ಬೆಂಗಳೂರು: (ಡಿ.28) Night Curfew: ಒಮಿಕ್ರೋನ್ ವೈರಸ್ (Omicron) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದಿನಿಂದ ಹತ್ತು ದಿನಗಳ ಕಾಲ ನೈಟ್ ಕರ್ಫ್ಯೂ (Night Curfew) ವಿಧಿಸಿದೆ. ಡಿ.28 ರಿಂದ ಜ.7ರ ವರಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಳೆದ ಭಾನುವಾರ ನಡೆದ ಸಭೆಯಲ್ಲಿ ನೈಟ್ ಕರ್ಫ್ಯೂ ವಿಧಿಸುವ ಬಗ್ಗೆ ತೀರ್ಮಾನ ಕೈಗೊಂಡಿದರು.
ಬಾರ್& ರೆಸ್ಟೋರೆಂಟ್ ಅಸಮಾಧಾನ:
ಹೊಸವರ್ಷಕ್ಕೆ ಇನ್ನೇನು (New Year) ಕೆಲ ದಿನಗಳು ಬಾಕಿ ಇದೆ ಅಷ್ಟೇ. ಡಿ.30 ರಿಂದ ಜ.2ರ ವರಗೆ ಕ್ಲಬ್, ಪಬ್ ಹಾಗೂ ರೆಸ್ಟೋರೆಂಟ್ ಗಳಿಗೆ ಶೇಕಡ 50 ರಷ್ಟು ಮಾತ್ರ ಸೀಮಿತಗೊಳಿಸಲಾಗಿದೆ. ರಾಜ್ಯ ಸರಕಾರದ (Bar Association) ನಿಯಮಕ್ಕೆ ರಾಜ್ಯ ಬಾರ್ ಒಕ್ಕೂಟದಿಂದ ವಿರೋಧ ವ್ಯಕ್ತವಾಗಿತ್ತು.

ಲಸಿಕೆ, RTPCR ನೆಗೆಟಿವ್ ರಿಪೋರ್ಟ್ ಕಡ್ಡಾಯ:
ರೆಸ್ಟೋರೆಂಟ್ ಸಿಬ್ಬಂದಿಗಳು, ಕಡ್ಡಾಯವಾಗಿ (Covid Negative Report) ಕೋವಿಡ್ ಪರೀಕ್ಷೆ ಮಾಡಿಸಿ RTPCR ನೆಗೆಟಿವ್ ರಿಪೋರ್ಟ್ ಹೊಂದಿರಬೇಕು ಹಾಗೂ ಎರಡು ಡೋಸ್ (2nd Dose) ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು.
300 ಜನಕ್ಕೆ ಸೀಮಿತ:
ಇಂದಿನಿಂದ ನೈಟ್ ಕರ್ಫ್ಯೂ ವಿಧಿಸಿರುವ ಜೊತೆಗೆ ಮದುವೆ ಶುಭಸಮಾರಂಭಗಳು ಹಾಗೂ ಕಾನ್ಫರೆನ್ಸ್, ಮೀಟಿಂಗ್ಗಳು ಇನ್ನಿತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ (300 Limit) 300 ಜನರಿಗಿಂತ ಜಾಸ್ತಿ ಸೇರುವಂತಿಲ್ಲ.
ಸ್ಯಾನಿಟೈಸರ್, ಮಾಸ್ಕ ಸೇರಿದಂತೆ ಅಗತ್ಯ ಮುಂಜಾಗ್ರತಾ (Mask) ಕ್ರಮಗಳನ್ನು ಆಯೋಜಕರು (Covid Rules)ಸಮಾರಂಭದಲ್ಲಿ ಕಡ್ಡಾಯವಾಗಿ ಅನುಸರಿಸಬೇಕು.
ಇದನ್ನೂ ಓದಿ: Night Curfew: ರಾಜ್ಯಾದ್ಯಂತ ಡಿ.28 ರಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ!
ನೈಟ್ ಕರ್ಫ್ಯೂ ಅವಧಿಯಲ್ಲಿ ಯಾವುದಕ್ಕೆ ಇದೆ ಅವಕಾಶ:
ರಾತ್ರಿ ಅವಧಿಯಲ್ಲಿನ ಕೈಗಾರಿಕೆಗಳು/ಕಂಪನಿಗಳಲ್ಲಿ ಕೆಲಸ ಮಾಡುವ ( Factory Workers) ಕಾರ್ಮಿಕರಿಗೆ ಅವಕಾಶ ಹಾಗೂ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು.
ರೋಗಿಗಳು ಹಾಗೂ ಆರೈಕೆ ಮಾಡುವ (patient) ಸಂಬಂಧಿಗಳ ಸಂಚಾರಕ್ಕೆ ಅವಕಾಶ.
ಇಂಟರ್ನೆಟ್ ಹಾಗೂ ಟೆಲಿಕಾಂ (Telecom & Internet) ಸೇವೆ ಒದಗಿಸುವ ನೌಕರರಿಗೆ ಸಂಚಾರಕ್ಕೆ ಅವಕಾಶ
ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ( IT Workers)ಸಿಬ್ಬಂದಿಗಳಿಗೆ ಅವಕಾಶವಿದೆ.
ವೈದ್ಯಕೀಯ ಸೇರಿದಂತೆ ಅಗತ್ಯ ತುರ್ತು ಸೇವೆಗಳಿಗೆ (Emergency Services) ಅವಕಾಶ.
ಸರಕು ಸಾಗಣೆ ವಾಹನಗಳು ಹಾಗೂ ಇ-ಕಾಮರ್ಸ್ ಕಂಪನಿಗಳ (Goods & E Commerce) ವಾಹನಕ್ಕೆ ಅವಕಾಶ.
ಬಸ್ ರೈಲು ಮೆಟ್ರೋ ವಿಮಾನ ಸೇವೆಗಳು, ಟ್ಯಾಕ್ಸಿ ಖಾಸಗಿ (With Ticket) ವಾಹನಗಳಿಗೆ ಅವಕಾಶ ಪ್ರಯಾಣಿಕರು ಟಿಕೆಟ್ ಅಥವಾ ಪೂರಕ ದಾಖಲೆ ತೋರಿಸಿ ಸಂಚರಿಸಲು ಅನುಮತಿ ನೀಡಲಾಗಿದೆ.
ಯಾವುದಕ್ಕೆ ನಿರ್ಬಂಧ:
ಹೋಟೆಲ್, ಪಬ್, ಕ್ಲಬ್ ಗಳಲ್ಲಿ (Hotel ) 50ರ ಮಿತಿ.
ಮದುವೆ ಇತರ ಕಾರ್ಯಕ್ರಮಗಳಿಗೆ (Marriage & Public Function) 300ಕ್ಕೆ ಮಿತಿ
ಐಟಿ ಮತ್ತು ತರ ಕಂಪನಿಗಳ (Work from Home) ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸಬೇಕು.