ಮೈಸೂರಿಗೂ ಕಾಲಿಟ್ಟ ರೂಪಾಂತರಿ ವೈರಸ್!!
ನವದೆಹಲಿ: (ಡಿ.23) omicron Virus: ಭಾರತದಲ್ಲಿ ಒಮಿಕ್ರೋನ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ಪ್ರಕರಣಗಳ ಸಂಖ್ಯೆ 239 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮೈಸೂರಿಗೂ ಲಗ್ಗೆಯಿಟ್ಟ ಓಮಿಕ್ರಾನ್
ಕರ್ನಾಟಕದ ಮೈಸೂರಿನಲ್ಲಿ ಮೊದಲ ರೂಪಾಂತರಿ ವೈರಸ್ ಒಮಿಕ್ರೋನ್ ಪ್ರಕರಣ ವರದಿಯಾಗಿದೆ. 9 ವರ್ಷದ ಬಾಲಕನಿಗೆ ಯಾವುದೇ ಲಕ್ಷಣವಿಲ್ಲದಿದ್ದರೂ ಒಮಿಕ್ರೋನ್ ಪಾಸಿಟಿವ್ ಕಾಣಿಸಿಕೊಂಡಿದೆ. ಬಾಲಕನ ಪ್ರಾರ್ಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಇರುವವರನ್ನು ಪತ್ತೆ ಮಾಡಲಾಗುತ್ತದೆ ಎಂದು ಮೈಸೂರು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಹರಿಯಾಣ ಮತ್ತು ಉತ್ತರಕಾಂಡ ರಾಜ್ಯದಲ್ಲಿ ನೆನ್ನೆ ಮೊದಲ ಒಮಿಕ್ರೋನ್ ವೈರಸ್ ಪತ್ತೆಯಾಗಿತ್ತು. 65 ಪ್ರಕರಣಗಳೊಂದಿಗೆ ಒಮಿಕ್ರೋನ್ ವೈರಸ್ ಅಗ್ರಸ್ಥಾನವನ್ನು ಹೊಂದಿರುವ ರಾಜ್ಯದ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿ ದೆಹಲಿ 57 ಪ್ರಕರಣಗಳು ಮತ್ತು ತೆಲಂಗಾಣದಲ್ಲಿ 24, ಗುಜರಾತಿನಲ್ಲಿ 23, ರಾಜಸ್ಥಾನದಲ್ಲಿ 22 ಹಾಗೂ ಕರ್ನಾಟಕದಲ್ಲಿ 20 ಪ್ರಕರಣಗಳು ವರದಿಯಾಗಿದೆ.
ಇದನ್ನೂ ಓದಿ: Helping Hands:ಬೋನ್ ಮ್ಯಾರೋಯಿಂದ ಬಳಲುತ್ತಿರುವ ಕಂದನಿಗೆ ಸಹಾಯ ಮಾಡಿ
ಗುಜರಾತಿನಲ್ಲಿ ನೆನ್ನೆ ಒಂದೇ ದಿನ 19 ಒಮಿಕ್ರೋನ್ ಪ್ರಕರಣಗಳು ವರದಿಯಾಗಿದೆ. ರಾಜ್ಯದಲ್ಲಿ 23ಕ್ಕೆ ಏರಿಕೆಯಾದ ಪ್ರಕರಣಗಳು ಅಹಮದಾಬಾದ್ನಲ್ಲಿ 5 ಪ್ರಕರಣಗಳು ವರದಿಯಾಗಿದೆ 223 ಪ್ರಕರಣಗಳಲ್ಲಿ ನಾಲ್ವರು ಗುಣಮುಖರಾಗಿದ್ದು ಉಳಿದ 19 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾರ್ವಜನಿಕರು ವೈರಸ್ ಗಳ ಬಗ್ಗೆ ಭಯಬೀತರಾಗದೆ, ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿಬೇಕು ಎಂದಿನಂತೆ ಸಾಮಾಜಿಕ ಅಂತರ ಮಾಸ್ಕ್ ಧರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಲಹೆ ನೀಡಲಾಗಿದೆ