿಗೆ ಚಪ್ಪಡಿ ಕಲ್ಲು ಎಳೆಯುತ್ತಾರೆ.. ನಮ್ಮ ಮೇಲೆ ಯಾವಾಗಲೂ ಕತ್ತಿ ಮಾಡುತ್ತಾರೆ ಎಂದು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ ಬೀದಿಬದಿ ವ್ಯಾಪಾರಸ್ಥರು.
ಮಂಗಳೂರು ಮಹಾನಗರಪಾಲಿಕೆಯಲ್ಲಿ (MCC) ಬೀದಿ ಬದಿ ವ್ಯಾಪಾರಸ್ಥರ ಬದುಕು ಮತ್ತೊಮ್ಮೆ ಕಷ್ಟಕ್ಕೆ ಸಿಲುಕಿದೆ. ಈ ಹಿಂದೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ (BJP Govt)ಬೀದಿ ಬದಿ ವ್ಯಾಪಾರಸ್ಥರಿಗೆ 10000 ಸಾಲ ಯೋಜನೆ ಜಾರಿಗೊಳಿಸಿತ್ತು. ಟಾರ್ಗೆಟ್ ರೀಚ್ ಆಗಲು ಬೀದಿಬದಿ ವ್ಯಾಪಾರಿ ಅಲ್ಲದವರಿಗೂ ಸಾಲ ನೀಡಲಾಗಿತ್ತು.
ಮಂಗಳೂರು ಪುರಭವನದಲ್ಲಿ (Mangalore)ರೆಡ್ ಕಾರ್ಪೆಟ್ ಹಾಸಿ ಬೀದಿಬದಿ ವ್ಯಾಪಾರಿಗಳನ್ನು ಹಾಗೂ ಬ್ಯಾಂಕರ್ ಗಳನ್ನು ಒಂದೇಕಡೆ ಕರೆಸಿ ದೊಡ್ಡಜಾತ್ರೆ ನಡೆಸಲಾಗಿತ್ತು. ಮಂತ್ರಿಗಳು ಶಾಸಕರು ಮೇಯರ್ ಗಳು ಎಲ್ಲರೂ ಬೀದಿ ಬದಿ ವ್ಯಾಪಾರಿಗಳ ರಕ್ಷಕರು ಎಂದು ಬೀಗುತ್ತಿದ್ದರು ಆದರೆ ಈಗ ತಮ್ಮ ಹಳೆಯ ದಾಳಿಯನ್ನು ಮುಂದುವರಿಸಿದೆ.
ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ವಿರುದ್ಧ ಸಮರ ಸಾರಿದೆ. ಬೀದಿ ಬದಿ ವ್ಯಾಪಾರ ಮಾಡುತ್ತಿದ್ದವರೆಲ್ಲಾ ಎಬ್ಬಿಸಿ ಹೊಟ್ಟೆಪಾಡಿಗೆ ಕಲ್ಲು ಹಾಕಿದ್ದಾರೆ.

ಐಡಿ ಕಾರ್ಡ್ ತೋರಿಸಿದರೆ ನಗುತ್ತಾರೆ:
ಈ ಹಿಂದೆ ಮಂಗಳೂರು ಮಹಾನಗರಪಾಲಿಕೆಯಲ್ಲಿ (Tiger Operation)ಕಮಿಷನರ್ ಆಗಿದ್ದ ವಿಜಯಪ್ರಕಾಶ್ ಅವರ ಕಾಲದಲ್ಲಿ ಬಿಜೆಪಿ ಆಡಳಿತವಿತ್ತು. ಆಗ ಅಧಿಕಾರಿಗಳ ಮಾತಿನಂತೆ ವಿಜಯಪ್ರಕಾಶ್ ಅವರು ಬೀದಿಬದಿ ವ್ಯಾಪಾರಿಗಳನ್ನು ಮಟ್ಟಹಾಕಲು ಟೈಗರ್ ಕಾರ್ಯಾಚರಣೆ ಆರಂಭಿಸಿದ್ದರು.
