ಬೆಳಗಾವಿ: (ಡಿ.29)Karnataka Band: ಕರ್ನಾಟಕ ಬಂದ್ ಗೆ ಕರೆ ನೀಡಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಡಿಸೆಂಬರ್ 31 ರಂದು ಬಂದ್( Karnataka Band) ಮಾಡುವುದು ಶತಸಿದ್ಧ ಎಂದು ಗುಡುಗಿದ್ದಾರೆ.
ಹತ್ತು ದಿನಗಳ ಹಿಂದೆ ಬಂದ್ ಮಾಡುವುದಾಗಿ ಕರೆನೀಡಲಾಗಿದೆ ನಮ್ಮ ಹೋರಾಟ MES ಸಂಘಟನೆಯನ್ನು ನಿಷೇಧ ಮಾಡಲು ಹಾಗೂ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದವರ ವಿರುದ್ಧ (MES )ಬೆಳಗಾವಿಗೆ ಎಲ್ಲಾ ಕನ್ನಡಪರ ಸಂಘಟನೆಗಳು ಬೆಂಬಲ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕ ಬಂದಿಗೆ ಈಗಾಗಲೇ ಸಮಯವನ್ನು ನಿಗದಿ ಮಾಡಲಾಗಿದೆ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್ ಮಾಡಲಾಗುವುದು ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಹೇಳಿದ್ದಾರೆ.

ಬಂದ್ ಮಾಡುವುದರಲ್ಲಿ ಯಾವ ಬದಲಾವಣೆ ಇಲ್ಲ
ನಾನು ಬೆಳಗಾವಿಯಲ್ಲಿದ್ದೇನೆ ಪ್ರವೀಣ್ ಶೆಟ್ಟಿ ಅವರ ಪತ್ರ ಬಂದಿರುವುದು ಗೊತ್ತಿಲ್ಲ ಅವರು (Statement)ಹೇಳಿಕೆ ಕೊಡಲು ಸ್ವತಂತ್ರರು ಅದರ ಬಗ್ಗೆ ಚಿಂತೆ ಇಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ಬಂದ್ ಕುರಿತು ನಾಳೆ ಚರ್ಚೆ ಮಾಡುತ್ತೇವೆ ಎಂದು (Sa.ra.Govind) ಸಾರಾ ಗೋವಿಂದ್ ಅವರು ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸೂರ್ಯ ಈಕಡೆ ಬರಲಿ ಚಂದ್ರ ಕಡೆ ಹೋಗಲಿ ಬಂದ್ (Karnataka band) ಮಾಡುವುದು ಶತ ಸಿದ್ಧ. ಇಡೀ ದೇಶದಲ್ಲಿ ಎಲ್ಲಾ ಹೋರಾಟಗಳು (Protest)ಒಂದಲ್ಲ ಒಂದು ರೀತಿ ಸ್ವಲ್ಪ ಇದೆಲ್ಲವನ್ನು ದೊಡ್ಡದು ಮಾಡಲು ಆಗುವುದಿಲ್ಲ.
MES ಸಂಘಟನೆ ನಿಷೇಧ ಆದರೆ ಗಡಿಯಲ್ಲಿ ಪುಂಡಾಟಿಕೆ ಮಾಡುವುದು ನಿಲ್ಲುತ್ತದೆ. ನಾನಂತೂ ನನ್ನ ಉಸಿರು ಇರುವವರೆಗೂ MESನಿಷೇಧಕ್ಕೆ ಹೋರಾಟ ಮಾಡುತ್ತೇನೆ. ಡಿಸೆಂಬರ್ 31ರಂದು ಬಂದ್ ಯಾವ ಯಾವ ರೀತಿ ಆಗುತ್ತದೆ ಎನ್ನುವುದು ಕನ್ನಡಿಗರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.