ಕಲರ್ಸ ಕನ್ನಡ ವಾಹಿನಿಯಲ್ಲಿ ಸಕ್ಕತ್ ಡಾನ್ಸ್ !!
Radhika Kumar swamy: (ಡಿ.26) 2022 ಹೊಸವರ್ಷಕ್ಕೆ ಇನ್ನೂ ಒಂದು ವಾರವಷ್ಟೇ ಬಾಕಿ ಇದೆ. ಹಲವಾರು ಯೋಜನೆಗಳನ್ನು ಹಾಕಿಕೊಂಡು ಹೊಸ ಹೊಸ ವರ್ಷವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಬೇಕು ಅನ್ನುವಷ್ಟರಲ್ಲಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ವಿಧಿಸಿದೆ. ಆದರೂ ಹೊಸ ವರ್ಷ ಆಚರಿಸಲು ಹೊರಗಡೆ ಹೋಗಲೇಬೇಕು ಎಂದು ಇಲ್ಲ. ಹೌದು ಹೊಸ ವರ್ಷಕ್ಕಾಗಿ ಕನ್ನಡ ಮನರಂಜನೆ ವಾಹಿನಿಗಳು ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ರೆಡಿಯಾಗಿದೆ.
ಅದರಲ್ಲೂ ಕಲರ್ಸ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದ್ದು. ನಟಿ ರಾಧಿಕಾ ಕುಮಾರಸ್ವಾಮಿ ಅವರು ಭರ್ಜರಿಯಾಗಿ ಪರ್ಫಾರ್ಮೆನ್ಸ್ ನೀಡಿ ಹೊಸ ವರ್ಷವನ್ನು ಸ್ವಾಗತಿಸಲಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯ ರಂಗು ರಂಗೋಲಿ ಕಾರ್ಯಕ್ರಮದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರು ಡಾನ್ಸ್ ಮಾಡಲಿದ್ದಾರೆ. ಡಿಸೆಂಬರ್ 31ರಂದು ಮತ್ತು ಜನವರಿ 1 ರಂದು ರಾ.7:30 ಕ್ಕೆ ಪ್ರಸಾರವಾಗಲಿದೆ.
ರಾಧಿಕಾ ಕುಮಾರಸ್ವಾಮಿ ಅವರ ಡಾನ್ಸ್ ನೋಡಲು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ ಸಿನಿಮಾಗಳ ಆಯ್ಕೆಯಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಪಕ್ಕಾ ಚೂಸಿಯಾಗಿದ್ದಾರೆ.
ತುಂಬ ವರ್ಷಗಳ ನಂತರ ಚಿತ್ರರಂಗಕ್ಕೆ ರಾಧಿಕಾ ಕುಮಾರಸ್ವಾಮಿಯವರು ಮಾಡಿದ್ದಾರೆ ಇತ್ತೀಚಿಗೆ 2019ರಲ್ಲಿ ದಮಯಂತಿ ಚಿತ್ರ ಬಿಡುಗಡೆಯಾಗಿತ್ತು ಈಗಾಗಲೇ ರಾಧಿಕಾ ಕುಮಾರಸ್ವಾಮಿ ಅವರು ಹಲವಾರು ಪ್ರಾಜೆಕ್ಟ್ ಗಳಿಗೆ ಸಹಿಹಾಕಿದ್ದಾರೆ ಕೋವಿಡ್ ಕಾರಣದಿಂದ ಸ್ವಲ್ಪ ತಡವಾಗಿದೆ.
ಇದನ್ನೂ ಓದಿ: RRR: RRR ಸಿನಿಮಾಗಾಗಿ ಪಡೆದ ಜೂ.NTR ಹಾಗೂ ರಾಮ್ ಚರಣ್ ತೇಜ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಕೆಂಪು ಗುಲಾಬಿ ಬಣ್ಣದ ಕಾಸ್ಟ್ಯೂಮ್ ಮನಮೋಹಕವಾಗಿ ಡಾನ್ಸ್ ಮಾಡಿದ್ದಾರೆ. ಕಲರ್ಸ ಕನ್ನಡ ವಾಹಿನಿ ಹಂಚಿಕೊಂಡ ಪ್ರಮೋ ದಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಸ್ಟೆಪ್ಸ್ ಝಲಕ್ ಇದೆ