ದಕ್ಷಿಣ ಕನ್ನಡ : (ಡಿ.23) New Guidelines: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ರೂಪಾಂತರಿ ಒಮಿಕ್ರೋನ್ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ನಿಯಂತ್ರಿಸುವ ಸಲುವಾಗಿ ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಸರಳವಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೊಸ ಮಾರ್ಗಸೂಚಿ ಪ್ರಕಟಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: Police Darbar: ಬಿಟ್ಟಿ ಊಟ ಕೊಟ್ಟಿಲ್ಲ ಎಂದು ಕ್ಯಾಷಿಯರ್ ಗೆ ಹೊಡದ ಪೊಲೀಸ್ ಅಧಿಕಾರಿ! ವಿಡಿಯೋ ವೈರಲ್
ಸಾರ್ವಜನಿಕರಿಗೆ ಎಷ್ಟೇ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿ ಹೇಳಿದರು. ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುತ್ತಿಲ್ಲ, ಮಾಸ್ಕ ಧರಿಸುವುದು ಸಾಮಾಜಿಕ ಅಂತರ ಕಾಪಾಡುತ್ತಿರುವುದು ಹೆಚ್ಚಾಗಿದೆ. ಹೀಗೆ ಮುಂದುವರೆದರೆ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬಹುದು.

ಮಾರ್ಗಸೂಚಿಯಲ್ಲಿ ಏನಿದೆ?
- ಚರ್ಚ್ ಆವರಣದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಬೇಕು. ಚರ್ಚ್ ಒಳಗೆ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕು.
- ಕ್ರಿಸ್ಮಸ್ ಆಚರಣೆ ಅಥವಾ ಪ್ರಾರ್ಥನೆ ನಡೆಸಲು ಯಾವುದೇ ಸಾರ್ವಜನಿಕ ಸ್ಥಳ ರಸ್ತೆ ಅಥವಾ ಉದ್ಯಾನವನ ಬಳಸುವಂತಿಲ್ಲ.
- ಪಬ್, ಕ್ಲಬ್, ರೆಸ್ಟೋರೆಂಟ್ ಹೋಟೆಲ್, ಉದ್ಯಾನವನ ಅಥವಾ ಖಾಸಗಿ ಸ್ಥಳಗಳಲ್ಲಿ ಡಿಜೆ ಆರ್ಕೆಸ್ಟ್ರ ಸಮೂಹ ನೃತ್ಯ ಸೇರಿದಂತೆ ಯಾವುದೇ ವಿಶೇಷ ಕಾರ್ಯಕ್ರಮ ನಡೆಸಲು ಅವಕಾಶವಿರುವುದಿಲ್ಲ.
- ಸಿಬ್ಬಂದಿಗಳು ಆರ್ಟಿ ಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ಮತ್ತು ಎರಡು ಡೋಸ್ ಲಸಿಕೆ ಕಡ್ಡಾಯವಾಗಿ ಪಡೆಯುವ ಮೂಲಕ ಕೆಲಸ ಮಾಡಬಹುದು.
- ಹೊಸ ವರ್ಷ ಆಚರಿಸಲು ಸಾರ್ವಜನಿಕ ಸ್ಥಳದಲ್ಲಿ ರಸ್ತೆ ಉದ್ಯಾನವನಗಳು ಆಟದ ಮೈದಾನಗಳನ್ನು ಬಳಸುವ ಹಾಗಿಲ್ಲ.
- ನಗರದ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗೆ ಸಂಬಂಧಿಸಿದಂತೆ ಸಾಮಾಜಿಕ ಅಂತರ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ ತಮ್ಮ ಆವರಣದಲ್ಲಿ ಕಾರ್ಯಕ್ರಮ ಗಳಿಸಲು ಅನುಮತಿ ನೀಡಲಾಗಿದೆ.
- ಅಪಾರ್ಟ್ಮೆಂಟ್ ಆವರಣಗಳಲ್ಲಿ ಯಾವುದೇ ರೀತಿಯ ಗುಂಪು ಕೃತ್ಯಕ್ಕೆ ಹಾಗೂ ಡಿಜೆ, ಡಾನ್ಸ್ ಗಳು ಇನ್ನಿತರ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಜಿಲ್ಲಾಧಿಕಾರಿಯವರ ಆದೇಶದಲ್ಲಿ ತಿಳಿಸಲಾಗಿದೆ.
ಉದ್ಯಾನವನಗಳಲ್ಲಿ, ರಸ್ತೆಗಳಲ್ಲಿ ಸಾಕಷ್ಟು ಜನರು ಮಾತು ಇಲ್ಲದಿರುವ ತಿರುಗಾಡುವುದನ್ನು ಗಮನಿಸಲಾಗಿದೆ. ಕೋವಿಡ್ ವೈರಸ್ ಹೆಚ್ಚುತ್ತಲೇ ಇದ್ದರೂ ಜನರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಸಾಧ್ಯವಾದಷ್ಟು ಹೊರಗಡೆ ತಿರುಗಾಡುವುದನ್ನು ನಿಲ್ಲಿಸಿ ಆರೋಗ್ಯದ ಬಗ್ಗೆ ಗಮನಹರಿಸಿ