iPhone chocolate:( ಡಿ.28) ಇತ್ತೀಚಿನ ದಿನಗಳಲ್ಲಿ ಅಂಗಡಿಗಳಿಗೆ ಭೇಟಿ ನೀಡುವವರ ಸಂಖ್ಯೆ ಆನ್ಲೈನ್ ಖರೀದಿ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಅಂದಹಾಗೆ ಆನ್ಲೈನ್ನಲ್ಲಿ ಖರೀದಿ ಮಾಡುವ ಮುನ್ನ ಹಲವು ಬಾರಿ ಯೋಚನೆ ಮಾಡಬೇಕಾಗುತ್ತದೆ. ಯಾಕೆಂದರೆ ಆನ್ಲೈನ್ನಲ್ಲಿ ಮೋಸ ಹೋಗುವವರ ಸಂಖ್ಯೆ ಜಾಸ್ತಿಯಾಗಿದೆ.
ಆರ್ಡರ್ ಮಾಡುವ ವಸ್ತು ಒಂದಾದರೆ, ಬರುವ ವಸ್ತು ಮತ್ತೊಂದಾಗಿರುತ್ತದೆ. ಅದೇ ರೀತಿ ಇಲೊಬ್ಬರು ಐಫೋನ್ ಆರ್ಡರ್ ಮಾಡಿ ಅವರಿಗೆ ಸಿಕ್ಕಿದ್ದು ಏನು ಗೊತ್ತಾ? ಕ್ಯಾಡ್ಬರಿ ಚಾಕೋಲೇಟ್!!

ನೆಡೆದ ಘಟನೆ ಏನು?
ಇಂತಹದ್ದೊಂದು ಘಟನೆ ನಡೆದದ್ದು ಇಂಗ್ಲೆಂಡಿನಲ್ಲಿ. ಡೇನಿಯಲ್ ಎನ್ನುವ ವ್ಯಕ್ತಿ ಬರೋಬ್ಬರಿ ಒಂದು ಲಕ್ಷ ರೂಗಳ iPhone13 ಫೋನನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದರು. ಆದರೆ ಡೆಲಿವರಿ ಆಗಿದ್ದು ಚಾಕೋಲೇಟ್. ಕವರ್ ನಲ್ಲಿ ಸುತ್ತಿಕೊಂಡು ಇದ್ದ ವಸ್ತುವನ್ನು ನೋಡಿ ಗಾಬರಿಯಾದ ಡೇನಿಯಲ್ ಗಾಬರಿಯಾಗಿದ್ದಾರೆ.
ಡೇನಿಯಲ್ ಅವರು ಡಿಸೆಂಬರ್ 17ರಂದು ತಮ್ಮ ಪಾರ್ಸಲ್ ಗಾಗಿ ಕಾಯುತ್ತಾ ಕುಳಿತಿದ್ದರು. ಆರ್ಡರ್ ಟ್ರಾಕಿಂಗ್ ಮಾಡಿದಾಗ out of stock ಎಂದು ಮೆಸೇಜ್ ಬಂದಿತ್ತು. ಆದರೂ ಡಿ 17 ರಂದು ಪಾರ್ಸಲ್ ಬಂದದ್ದನ್ನು ನೋಡಿ ಸಂತೋಷಗೊಂಡ ಅವರು ಖುಷಿಯಿಂದ ಓಪನ್ ಮಾಡಿದರು, ಬಾಕ್ಸ್ ಒಳಗೆ ಇದ್ದದ್ದು, ಐಫೋನ್ ಅಲ್ಲ ಬದಲಿಗೆ 2 ಒರಿಯೋ ವೈಟ್ ಚಾಕಲೇಟುಗಳು ಪೇಪರ್ನಲ್ಲಿ ಸುತ್ತಿಕೊಂಡಿದ್ದವು.
ಈ ಕುರಿತು ಡೇನಿಯಲ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ. ಐಫೋನ್ ಗಾಗಿ ಕಾದು ಕುಳಿತಿದ್ದ ನನಗೆ ಕೊನೆಗೆ 24 ಮೈಲಿ ದೂರ ಹೋಗಿ ಅವರ ಪಾರ್ಸಲ್ ಡೆಲಿವರಿ ಆಗುವ ಅಂಗಡಿಗೆ ಹೋಗಿ ಕೇಳಿದ್ದಾರೆ ಅವರು ನನ್ನ ಹೆಸರಿನಲ್ಲಿ ಬಂದಿದ್ದ ಬಾಕ್ಸ್ ಕೊಟ್ಟರು ಸ್ವಲ್ಪ ಹರಿದಿತ್ತು ಆದರೆ ಭಾರವಾಗಿತ್ತು.
After a long weekend of a brand new iPhone 13 pro max being stuck in @DHLParcelUK network, failing any delivery attempt Friday -Sun.. finally picked up the parcel yesterday from DHL leeds to find the package tampered with and the new phone (Christmas present) replaced with this. pic.twitter.com/AmsLStbenA
— Daniel ✌ (@Daniel_James201) December 21, 2021
ಮೊಬೈಲ್ ಇರಬೇಕು ಎಂದು ಭಾವಿಸಿ ಒಳಗೆ ತೆಗೆದು ನೋಡಿದಾಗ ಚಾಕಲೇಟ್ ಗಳು ಇದ್ದವು. ಅಲ್ಲದೆ ತಾನು ಒಂದು ಲಕ್ಷ ರೂಪಾಯಿಗಳನ್ನು ಪಾವತಿ ಮಾಡಿದ್ದ ಎಂದು ನೋವು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಗ್ರಾಹಕ ರಕ್ಷಣಾ ವೇದಿಕೆ ದೂರು ನೀಡಿದ್ದು ತನಿಖೆ ಆರಂಭವಾಗಿದೆ. ಇದು ಇಂಗ್ಲೆಂಡ್ ನಂದಿ ನಡೆದ ಘಟನೆಯಾದರೂ ಭಾರತದಲ್ಲೂ ಇಂತಹ ಸಾಕಷ್ಟು ಘಟನೆಗಳು ನಡೆಯು ತ್ತಿದೆ ಆನ್ಲೈನ್ ಆರ್ಡರ್ ಮಾಡುವುದಕ್ಕೂ ಮುಂಚೆ ಸ್ವಲ್ಪ ಜಾಗ್ರತೆಯಿಂದ ಇರುವುದು ಅಗತ್ಯ.
ಈಗೆಲ್ಲಾ, ಕೆಲವು ಡೆಲಿವರಿ ಬಾಯ್ ಗಳು ನಮ್ಮ ಮುಂದೆ ಪ್ಯಾಕ್ ಓಪನ್ ಮಾಡಿ ಬಂದಿರುವ ವಸ್ತು ಪರಿಶೀಲಿಸಿ ಕೊಡುವ ಉದಾಹರಣೆಗಳು ಇದೆ. ಆದರೂ ಕೆಲವೊಮ್ಮೆ ಹೀಗಾಗುತ್ತದೆ. ಏನೇ ಆಗಲಿ ಆನ್ಲೈನ್ ಜಾಲತಾಣದಲ್ಲಿ ಶಾಪಿಂಗ್ ಮಾಡುವ ಮುಂಚೆ ಜಾಗೃತೆ ವಹಿಸುವುದು ಅಗತ್ಯವಾಗಿದೆ.