ಬೆಂಗಳೂರು: (ಡಿ.24) cylinder Blast: ಮಸೀದಿಯ ಆವರಣದಲ್ಲಿದ್ದ ಗ್ಯಾಸ್ ಸಿಲೆಂಡರ್ ಸ್ಫೋಟ ಗೊಂಡ ಘಟನೆ ಇಂದು ಬೆಂಗಳೂರಿನ ಹೆಬ್ಬಾಳ ಸಮೀಪದಲ್ಲಿರುವ ನಾಗವಾರದಿಂದ ಹೆಬ್ಬಾಳಕ್ಕೆ ತೆರಳುವ ರಸ್ತೆಯಲ್ಲಿರುವ ಮಸೀದಿಯ ಆವರಣದಲ್ಲಿ ನಡೆದಿದೆ.
ಮಸೀದಿಯಲ್ಲಿ ಇಂದು ಪ್ರಾರ್ಥನೆಯಲ್ಲಿ ತೊಡಗಿದ್ದರು. ಇದೇ ವೇಳೆ ಮಸೀದಿಗೆ ಸೇರಿದ ಅಂಗಡಿ ಮಳಿಗೆಗಳಿರುವ ಕಟ್ಟಡದಲ್ಲಿ ಸಿಲೆಂಡರ್ ಸ್ಫೋಟ ಸಂಭವಿಸಿದೆ. ಅನಿಲ ಸೋರಿಕೆಯಾಗಿ ಮಸೀದಿಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಈ ಘಟನೆಯಿಂದ ಮಸೀದಿಯಲ್ಲಿದ್ದ ಜನರು ಹೊರಗೆ ಬಂದು ನೋಡುತ್ತಿದ್ದಂತೆ ಬೆಂಕಿ ಹೆಚ್ಚಾಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಮಸೀದಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ಸ್ಥಳೀಯ ನಿವಾಸಿ ರಹಮತುಲ್ಲಾ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಮಾಲೀಕರಿಗೆ ಹಾಗೂ ಕೆಲಸದ ಸಿಬ್ಬಂದಿಗೆ ಸಣ್ಣ ಮಟ್ಟದ ಗಾಯ ಆಗಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಗ್ಯಾಸ್ ರಿಫೀಲಿಂಗ್ ಹಾಗೂ ಗ್ಯಾಸ್ ಸ್ಟೌವ್ ರಿಪೇರಿ ಮಾಡೋ ಅಂಗಡಿ ಅದಾಗಿದ್ದು, ಬೆಳಗ್ಗೆ 11:30 ರ ಸುಮಾರಿಗೆ ಬ್ಲಾಸ್ಟ್ ಆಗಿದೆ ಎಂದು ರಹಮತುಲ್ಲಾ ನುಡಿದಿದ್ದಾರೆ.
ಇದನ್ನೂ ಓದಿ: Food Delivery Boy:ಫುಡ್ ಡೆಲಿವರಿ ಬಾಯ್ ಮೇಲೆ ಮಹಿಳಾ ಸಿಬ್ಬಂದಿಯ ದರ್ಪ
ಭಯಾನಕ ಸದ್ದಿನೊಂದಿಗೆ ಸ್ಫೋಟದ ಸನ್ನಿವೇಶವನ್ನು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಅದೃಷ್ಟವಂತ ಮನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ.