ಬೆಂಗಳೂರು: (ಡಿ.23) Covid Vaccination :ಬೆಂಗಳೂರು ನಗರದಲ್ಲಿ ಶೇ 100 ರಷ್ಟು ಮೊದಲ ಡೋಸ್ ಪೂರ್ಣವಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಟ್ವಿಟರ್ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕೋವಿಡ್ ಮಹಾಮಾರಿಯನ್ನು ಓಡಿಸಲು ಇದೊಂದು ಬಲವಾದ ಅಸ್ತ್ರವಾಗಿದ್ದು ಬೆಂಗಳೂರಿನಲ್ಲಿ ಮೊದಲ ಡೋಸ್ ಪೂರ್ಣಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರ ಶೇ.100ರಷ್ಟು ಮೊದಲ ಡೋಸ್ ಲಸಿಕೆ ಪೂರ್ಣಗೊಳಿಸಿದೆ. ಆದ್ರೆ ಇದರ ನಡುವೆ ರಾಜ್ಯದಲ್ಲಿ ಇಂದು ಮತ್ತೆ 5 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರು ಸೇರಿ ರಾಜ್ಯದ ಬೇರೆ ಜಿಲ್ಲೆಯಲ್ಲಿ ಇಂದು 5 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗುವ ಶಂಕೆ ವ್ಯಕ್ತವಾಗಿದೆ. ಒಮಿಕ್ರಾನ್ ಕೇಸ್ ಬಗ್ಗೆ ಸಂಜೆ ವೇಳೆಗೆ ಘೋಷಣೆ ಸಾಧ್ಯತೆ ಇದೆ.
ಈ ಬಗ್ಗೆ ಸಂಜೆ ಒಳಗೆ ಅಧಿಕೃತ ಪಡಿಸುವುದಾಗಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಒಮಿಕ್ರಾನ್ ಶಂಕೆ ಅಂತಾ ಹೇಳಲಾಗ್ತಿದೆ. ಲ್ಯಾಬ್ ರಿಪೋರ್ಟ್ ತರಿಸಿಕೊಂಡು ಖಚಿತಪಡಿಸೋದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: Omicron Virus:ಭಾರತದಲ್ಲಿ ಹೆಚ್ಚುತ್ತಿದೆ ಒಮಿಕ್ರೋನ್ ಪ್ರಕರಣಗಳು! ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ
ಮೈಸೂರಿನಲ್ಲಿ ಮೊದಲ ರೂಪಾಂತರಿ ವೈರಸ್ ಒಮಿಕ್ರೋನ್ ಪ್ರಕರಣ ವರದಿಯಾಗಿದೆ. 9 ವರ್ಷದ ಬಾಲಕನಿಗೆ ಯಾವುದೇ ಲಕ್ಷಣವಿಲ್ಲದಿದ್ದರೂ ಒಮಿಕ್ರೋನ್ ಪಾಸಿಟಿವ್ ಕಾಣಿಸಿಕೊಂಡಿದೆ. ಬಾಲಕನ ಪ್ರಾರ್ಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಇರುವವರನ್ನು ಪತ್ತೆ ಮಾಡಲಾಗುತ್ತದೆ ಎಂದು ಮೈಸೂರು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
Bengaluru Urban (excluding BBMP) achieves 100% vaccination coverage, becomes the first district in Karnataka to be fully vaccinated, tweets state Health Minister K Sudhakar. #COVID19 pic.twitter.com/MMPAAtIoKj
— ANI (@ANI) December 23, 2021