ಬೆಂಗಳೂರು: (ಡಿ.26) Hamsalekha: ನಾದಬ್ರಹ್ಮ ಸಂಗೀತ ನಿರ್ದೇಶಕ ಹಂಸಲೇಖ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಾಜ್ಯದ ಮಕ್ಕಳಿಗೆ ಹಾಲು ಕೊಟ್ಟ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂದು ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಹಂಸಲೇಖ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಹಿತಿ ಎಸ್.ಜಿ ಸಿದ್ದರಾಮಯ್ಯ ಅವರ ಯರೆಬೇವು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಹಂಸಲೇಖ ಅವರು, ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸಿಎಂ ಆಗಲಿ. ಅವರು ಧರ್ಮೋಕ್ರಸಿ ಬದಿಗೆ ಸರಿಸಿ ಡೆಮೊಕ್ರಸಿ ಉಳಿಸಲೆಂದು ಹಂಸಲೇಖ ಅವರು ಹೇಳಿದರು.

ದಾಸೋಹದ ಬಗ್ಗೆ ಸಾಕಷ್ಟು ಅರಿವಿತ್ತು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತಂದಿದ್ದ ಯೋಜನೆಗಳ ಬಗ್ಗೆ ಮಾತನಾಡಿದ ಅವರು ಬಸವ ಜಯಂತಿ ದಿನ ಅಧಿಕಾರ ಸ್ವೀಕರಿಸುವ ಅವಕಾಶ ಸಿದ್ದರಾಮಯ್ಯ ಅವರಿಗೆ ಸಿಕ್ಕಿತ್ತು. ಅಧಿಕಾರ ವಹಿಸಿಕೊಂಡ ತಕ್ಷಣ ಶೀಘ್ರವೇ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು ಇದರಿಂದ ಹಲವರು ಸಿಟ್ಟಿಗೆದ್ದು, ಸೋಮಾರಿಗಳಿಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ ಎಂದು ಟೀಕಿಸಿದ್ದರು.
ದಾಸೋಹ ಪರಂಪರೆ ಗೊತ್ತಿದ್ದರೆ ಯಾರೂ ಟೀಕೆ ಮಾಡುತ್ತಿರಲಿಲ್ಲ. ಸಿದ್ದರಾಮಯ್ಯ ಅವರಿಗೆ ಶರಣರ ಪರಂಪರೆಯ ಬಗ್ಗೆ ಅಪಾರ ಗೌರವ ಹಾಗೂ ಅರಿವು ಇದೆ. ದೇಸಿ ಶಾಲೆಗೆ ಶಾಲೆಗೂ ನೆರವು ನೀಡಿದ್ದರು ಎಂದು ಹೇಳಿದ್ದರು.
ವಾಸ್ತವದ ಹೇಳಿಕೆ ಕೊಟ್ಟಿದ್ದರು
ಇತ್ತೀಚಿಗೆ ನಾದಬ್ರಹ್ಮ ಸಂಗೀತ ನಿರ್ದೇಶಕ ಹಂಸಲೇಖರ ಮೇಲಿದ್ದ ಆರೋಪದ ಕುರಿತು ಪ್ರತಿಕ್ರಿಯಿಸಿ, ನಾನು ಭಯಸ್ತನಲ್ಲ ಮಾಗಡಿ ರೋಡ್ ನಲ್ಲಿ ಆಟವಾಡಿ ಬಂದವನು. ಈ ಪುಸ್ತಕದಲ್ಲಿ ಸಮುದಾಯದ ಕರುಳಿನ ಕಥೆ ಯಾಗಿರುವಂತೆ ನನ್ನದು ಕೂಡ ಅದೇ ರೀತಿ ಕರಣ ಕಥೆಯಾಗಿದೆ. ಹಿಂದೆ ನಡೆದ ವಿಭಾಗದಲ್ಲಿ ಗೊತ್ತಿಲ್ಲದ ಸಮುದಾಯಗಳು ನನಗೆ ಬೆಂಬಲ ನೀಡಿದ ಹೀಗೆಲ್ಲ ಆಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ ನನ್ನ ಬೆಂಬಲಕ್ಕೆ ನಿಂತವರು ಎಸ್.ಜಿ.ಸಿದ್ದರಾಮಯ್ಯ ಅವರು ಹೇಳಿದರು.
ಯಡಿಯೂರಪ್ಪ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಹಂಸಲೇಖ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡು ಹಂಸಲೇಖ ಅವರು ಏನಾದರೂ ಅಪರಾಧದ ಹೇಳಿಕೆ ಕೊಟ್ಟಿದ್ದಾರೆಯೇ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು ಅವರು ಸತ್ ವಾಸ್ತವಾಂಶವನ್ನು ಮಾತನಾಡಿದ್ದಾರೆ ಅದನ್ನೇ ದೊಡ್ಡ ರಂಪ ಮಾಡಿ ಬಿಟ್ಟರು ಎಂದು ಹೇಳಿದ್ದರು.