ಬೀದಿ ಬದಿ ವ್ಯಾಪಾರಸ್ಥರಿಗೆ ಪಾಲಿಕೆಯಿಂದಲೇ (ID Card)ಗುರುತಿನ ಚೀಟಿ ನೀಡಲಾಗುತ್ತದೆ ಆದರೆ ಅದೇ ಗುರುತಿನ ಚೀಟಿಯನ್ನು ದಾಳಿ ವೇಳೆ ಅಧಿಕಾರಿಗಳಿಗೆ ತೋರಿಸಿದರೆ ಗಹಗಹಿಸಿ ನಗುತ್ತಾರೆ ಐಡಿ ಕಾರ್ಡನ್ನು ಫ್ರೇಮ್ ಹಾಕಿ ಇಟ್ಟುಕೊಳ್ಳಿ ಎಂದು ವ್ಯಂಗ್ಯವಾಗಿ ಮಾತನಾಡುತ್ತಾರೆ.
ಕಸ ಎತ್ತುವ ಲಾರಿಗೆ ಟೈಗರ್ ಪೈಂಟ್:
ಪಾಲಿಕೆಯ ಕಸ ಎತ್ತುವ ಹಳೆಯ ಲಾರಿಗೆ ಹಳದಿ ಬಣ್ಣ ಕೊಡಿಸಿ ಟೈಗರ್ ಕಾರ್ಯಾಚರಣೆ ನಡೆಸಿದ್ದರು. ಬಡ ವ್ಯಾಪಾರಿಗಳನ್ನು (Poor People) ಎಬ್ಬಿಸಿ ಅವರ ವಸ್ತುಗಳನ್ನು ತುಂಬಿಸಿಕೊಂಡು ಹೋಗಿ ತಾಲೂಕು ಕಚೇರಿಯ ಹಿಂದೆ ರಾಶಿ ಹಾಕಲಾಗುತ್ತಿತ್ತು. ಬಡ ವ್ಯಾಪಾರಿಗಳ ತರಕಾರಿ ಹಣ್ಣು ಹಂಪಲಗಳನ್ನು ಮನೆಗೆ ಕೊಂಡೋಗಿ ಅವರೇ ಅದು ಅಡುಗೆ ಮಾಡಿ ತಿಂದು ತೇಗಿದ್ದಾರೆ.
ಮಂಗಳೂರು ನಗರವನ್ನು ಸುಂದರವಾಗಿರಿಸಲು (Smart City)ನಮ್ಮ ಹೊಟ್ಟೆಯ ಮೇಲೆ ಹೊಡೆಯಲು ಪ್ರಾರಂಭಿಸಿದ್ದಾರೆ. ನಗರವನ್ನು ಸುಂದರವಾಗಿರಿಸಲು ಬಡವರ ಮೇಲೆ ಹಾಗೆ ಸಾಧಿಸಿರುವುದು ಎಷ್ಟು ನ್ಯಾಯ? ಅಭಿವೃದ್ಧಿ ಹೆಸರಿನಲ್ಲಿ ಅನ್ಯಾಯವಾಗುತ್ತಿದೆ.
ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಯ ವಿರುದ್ಧ ಬೀದಿ ಬದಿ ವ್ಯಾಪಾರಸ್ಥರು ಪಾಲಿಕೆ ಮುಂದೆ (Strike) ಪ್ರತಿಭಟನೆ ನಡೆಸುತ್ತಿದ್ದಾರೆ. ಬಡವರ ಕಷ್ಟವನ್ನು ಅರ್ಥ ಮಾಡಿಕೊಂಡು ಅವರಿಗೂ ಬದುಕಲು ದಾರಿ ಮಾಡಿಕೊಡಬೇಕು ಅಥವಾ ಪರ್ಯಾಯ ವ್ಯವಸ್ಥೆಯನ್ನು ಪಾಲಿಕೆಯ ಮಾಡಿಕೊಡವುದು ಅಗತ್ಯವಾಗಿದೆ.