Healthy Diet: (ಡಿ.29) ಈಗಿನ ಜೀವನ ಶೈಲಿಯಲ್ಲಿ(life Style) ಮನೆಯ ಆಹಾರಕ್ಕಿಂತ ಹೊರಗಿನ ಆಹಾರವು ಜನರನ್ನು ಆಕರ್ಷಣೆ ಮಾಡುತ್ತಿದೆ. ಹೊರಗೆ ಸಿಗುವ ಆಹಾರಗಳು ದೇಹಕ್ಕೆ ಹಲವು ಸಮಸ್ಯೆಯನ್ನು ತಂದೊಡ್ಡುತ್ತದೆ.
ಇನ್ನು ಕೆಲವರಿಗೆ ವ್ಯಾಯಾಮ ಡಯಟ್ (Diet)ಮಾಡಿಯೂ ಹೊರಗಿನ ಆಹಾರಗಳನ್ನು ತಿನ್ನಬೇಕು ಎನ್ನುವ ಚಪಲ ಹೆಚ್ಚಾಗುತ್ತದೆ. ಇದರಿಂದಾಗಿ ತಾವು ಮಾಡಿದ ವ್ಯಾಯಮಗಳು ವ್ಯರ್ಥವಾಗುವ ಸಾಧ್ಯತೆಗಳು ಹೆಚ್ಚು. ಅಸಮರ್ಪಕವಾದ ಜೀವನಶೈಲಿಯಿಂದ ದೇಹದ ತೂಕ (weight Gain) ಹೆಚ್ಚಾಗುತ್ತದೆ.
ವ್ಯಾಯಾಮ ಹಾಗೂ ದೈಹಿಕ ಚಟುವಟಿಕೆ ಜೊತೆ ಯಾವ ಆಹಾರವನ್ನು ತಿಂದರೆ ದೇಹದ ತೂಕವನ್ನು ಕಡಿಮೆ ಮಾಡಬಹುದು ಎನ್ನುವ ವಿಚಾರವನ್ನು ಈ ಲೇಖನದಲ್ಲಿ ಓದಬಹುದು.
ಕ್ಯಾರೆಟ್:
ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರು ತಿನ್ನಬಹುದಾ ದಂತಹ ತರಕಾರಿ(Carrot) ಕ್ಯಾರೆಟ್. ಪ್ರತಿದಿನ ತಿಂಡಿಗೂ ಮೊದಲು ಅಥವಾ ವ್ಯಾಯಾಮ ಮಾಡುವುದಕ್ಕೂ ಮೊದಲು ಕ್ಯಾರೆಟನ್ನು ರಸ( Carrot Juice) ಕುಡಿಯುವುದರಿಂದ ಹೆಚ್ಚು ಪ್ರಯೋಜನವಾಗಲಿದೆ. ವ್ಯಾಯಾಮ ಮಾಡಲು ಹೆಚ್ಚಿನ ಶಕ್ತಿಯನ್ನು ಇದು ಒದಗಿಸುತ್ತದೆ.

ಬೀನ್ಸ್:
ತೂಕ ಇಳಿಕೆಯ ಯೋಜನೆಯಲ್ಲಿದ್ದಾರೆ ಬೀನ್ಸ್ (Beans) ಅನ್ನು ಡಯಟ್ ಫುಡ್ ಲಿಸ್ಟ್ ನಲ್ಲಿ ಸೇರಿಸಿಕೊಳ್ಳಬಹುದು. ಬೀನ್ಸ್ ನಲ್ಲಿರುವ ಹೆಚ್ಚಿನ ಫೈಬರ್ ಅಂಶಗಳು(Slow Digestion) ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ಸುಧಾರಿಸುತ್ತದೆ.

ಡ್ರೈ ಫ್ರೂಟ್ಸ್:
ತೂಕವನ್ನು ಹಿಡಿಕೆ ಮಾಡಲು ಒಣಹಣ್ಣುಗಳು (dry Fruits)ಕೂಡ ಸಹಾಯ ಆರೋಗ್ಯವನ್ನು ಉತ್ತಮವಾಗಿರುವಂತೆ ಸಹಾಯಮಾಡುವ (Badami, Walnut, dry Grapes)ಬಾದಾಮಿ, ಕಡಲೆಕಾಯಿ, ವಾಲ್ನಟ್, ಒಣದ್ರಾಕ್ಷಿ, ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
ಆದರೆ ನೆನಪಿರಲಿ ಒಣ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕು ಹೆಚ್ಚು ಸೇವನೆ ಮಾಡಿದರೆ ತೂಕ ಹೆಚ್ಚಾಗುವ ಸಾಧ್ಯತೆಗಳು ಇರುತ್ತದೆ ಎಂದು ಸಂಶೋಧನೆಗಳು ತಿಳಿಸಿದೆ.

ಸೌತೆಕಾಯಿ:
ಸೌತೆಕಾಯಿಯಲ್ಲಿ ಎಲ್ಲರಿಗೂ (Cucumber)ಗೊತ್ತಿರುವಂತೆ ನೀರಿನ ಅಂಶ ಜಾಸ್ತಿ ಇರುತ್ತದೆ. ಬೆಳಗಿನ ಉಪಹಾರವನ್ನು ಸೇವನೆ ಮಾಡಿ ಮಧ್ಯಾಹ್ನದ ಹೊತ್ತಿಗೆ ಸೌತೆಕಾಯಿಗಳನ್ನು ತಿಂದರೆ ದೇಹವು ತಂಪಾಗಿ, ತೂಕವನ್ನು ಕಡಿಮೆ ಮಾಡುವುದರಲ್ಲಿ ಸಹಕಾರಿಯಾಗುತ್ತದೆ.

ಸರಿಯಾದ ಆಹಾರದ ಮೂಲಕ ದೇಹದ ತೂಕವನ್ನು (weight Loss)ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಈ ಮೇಲಿನ ಡಯಟ ಲಿಸ್ಟ ಜೊತೆ ಇನ್ನು ಹಲವಾರು ಹಣ್ಣುಗಳು ತರಕಾರಿ ಗಳಿಂದ ಪ್ರಯೋಜನಗಳಿವೆ ಹೆಚ್ಚಿನ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಿ ನಿಮ್ಮ ದೇಹಕ್ಕೆ ಅನುಗುಣವಾಗಿ ಡಯಟ್ ಚಾರ್ಟ್ ನೀಡುತ್ತಾರೆ.