ಬೆಳಗಾವಿ: (ಡಿ.24) Winter Session: ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ವೇದಿಕೆ ಕುರಿತು ಬೆಳಗಾವಿ ವಿಧಾನಸೌಧದಲ್ಲಿ ಚರ್ಚೆ ನಡೆಯಿತು. ಚರ್ಚೆಯಲ್ಲಿ ವಿಧಾನ ಸಭೆಯ ಸದಸ್ಯರನ್ನು ಹಾಸ್ಯ ಮಾಡುವ ನಗೆಗಡಲಲ್ಲಿ ತೇಲಿಸಿದರು.
ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಒಂದು ಅಂಶವನ್ನು ಮಾತನಾಡುತ್ತಿರುವಾಗ, ನಾನು ಲವ್ ಮಾಡಿ ಮದುವೆಯಾದರೆ ತಡೆಯುವುದಕ್ಕೆ ಇವರ್ಯಾರು ಎಂದು ಪ್ರಶ್ನಿಸಿ”ಬೇಡ ನನಗೆ ವಯಸ್ಸಾಯ್ತು ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಪೀಕರ್ ಅವರು ಉತ್ತರಿಸಿ, “ಪ್ರೀತಿಗೂ ಮದುವೆಗೂ ವಯಸ್ಸು ಲಿಂಕ್ ಇದೆಯಾ” ಎಂದು ಹಾಸ್ಯ ಮಾಡಿದರು.
ಸಿದ್ದರಾಮಯ್ಯ ಅವರು,”ಹಾಗಲ್ಲ, ಪ್ರೀತಿ ಬೇರೆ ಮದುವೆ ಬೇರೆ ಪ್ರೀತಿ ಯಾವಾಗಲಾದರೂ ಮಾಡಬಹುದು ಆದರೆ ಮದುವೆ ಮಾಡಿಕೊಳ್ಳುವುದಕ್ಕೆ ಆಗಲ್ಲ”ಈ ವಿಷಯ ಹೇಳುತ್ತಿದ್ದಂತೆ ಸಚಿವ ಈಶ್ವರಪ್ಪ ನಿಮಗೆ ವಯಸ್ಸಾಗಿದೆ ಎಂದು ಹೇಳಿದವರು ಯಾರು? ಎಂದು ನಗೆಚಟಾಕಿ ಹಾರಿಸಿದರು.
ಇದಕ್ಕೆ ಸಿದ್ದರಾಮಯ್ಯ ಅವರು ಉತ್ತರಿಸಿ, ನಾನೇ ಅಂದುಕೊಂಡಿದ್ದೇನೆ. ನನಗೆ ವಯಸ್ಸಾಗಿಲ್ಲ ಎಂದು ನಿಮಗೆ ಅನಿಸಿದರೆ ಎಂದು ಕೇಳಿದರು? ಇದಕ್ಕೆ ಈಶ್ವರಪ್ಪ ಹೌದು ಎಂದು ಹೇಳಿದಾಗ ಸಿದ್ದರಾಮಯ್ಯ ಅವರು ಥ್ಯಾಂಕ್ಸ್ ಎಂದು ಮಾತು ಮುಂದುವರಿಸಿದರು.
ಸ್ಪೀಕರ್ ಅವರು ಸಿದ್ದರಾಮಯ್ಯ ಅವರಿಗೆ, ನಿಮ್ಮದು ಹಾಗೂ ಈಶ್ವರಪ್ಪ ಅವರ ಸಂಬಂಧವನ್ನು ಎಂದು ಕೇಳಿದರು?
ಇದಕ್ಕೆ ಸಿದ್ದರಾಮಯ್ಯ ಅವರು ನಂದು ಈಶ್ವರಪ್ಪ ನಂದು Love and Hate ಸಂಬಂಧ ಎಂದು ಹೇಳಿದರು. ಇದಕ್ಕೆ ಸಚಿವ ಆರ್ ಅಶೋಕ್ ಅವರು ಪ್ರತಿಕ್ರಿಯಿಸುತ್ತಾ ಅದು ಹೇಗೆಂದು ಕಾಲೆಳೆದರು? ಸಿದ್ದರಾಮಯ್ಯ ಅವರು, ನಾನು ನೀನು ಈಶ್ವರಪ್ಪನವರೇ ಇದ್ದಾಗ ಮಾತನಾಡುವ ಎಂದು ಹಿಡಿದಾಗ ಸ್ಪೀಕರ್ ಅವರು ನನ್ನನ್ನು ಕರೆಯಿರಿ ಎಂದು ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಅವರು ಓಕೆ ಎನ್ನುತ್ತಾ ಮುಂದಿನ ಮಾತನಾಡಿದರು.