ಬೆಂಗಳೂರು: (ಡಿ.25) Karnataka Band: ಡಿಸೆಂಬರ 31ರಂದು ಕರ್ನಾಟಕ ವಿರೋಧಿ ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಬಂದ್ ಗೆ ಕರೆ ನೀಡಲಾಗಿದೆ. ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡುವ ಸಾಧ್ಯತೆ ಇದೆ ಕರ್ನಾಟಕ ಜನರು ಒಂದಾಗಬೇಕು. ಬಂದ್ ಗೆ ಬೆಂಬಲ ನೀಡಬೇಕು ಎಂದು ಕನ್ನಡಪರ ಹೋರಾಟಗಾರರ ವಾಟಾಳ್ ನಾಗರಾಜ್ ಅವರು ಆಗ್ರಹಿಸಿದರು.
ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡಬೇಕು ನಿಷೇಧ ಮಾಡಿದಿದ್ದರೆ, ಬಂದ್ ಮಾಡುವುದಾಗಿ ಹೇಳಲಾಗಿತ್ತು ಡಿಸೆಂಬರ್ 29 ರವರೆಗೆ ಸರ್ಕಾರಕ್ಕೆ ನೀಡಲಾಗಿದೆ.
ಡಿಸೆಂಬರ್ 29 ರವರೆಗೆ ಎಂಇಎಸ್ ನಿಷೇಧ ಮಾಡಿದರೆ ಬಂದ ವಾಪಸ್ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದರು. ನೈತಿಕ ಬೆಂಬಲ ಯಾರದು ಬೇಡ ಸಂಪೂರ್ಣ ಬೆಂಬಲ ಕೊಡಿ ಎಂದು ಹೇಳಿದ್ದಾರೆ ಇದೇ ವೇಳೆ ಸರ್ಕಾರದ ಕಡೆಯಿಂದ ಬಂದಿರುವ ಮಾಹಿತಿಯ ಪ್ರಕಾರ ಸಂಘಟನೆ ಎಂಬುದು ರಾಜಕೀಯ ಪಕ್ಷವಾಗಿದೆ ಎಂದು ಹೇಳಲಾಗಿದೆ.
ಅಧಿಕೃತ ನೋಂದಣಿಯಾಗಿರುವ ಸಂಘಟನೆಯನ್ನು ನಿಷೇಧಿಸಬೇಕು ಆದರೆ ಕಾನೂನು ಪ್ರಕ್ರಿಯೆ ಮೂಲಕವೇ ಸಾಧ್ಯ ಎಂದು ಹೇಳಲಾಗುತ್ತಿದೆ.
ಫಿಲಂ ಚೇಂಬರ್ ನೈತಿಕ ಬೆಂಬಲ:
ಎನ್ಎಸ್ಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಡಿಸೆಂಬರ್ 31ರಂದು ಕರ್ನಾಟಕ ಬಂದ್ ಗೆ ಫಿಲಂ ಚೇಂಬರ್ ನೈತಿಕ ಬೆಂಬಲ ನೀಡುವುದಾಗಿ ಹೇಳಿದೆ.
ಈ ವಿಚಾರವನ್ನು ವಾಟಾಳ್ ನಾಗರಾಜ್ ಅವರು ತಿರಸ್ಕರಿಸಿ ಫಿಲಂ ಚೇಂಬರ್ ಅವರು ನೈತಿಕ ಬೆಂಬಲ ನೀಡುವುದು ಬೇಡ ನಮಗೆ ಬೀದಿಗಿಳಿದು ಬೆಂಬಲ ನೀಡಬೇಕು. ನಾವೆಲ್ಲ ಬಂದ್ ಗಾಗಿ ಬೀದಿಯಲ್ಲಿ ಹೋರಾಟ ಮಾಡಬೇಕ? ಅವರು ಮಾತ್ರ ನೈತಿಕ ಬೆಂಬಲ ನೀಡಿ ಮನೆಯಲ್ಲಿರಬೇಕು ಕನ್ನಡದವರು ನಿಮ್ಮ ಸಿನಿಮಾಗಳನ್ನು ನೋಡಬೇಕು ಆದರೆ ಕನ್ನಡಪರ ಹೋರಾಟಕ್ಕೆ ನೈತಿಕ ಬೆಂಬಲ ಮಾತ್ರ ನೀಡುತ್ತೀರಿ! ಕನ್ನಡ ಚಿತ್ರರಂಗ ಪರ ನಾನು ಹೋರಾಟ ಮಾಡಿದ್ದೇನೆ ಎಂದು ಪ್ರಶ್ನಿಸಿದ್ದಾರೆ.
ಕನ್ನಡ ಬಾವುಟ ಸುಟ್ಟಿದ್ದರು ಅನಂತರ ರಾಯಣ್ಣನನ್ನು ಕೂಡ ಹಾಳುಮಾಡಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ನೀವು ನೈತಿಕ ಬೆಂಬಲ ಅಂತಿರಲ್ಲ? ಚಿತ್ರರಂಗದವರು ನೀವು ಮೊದಲು ಬೆಂಬಲ ನೀಡಬೇಕು ಬಾವುಟ ಸುಟ್ಟು ಹಾಕಿರುವುದು ನೈತಿಕ ಬೆಂಬಲ ನೀಡಿದರೆ ಕನ್ನಡ ಬಾವುಟವನ್ನು ಸುಡಲು ನಿಮ್ಮ ಬೆಂಬಲ ಇದೆ ಎಂದು ಅರ್ಥವಾಗುತ್ತದೆ.

ಚಿತ್ರಮಂದಿರಗಳ ವಿರುದ್ಧ ಪ್ರತಿಭಟನೆ
ನಿಮ್ಮ ನೈತಿಕ ಬೆಂಬಲ ನಿರ್ಧಾರವನ್ನು ಮತ್ತೊಮ್ಮೆ ಮನವೊಲಿಸಿ ಕೊಳ್ಳಿ ಇಲ್ಲದಿದ್ದರೆ ನಿಮ್ಮ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ ಎಂದು ಗುಡುಗಿದ್ದಾರೆ. ಚಿತ್ರಮಂದಿರಗಳ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಎಚ್ಚರಿಕೆ ನೀಡುತ್ತಾರೆ ನಾಳೆ ಬೆಳಗ್ಗೆ 11 ಗಂಟೆಗೆ ಫಿಲಂ ಚೇಂಬರ್ ಎದುರು ಸತ್ಯಾಗ್ರಹ ಸಹ ಮಾಡಲಾಗುವುದು ಎಂದು ಹೇಳಿದ್ದಾರೆ.
ಕೊರೊನಾದಿಂದ ವ್ಯಾಪಾರ-ವಹಿವಾಟು ಕುಸಿದಿದೆ. ಒಂದು ದಿನ ಅಂಗಡಿ ಬಾಗಿಲು ಹಾಕಿದ್ರೂ ದೊಡ್ಡ ಮಟ್ಟದ ನಷ್ಟವಾಗಲಿದೆ. ಸಣ್ಣ ಮತ್ತು ಮಧ್ಯಮ ವರ್ಗದ ಅಂಗಡಿಗಳಿಗೆ ಭಾರೀ ಹೊಡೆತ ಬೀಳಲಿದೆ. ಹೀಗಾಗಿ ಕೆಲವು ಸಂಘಟನೆಗಳು ತಟಸ್ಥವಾಗಿ ಇರಲು ನಿರ್ಧರಿಸಿವೆ. ಸದ್ಯಕ್ಕೆ ಸರ್ಕಾರಕ್ಕೆ ಡಿ. 29ರವರೆಗೆ ಗಡುವು ನೀಡಿದ್ದಾರೆ.
ಇದನ್ನೂ ಓದಿ: Karnataka Band:ಎಂಇಎಸ್ ಸಂಘಟನೆ ನಿಷೇಧ ಮಾಡುವಂತೆ ಡಿ.31 ಕ್ಕೆ ಕರ್ನಾಟಕ ಬಂದ್ ಗೆ ಕರೆ
ಬಂದ್ ಗೆ ಬೆಂಬಲ ನೀಡಿರುವ ಸಂಘಟನೆಗಳು:
ಡಿಸೆಂಬರ 31ರಂದು MES ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು ಎಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಹಲವಾರು ಸಂಘಟನೆಗಳು ಬೆಂಬಲ ನೀಡಿದೆ.
ಓಲಾ ಉಬರ್ ಟ್ಯಾಕ್ಸಿ ಡ್ರೈವರ್ ಅಂಡ್ ಓನರ್ಸ್ ಅಸೋಶಿಯೇಶನ್.
ಬೆಂಗಳೂರು ಆದರ್ಶ ಆಟೋ ಯೂನಿಯನ್
ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘಟನೆಯ ಒಕ್ಕೂಟ
ದಾಸಪುರ ಎಂಪಿಎಂಸಿ ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಸಂಘ
ಏರ್ಪೋರ್ಟ್ ಟ್ಯಾಕ್ಸಿ ಸಂಪೂರ್ಣ ಬಂದ್ ನೀಡುವುದರ ಮೂಲಕ ಬೆಂಬಲ ನೀಡಿದ್ದಾರೆ.
ಬೆಂಬಲ ನೀಡದ ಸಂಘಟನೆಗಳು:
ಕರ್ನಾಟಕ ರಕ್ಷಣಾ ವೇದಿಕೆ
ಪೀಸ್ ಆಟೋ ಅಸೋಸಿಯೇಷನ್
ಬೆಂಗಳೂರು ಹೋಟೆಲ್ ಮಾಲೀಕರ ಸಂಘ
ಕರ್ನಾಟಕ ರಾಜ್ಯ ಖಾಸಗಿ ಬಸ್ಸು ಟ್ರಾವೆಲ್ಸ್ ಅಸೋಸಿಯೇಷನ್
ನೈತಿಕ ಬೆಂಬಲ ನೀಡಿರುವ ಸಂಘಟನೆಗಳು:
ಲೇಬರ್ಸ್ ವರ್ಕರ್ಸ್ ಯೂನಿಯನ್
ಬಾರ್ ಅಂಡ್ ರೆಸ್ಟೊರೆಂಟ್, ಪಬ್ ಮಾಲೀಕರ ಸಂಘ
ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳ ಸಂಘಟನೆ (ಕ್ಯಾಮ್ಸ್)
ಪೆಟ್ರೋಲ್ ಬಂಕ್ ಮಾಲೀಕರ ಸಂಘ
ನಿರ್ಧಾರ ಮಾಡದ ಅಸೋಸಿಯೇಷನ್ಗಳು..!
ಬೆಂಗಳೂರು ಬಟ್ಟೆ ಅಂಗಡಿ ಮಾಲೀಕರ ಸಂಘ
ಬೆಂಗಳೂರು ಮಾಲ್ ಅಸೋಸಿಯೇಷನ್
ಪೀಣ್ಯಾ ಕೈಗಾರಿಕಾ ಸಂಘ
ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ
ಕರ್ನಾಟಕ ರಾಜ್ಯ ಜಿಮ್ ಮಾಲೀಕರ ಸಂಘ
ಸಾರಿಗೆ ನೌಕರರ ಕೂಟ